ದೆಹಲಿ ಚುನಾವಣೆಗೂ ಮುನ್ನ AAP ಗೆ ಶಾಕ್: ಪಂಜಾಬ್ ಸಿಎಂ ಭಗವಂತ್ ಮಾನ್ ದೆಹಲಿಯ ಮನೆಯಲ್ಲಿ EC ಶೋಧ

ಪಂಜಾಬ್ ನಂಬರ್ ಪ್ಲೇಟ್ ಹೊಂದಿದ್ದ ವಾಹನವನ್ನು ನವದೆಹಲಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Bhagwant Mann-Atishi
ಭಗವಾನ್ ಮಾನ್-ಆತಿಶಿTNIE
Updated on

ನವದೆಹಲಿ: ಚುನಾವಣಾ ಆಯೋಗದ ತಂಡವೊಂದು ಪಂಜಾಬ್ ಮುಖ್ಯಮಂತ್ರಿ ಭಗವಾನ್ ಮಾನ್ ಅವರ ದೆಹಲಿಯಲ್ಲಿರುವ ಕಪುರ್ತಲಾ ಹೌಸ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ. ಬುಧವಾರದಂದು ದೆಹಲಿ ಪೊಲೀಸರು 'ಪಂಜಾಬ್ ಸರ್ಕಾರ' ಸ್ಟಿಕ್ಕರ್ ಇರುವ ವಾಹನವನ್ನು ವಶಪಡಿಸಿಕೊಂಡಿದ್ದರು. ಕಾರಿನಲ್ಲಿ ನಗದು, ಮದ್ಯ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಕರಪತ್ರಗಳು ಸಹ ಪತ್ತೆಯಾಗಿವೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಂಜಾಬ್ ನಂಬರ್ ಪ್ಲೇಟ್ ಹೊಂದಿದ್ದ ವಾಹನವನ್ನು ನವದೆಹಲಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ದೆಹಲಿಯಲ್ಲಿ ವಶಪಡಿಸಿಕೊಂಡ ಕಾರು ತನಗೆ ಸೇರಿದ್ದು ಎಂಬ ಹೇಳಿಕೆಯನ್ನು ಪಂಜಾಬ್ ಸರ್ಕಾರ ತಿರಸ್ಕರಿಸಿತು. ಕಾರನ್ನು ವಶಪಡಿಸಿಕೊಳ್ಳುವುದು ಪೂರ್ವ ಪ್ರಾಯೋಜಿತ ಎಂದು ಎಎಪಿ ಹೇಳಿಕೆ ನೀಡಿದೆ. ಈ ವಿಷಯದಲ್ಲಿ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದು, ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.

ಪರಿಶೋಧನೆ ವೇಳೆ ಕಾರಿನೊಳಗೆ ನಗದು, ಹಲವಾರು ಮದ್ಯದ ಬಾಟಲಿಗಳು ಮತ್ತು ಆಮ್ ಆದ್ಮಿ ಪಕ್ಷದ ಕರಪತ್ರಗಳು ಪತ್ತೆಯಾಗಿವೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷವು ಈ ಪ್ರಕರಣವು 'ಸಂಪೂರ್ಣವಾಗಿ ನಕಲಿ ಮತ್ತು ಹಾಸ್ಯಾಸ್ಪದ' ಎಂದು ಹೇಳಿದೆ.

ಈ ವಿಷಯದಲ್ಲಿ ದೆಹಲಿ ಮುಖ್ಯಮಂತ್ರಿ ದೆಹಲಿ ಪೊಲೀಸರ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅತಿಶಿ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಟ್ವೀಟ್ ಮಾಡಿದ್ದು, ದೆಹಲಿ ಪೊಲೀಸರು ಭಗವಂತ್ ಮಾನ್ ಅವರ ದೆಹಲಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿಯವರು ಹಗಲು ಹೊತ್ತಿನಲ್ಲಿ ಹಣ, ಶೂ ಮತ್ತು ಕರಪತ್ರಗಳನ್ನು ವಿತರಿಸುತ್ತಿದ್ದಾರೆ. ಅದು ಕಾಣುತ್ತಿಲ್ಲ. ಬದಲಾಗಿ, ಅವರು ಚುನಾಯಿತ ಮುಖ್ಯಮಂತ್ರಿಯ ನಿವಾಸದ ಮೇಲೆ ದಾಳಿ ಮಾಡಲು ತಲುಪುತ್ತಾರೆ. ಅಬ್ಬಾ ಬಿಜೆಪಿ! ದೆಹಲಿಯ ಜನರು 5ರಂದು ತಮ್ಮ ಉತ್ತರವನ್ನು ನೀಡುತ್ತಾರೆ ಎಂದು ಬರೆದಿದ್ದಾರೆ.

Bhagwant Mann-Atishi
ಕೇಜ್ರಿವಾಲ್ ಮನೆ ಮುಂದೆ ಕಸ ಸುರಿದ AAP ಸಂಸದೆ ಸ್ವಾತಿ ಮಲಿವಾಲ್ ಬಂಧನ, ವಿಡಿಯೋ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com