
ನವದೆಹಲಿ: ಹರಿಯಾಣ ಸರ್ಕಾರ ಯಮುನಾ ನದಿಯಲ್ಲಿ "ವಿಷ ಬೆರೆಸುತ್ತಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೀಡಿರುವ ಪ್ರತಿಕ್ರಿಯೆಗೆ ಭಾರತೀಯ ಚುನಾವಣಾ ಆಯೋಗ (ECI) ಅತೃಪ್ತಿ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ನರಮೇಧವನ್ನು ಉಂಟುಮಾಡುವ ಉದ್ದೇಶದಿಂದ ಹರಿಯಾಣ ಸರ್ಕಾರವು ಯಮುನಾ ನದಿಗೆ ವಿಷ ಬೆರೆಸಿದೆ ಎಂದು ದೆಹಲಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀಡಿರುವ ಸಾರ್ವಜನಿಕ ಹೇಳಿಕೆಗೆ ಸಂಬಂಧಪಟ್ಟಂತೆ ನೀಡಿರುವ ನೊಟೀಸ್ ಗೆ ಕೇಜ್ರಿವಾಲ್ ಅವರ ಉತ್ತರವು ಸಂಪೂರ್ಣವಾಗಿ ಮೌನವಾಗಿದೆ ಎಂದು ಇಸಿಐ ಹೇಳಿದೆ.
ನಾಳೆ ಬೆಳಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಇಸಿಐ ಹಲವಾರು ನಿರ್ದಿಷ್ಟ ಅಂಶಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ಕೋರಿದೆ, ವಿಫಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಿದೆ.
ಕೇಜ್ರಿವಾಲ್ ಅವರು ನೊಟೀಸ್ ಗೆ ಉತ್ತರ ನೀಡಿದ್ದರೂ, ಯಮುನಾ ನದಿಗೆ ವಿಷ ಬೆರೆಸಿದ ಆರೋಪದ ಕುರಿತು ಅವರ ಹೇಳಿಕೆಯ ನಿರ್ಣಾಯಕ ವಿಷಯವನ್ನು ಪರಿಹರಿಸಲು ವಿಫಲವಾಗಿದೆ ಎಂದು ಚುನಾವಣಾ ಆಯೋಗದ ಪತ್ರದಲ್ಲಿ ತಿಳಿಸಿದೆ.
ಈ ಹೇಳಿಕೆಯನ್ನು ದೃಢೀಕರಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನು ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದ ಚುನಾವಣಾ ಆಯೋಗ ಹೆಚ್ಚು ವಿವರವಾದ ಉತ್ತರವನ್ನು ಸಲ್ಲಿಸಲು ಕೇಜ್ರಿವಾಲ್‌ಗೆ ಸೂಚಿಸಿದೆ.
ಹರಿಯಾಣ ಸರ್ಕಾರವು ಯಮುನಾ ನದಿಯಲ್ಲಿ ಬೆರೆಸಿದೆ ಎಂದು ಹೇಳಲಾದ ವಿಷದ ಪ್ರಮಾಣ ಮತ್ತು ಸ್ವರೂಪ, ಅದನ್ನು ಪತ್ತೆಹಚ್ಚುವ ವಿಧಾನ, ಸ್ಥಳ ಮತ್ತು ದೆಹಲಿ ಪ್ರದೇಶಕ್ಕೆ ವಿಷಕಾರಿ ನೀರು ಪ್ರವೇಶಿಸುವುದನ್ನು ತಡೆಯುವಲ್ಲಿ ದೆಹಲಿ ಜಲ ಮಂಡಳಿಯ ಎಂಜಿನಿಯರ್‌ಗಳ ಪಾತ್ರದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಯೋಗವು ಕೇಜ್ರಿವಾಲ್ ಅವರನ್ನು ಕೇಳಿದೆ.
Advertisement