8.5 ಲಕ್ಷ ನಕಲಿ ಬ್ಯಾಂಕ್ ಖಾತೆಗಳು: ಬ್ಯಾಂಕ್ ಅಧಿಕಾರಿಗಳನ್ನು ತನಿಖೆ ನಡೆಸುತ್ತಿರುವ CBI

ಖಾತೆ ತೆರೆಯುವ ಸಮಯದಲ್ಲಿ ಗ್ರಾಹಕರ ಕರ್ತವ್ಯ ಪಾಲನೆ (CDD) ಮಾಡಲು ಬ್ಯಾಂಕ್ ಅಧಿಕಾರಿಗಳು ವಿಫಲರಾಗಿದ್ದಾರೆ.
CBI
ಸಿಬಿಐ
Updated on

ನವದೆಹಲಿ: ಸೈಬರ್ ಕ್ರೈಂ ಸಿಂಡಿಕೇಟ್‌ಗಳೊಂದಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಿತೂರಿ ನಡೆಸಿ 8.5 ಲಕ್ಷ ನಕಲಿ ಬ್ಯಾಂಕ್ ಖಾತೆಗಳ(Mule account) ಕಾರ್ಯಾಚರಣೆಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಬ್ಯಾಂಕ್ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ.

ಎರಡು ತಿಂಗಳ ಕಾಲ ನಡೆದ ವಿಚಾರಣೆಯ ಸಮಯದಲ್ಲಿ ಸಿಬಿಐಗೆ, ಲೆಕ್ಕವಿಲ್ಲದಷ್ಟು ನಕಲಿ ಬ್ಯಾಂಕ್ ಖಾತೆಗಳು ನಿಗದಿತ ವಿತ್ತೀಯ ಮಿತಿಗಳನ್ನು ಮೀರಿದ ವಹಿವಾಟುಗಳನ್ನು ಪ್ರದರ್ಶಿಸುತ್ತಿದ್ದರೂ, ಅನುಮಾನಾಸ್ಪದ ವಹಿವಾಟು ವರದಿಗಳನ್ನು (STR) ರಚಿಸುವಲ್ಲಿ ವ್ಯವಸ್ಥಿತ ವೈಫಲ್ಯ, ಅನುಮಾನಾಸ್ಪದ ಚಟುವಟಿಕೆಯ ಸ್ಪಷ್ಟ ಸೂಚಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾತೆ ತೆರೆಯುವ ಸಮಯದಲ್ಲಿ ಗ್ರಾಹಕರ ಕರ್ತವ್ಯ ಪಾಲನೆ (CDD) ಮಾಡಲು ಬ್ಯಾಂಕ್ ಅಧಿಕಾರಿಗಳು ವಿಫಲರಾಗಿದ್ದಾರೆ, ಇದು ಆರಂಭಿಕ ಅಪಾಯದ ಮೌಲ್ಯಮಾಪನ ಮತ್ತು ನಿಖರವಾದ ಗ್ರಾಹಕ ಗುರುತಿಸುವಿಕೆಗೆ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಗ್ರಾಹಕರು ಒಡ್ಡುವ ಆರ್ಥಿಕ ಅಪರಾಧದ ಅಪಾಯಗಳನ್ನು ಅಸಮರ್ಪಕವಾಗಿ ನಿರ್ಣಯಿಸಲಾಗಿದೆ ಎಂದು ಸೂಚಿಸುತ್ತದೆ ಎಂದು ಇತ್ತೀಚೆಗೆ ನೋಂದಾಯಿಸಲಾದ ಸಿಬಿಐ ಎಫ್‌ಐಆರ್ ತಿಳಿಸಿದೆ.

CBI
ಹಿರಿಯ ನಾಗರಿಕರೇ ಎಚ್ಚರ: ವಂಚನೆಗೆ ಬಲಿಯಾಗದಿರಿ, ಹಣ-ಆಸ್ತಿ ಕಳೆದುಕೊಳ್ಳದಿರಿ...

ಡಿಜಿಟಲ್ ವಂಚನೆಗಳಿಂದ ಅಕ್ರಮ ಸಕ್ರಮವಾಗಿ ಪರಿವರ್ತಿಸಲು ಬಳಸಲಾಗುವ ಮ್ಯೂಲ್ ಖಾತೆಗಳ ರಹಸ್ಯ ಜಾಲವನ್ನು ಉದ್ದೇಶಪೂರ್ವಕವಾಗಿ ಸುಗಮಗೊಳಿಸಲು ಸೈಬರ್ ಅಪರಾಧ ಸಿಂಡಿಕೇಟ್‌ಗಳು ನಿರ್ಭಯದಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಾಥಮಿಕ ವಿಚಾರಣೆಯ ನಂತರ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ದೇಶಾದ್ಯಂತ ವಿವಿಧ ಬ್ಯಾಂಕ್‌ಗಳ 743 ಶಾಖೆಗಳಲ್ಲಿ 8.50 ಲಕ್ಷ ಖಾತೆಗಳು ಪತ್ತೆಯಾಗಿದ್ದು, ಇದು ಸೈಬರ್ ಅಪರಾಧಗಳ ಕರಾಳತೆಗೆ ಎಚ್ಚರಿಕೆಯ ಗಂಟೆಯಾಗಿದೆ. ಕಳೆದ ವಾರ ಎಫ್‌ಐಆರ್ ಬಗ್ಗೆ ತನಿಖೆ ನಡೆಸಿ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ 10 ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಸಿಬಿಐ ಎಫ್‌ಐಆರ್‌ನಲ್ಲಿ 37 ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com