
ಕೋಲ್ಕತಾ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಕೋಲ್ಕತಾ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಅದು ಅತ್ಯಾಚಾರ ಅಲ್ಲ ಎಂದು ಹೇಳಿರುವ ಆರೋಪಿ ಮೋನೋಜಿತ್ ಮಿಶ್ರಾ ತನ್ನ ದೇಹದ ಮೇಲಿನ love bite ತೋರಿಸಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಹೌದು.. ಕೋಲ್ಕತ್ತಾ ಗ್ಯಾಂಗ್‌ರೇಪ್ ಆರೋಪಿ ಮೋನೋಜಿತ್ ಮಿಶ್ರಾ ಅವರ ವಕೀಲ ರಾಜು ಗಂಗೂಲಿ ಈ ಬಗ್ಗೆ ಮಾತನಾಡಿದ್ದು, ಅದು ಅತ್ಯಾಚಾರವಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ವಕೀಲ ರಾಜು ಗಂಗೂಲಿ, 'ಆರೋಪಿ ಮಿಶ್ರಾನನ್ನು ನಾನು ಭೇಟಿ ಮಾಡಿದ್ದೆ. ಈ ವೇಳೆ ಏನಾಯಿತು ಎಂದು ನಾನು ಅವರನ್ನು ಕೇಳಿದೆ. ಈ ವೇಳೆ ಉತ್ತರಿಸಿದ ಮಿಶ್ರಾ, ನನ್ನ ವಿರುದ್ಧ ಗಂಭೀರ ಆರೋಪಗಳಿವೆ. ಎಲ್ಲರೂ ನನ್ನನ್ನು ಖಳನಾಯಕ ಎಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿದ. ಅಲ್ಲದೆ ತನ್ನ ದೇಹದ ಮೇಲಿದ್ದ ಲವ್ ಬೈಟ್ ಗಾಯದ ಗುರುತನ್ನು ತೋರಿಸಿದ ಎಂದು ಹೇಳಿದ್ದಾರೆ.
ಅಲ್ಲದೆ ಅತ್ಯಾಚಾರಕ್ಕೆ ಸಾಕ್ಷಿಯಾಗಿ ಆರೋಪಿ ಮೋನೋಜಿತ್ ಮಿಶ್ರಾ ದೇಹದ ಮೇಲೆ ಸಂತ್ರಸ್ಥೆಯ ಉಗುರಿನ ಗೀಚಿದ ಗುರುತುಗಳಿವೆ ಎಂದು ಹೇಳಲಾಗಿತ್ತು. ಈ ಬಗ್ಗೆಯೂ ನಾನು ಅವನನ್ನು ಕೇಳಿದೆ. ಆದರೆ ಆತ ತನ್ನ ಶರ್ಟ್ ಬಿಚ್ಚಿ ದೇಹ ತೋರಿಸಿದಾಗ ಆತನ ದೇಹದ ಮೇಲೆ ಯಾವುದೇ ರೀತಿಯ ಉಗುರಿನ ಗುರುತುಗಳು ಇರಲಿಲ್ಲ. ಇದೇ ವೇಳೆ ಕುತ್ತಿಗೆ ಬಳಿ ಲವ್ ಬೈಟ್ (ಕಚ್ಚಿದ ಗುರುತು) ಇತ್ತು. ಈ ಬಗ್ಗೆ ಕೇಳಿದಾಗ ಆತ ಉತ್ತರಿಸುವಷ್ಟರಲ್ಲಿಯೇ ಪೊಲೀಸರು ಆತನನ್ನು ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ.
ಆರೋಪಿ ಫೋನ್ ಪರಿಶೀಲನೆ ಮಾಡಿ
ಇನ್ನು ಆರೋಪಿ ಮಿಶ್ರಾನ ಫೋನ್ ಅನ್ನು ಸಹ ವಶಪಡಿಸಿಕೊಂಡು ವಿಧಿವಿಜ್ಞಾನಕ್ಕೆ ಶೋಧನೆಗೆ ಕಳುಹಿಸಬೇಕು ಮತ್ತು ಕರೆ ದಾಖಲೆಗಳನ್ನು ನ್ಯಾಯಾಲಯದ ಮುಂದೆ ತರಬೇಕು ಎಂದು ವಕೀಲ ರಾಜು ಗಂಗೂಲಿ ಹೇಳಿದ್ದಾರೆ. 'ದಾಖಲೆಗಳನ್ನು ನೋಡಿದ ನಂತರ, ಬಹುಶಃ ಇದು ಅತ್ಯಾಚಾರ ಪ್ರಕರಣವಲ್ಲ ಎಂದು ನನಗೆ ಅನಿಸುತ್ತದೆ. ನಾನು ಇನ್ನೂ ಒಂದು ತೀರ್ಮಾನಕ್ಕೆ ಬಂದಿಲ್ಲ, ಇದು ಅತ್ಯಾಚಾರವೋ ಅಲ್ಲವೋ ಎಂದು ಜುಲೈ 20 ರೊಳಗೆ ನಿಮಗೆ ಹೇಳಲು ಸಾಧ್ಯವಾಗುತ್ತದೆ ಎಂದರು.
ಭಾರತೀಯ ಜನತಾ ಪಕ್ಷದ ಸತ್ಯಶೋಧನಾ ಸಮಿತಿ ಸದಸ್ಯ ಮನನ್ ಕುಮಾರ್ ಮಿಶ್ರಾ ಮಾತನಾಡಿ, 'ಕೋಲ್ಕತ್ತಾದ ಸಾಮೂಹಿಕ ಅತ್ಯಾಚಾರದಿಂದ ಬದುಕುಳಿದವರ ಕುಟುಂಬವನ್ನು ಪೊಲೀಸರು "ಮರೆಮಾಚುತ್ತಿದ್ದಾರೆ" ಮತ್ತು ಜೂನ್ 25 ರಂದು ಕೋಲ್ಕತ್ತಾದ ಕಾನೂನು ಕಾಲೇಜಿನ ಆವರಣದಲ್ಲಿ ನಡೆದ ಘಟನೆಯಲ್ಲಿ ನಾಲ್ಕನೇ ಆರೋಪಿಯಾಗಿರುವ ಭದ್ರತಾ ಸಿಬ್ಬಂದಿಯನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
Advertisement