ಮಹಾತ್ಮ ಗಾಂಧಿ ಕಾರ್ಯಕ್ರಮವನ್ನು ಮೂಲೆಗೆ ತಳ್ಳಿದ ಸ್ಟ್ಯಾಲಿನ್ ಸರ್ಕಾರ: ತಮಿಳುನಾಡು ರಾಜ್ಯಪಾಲ ರವಿ ಗರಂ!

ಈ ಬಾರಿ ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಕಿತ್ತಾಟಕ್ಕೆ ಕಾರಣವಾಗಿರುವುದು ಮಹಾತ್ಮ ಗಾಂಧಿ ಸ್ಮೃತಿ ದಿನಾಚರಣೆ ಅಂಗವಾಗಿ ನಡೆದಿರುವ ಕಾರ್ಯಕ್ರಮ.
Mahatma Gandhi- MK Stalin
ಮಹಾತ್ಮ ಗಾಂಧಿ-ಎಂಕೆ ಸ್ಟ್ಯಾಲಿನ್online desk
Updated on

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಮತ್ತೊಮ್ಮೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಕಿತ್ತಾಟಕ್ಕೆ ಕಾರಣವಾಗಿರುವುದು ಮಹಾತ್ಮ ಗಾಂಧಿ ಸ್ಮೃತಿ ದಿನಾಚರಣೆ ಅಂಗವಾಗಿ ನಡೆದಿರುವ ಕಾರ್ಯಕ್ರಮ.

ಅಲ್ಲಿ ಆಗಿದ್ದೇನೆಂದರೆ, ತಮಿಳುನಾಡು ಸರ್ಕಾರ ಮಹಾತ್ಮ ಗಾಂಧಿ ಸ್ಮರಣಾರ್ಥ (ಜ.30) ರಂದು ಸಿಟಿ ಮ್ಯೂಸಿಯಂ ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ರಾಜ್ಯಪಾಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'X' ನಲ್ಲಿನ ಪೋಸ್ಟ್‌ನಲ್ಲಿ ಬರೆದಿರುವ ರಾಜ್ಯಪಾಲ ರವಿ "ಗಾಂಧಿ ಮಂಟಪ 1956 ರಲ್ಲಿ ಕೆ. ಕಾಮರಾಜ್ ಅವರು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿರುವ ವಿಶಾಲವಾದ ಭೂಮಿಯಲ್ಲಿ ನಿರ್ಮಿಸಿರುವ ರಾಷ್ಟ್ರಪಿತನ ಭವ್ಯ ಸ್ಮಾರಕವಾಗಿದೆ. ನಗರದ ವಸ್ತುಸಂಗ್ರಹಾಲಯದ ಒಂದು ಮೂಲೆಯಲ್ಲಿ ಗಾಂಧಿ ಸ್ಮಾರಕ ಕಾರ್ಯಕ್ರಮಗಳನ್ನು, ಅವರ ಜನ್ಮದಿನ ಮತ್ತು ಹುತಾತ್ಮ ದಿನವನ್ನು ನಡೆಸುವುದರಲ್ಲಿ ಏನಾದರೂ ಅರ್ಥವಿದೆಯೇ?"

"ರಾಷ್ಟ್ರಪಿತನಿಗೆ ಸರಿಯಾದ ಗೌರವ ಸಲ್ಲಿಸಲು ಮತ್ತು ಗಾಂಧಿ ಮಂಟಪದಲ್ಲಿ ಅಂತಹ ಕಾರ್ಯಕ್ರಮಗಳನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ನಾನು ಪದೇ ಪದೇ ಮಾಡಿದ ವಿನಂತಿಗಳನ್ನು ಮಾಡಿದರೂ ಸಹ, ಮುಖ್ಯಮಂತ್ರಿಗಳು ಮೊಂಡುತನದಿಂದ ವಿನಂತಿ ನಿರಾಕರಣೆ ಮಾಡಿದ್ದಾರೆ. ಗಾಂಧಿ ಅವರು ಬದುಕಿದ್ದಾಗಲೂ ಅವರನ್ನು ದ್ರಾವಿಡ ಸಿದ್ಧಾಂತದ ಅನುಯಾಯಿಗಳು ತೀವ್ರವಾಗಿ ವಿರೋಧಿಸಿದ್ದರು ಮತ್ತು ಗಾಂಧಿ ಅವರನ್ನು ಅಪಹಾಸ್ಯ ಮಾಡುವುದನ್ನು ಮುಂದುವರಿಸಬೇಕೇ?" ಎಂದು ಪ್ರಶ್ನಿಸಿದ್ದಾರೆ.

Mahatma Gandhi- MK Stalin
ಸುಪ್ರೀಂ ಕೋರ್ಟ್‌ ಛೀಮಾರಿ ನಂತರ ಪೊನ್ಮುಡಿಗೆ ಪ್ರಮಾಣ ವಚನ ಬೋಧಿಸಿದ ತಮಿಳುನಾಡು ರಾಜ್ಯಪಾಲ ರವಿ

ಗಾಂಧಿ ಮಂಟಪ ಗಿಂಡಿಯ ರಾಜಭವನದ ಬಳಿಯ ಸರ್ದಾರ್ ಪಟೇಲ್ ರಸ್ತೆಯಲ್ಲಿದೆ ಮತ್ತು ಇದು ಅಣ್ಣಾ ವಿಶ್ವವಿದ್ಯಾಲಯ ಮತ್ತು ಐಐಟಿ-ಮದ್ರಾಸ್ ಕ್ಯಾಂಪಸ್‌ಗಳಿಗೆ ಹತ್ತಿರದಲ್ಲಿದೆ. ಸರ್ಕಾರಿ ವಸ್ತುಸಂಗ್ರಹಾಲಯ ನಗರದ ಇನ್ನೊಂದು ಬದಿಯಲ್ಲಿರುವ ಎಗ್ಮೋರ್‌ನಲ್ಲಿದೆ ಮತ್ತು ಇದು ಫೋರ್ಟ್ ಸೇಂಟ್ ಜಾರ್ಜ್‌ನಿಂದ ಸುಮಾರು 5 ಕಿ.ಮೀ ದೂರದಲ್ಲಿದ್ದು ಸಚಿವಾಲಯವನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com