
ತಿರುವನಂತಪುರಂ: ಕಳೆದ 18 ದಿನಗಳಿಂದ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ (Thiruvananthapuram International Airport) ಅನಾಥವಾಗಿ ನಿಂತಿದ್ದ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನವನ್ನು ಭಾರತ ತನ್ನ C-17 Globemaster ವಿಮಾನದ ಮೂಲಕ ಬ್ರಿಟನ್ ಗೆ ವಾಪಸ್ ಕಳುಹಿಸಲಿದೆ ಎಂದು ಹೇಳಲಾಗಿದೆ.
ಹೌದು.. ಬ್ರಿಟಿಷ್ F-35B ಸ್ಟೆಲ್ತ್ ಫೈಟರ್ ಜೆಟ್ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಲ್ಯಾಂಡಿಂಗ್ ಮಾಡಿದ ಹತ್ತೊಂಬತ್ತು ದಿನಗಳ ನಂತರ ಅದನ್ನು ಬ್ರಿಟನ್ ಗೆ ವಾಪಸ್ ಕಳುಹಿಸಲಾಗುತ್ತಿದೆ. ವಿಮಾನದ ದುರಸ್ತಿಕಾರ್ಯ ಪೂರ್ಣಗೊಳ್ಳದ ಕಾರಣ ಯುನೈಟೆಡ್ ಕಿಂಗ್‌ಡಮ್ ಗೆ ಭಾರತದ C-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನದಲ್ಲಿ ಫೈಟರ್ ಜೆಟ್ ವಿಮಾನವನ್ನು ಏರ್‌ಲಿಫ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಾಗತಿಕ ವಿಮಾನ ವಿಭಾಗದಲ್ಲಿ ಇದು ಅದರ ವರ್ಗದ ಯುದ್ಧವಿಮಾನಕ್ಕೆ ಅಪರೂಪದ ನಡೆಯಾಗಿದೆ. ಕಳೆದ ವಾರ ಬ್ರಿಟಿಷ್ ಹೈಕಮಿಷನ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ತುರ್ತು ಮಾರ್ಗ ಬದಲಾವಣೆ "ಪ್ರತಿಕೂಲ ಹವಾಮಾನ" ದಿಂದ F-35 ಫೈಟರ್ ಜೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಅದರ ಪೈಲಟ್ ಜೂನ್ 15 ರಂದು ತಿರುವನಂತಪುರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದರು. ಆ ಬಳಿಕ ವಿಮಾನದಲ್ಲಿನ "ಎಂಜಿನಿಯರಿಂಗ್ ಸಮಸ್ಯೆ"ಯಿಂದಾಗಿ ಅದನ್ನು ಪುನಃ ಹಾರಿಸಲು ಸಾಧ್ಯವಾಗಿಲ್ಲ ಎಂದು ಹೇಳಿತ್ತು.
"ಯುಕೆ ಎಫ್ -35 ವಿಮಾನವು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್‌ಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಸುರಕ್ಷತೆಗೆ ಆದ್ಯತೆ ನೀಡಿ, ವಿಮಾನವನ್ನು ಭಾರತದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಲ್ಲಿ ಅದು ಸುರಕ್ಷಿತವಾಗಿ ಇಳಿಯಿತು. ನಂತರ ವಿಮಾನವು ನೆಲದ ಮೇಲೆ ಇದ್ದಾಗ ಅದರಲ್ಲಿ ಎಂಜಿನಿಯರಿಂಗ್ ಸಮಸ್ಯೆ ಕಾಣಿಸಿಕೊಂಡಿತು ಎಂದು ಹೈಕಮಿಷನ್ ತಿಳಿಸಿದೆ.
ಅಂತೆಯೇ ವಿಮಾನದ ಆರಂಭಿಕ ಮೌಲ್ಯಮಾಪನಗಳನ್ನು ನಡೆಸಲಾಯಿತು. ಆದರೆ ನಂತರದ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಗಳು ವಿಫಲವಾದವು. ಅಂದಿನಿಂದ ರಾಯಲ್ ನೇವಿ ಯುನೈಟೆಡ್ ಕಿಂಗ್‌ಡಮ್‌ನ ವಿಶೇಷ ಎಂಜಿನಿಯರ್‌ಗಳ ತಂಡವನ್ನು ನಿಯೋಜಿಸಿದೆ, ಅವರು ಸುಧಾರಿತ ಸಮಸ್ಯೆ ನಿರ್ಣಯ ಮತ್ತು ದುರಸ್ತಿ ಉಪಕರಣಗಳೊಂದಿಗೆ ಆಗಮಿಸಿ ವಿಮಾನದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಜೆಟ್ ವಿಮಾನ ರವಾನೆಗೂ ಮುನ್ನ ಭಾರತ ತನ್ನ ವಿಮಾನ ನಿಲ್ದಾಣದ ಪಾರ್ಕಿಂಗ್ ಮತ್ತು ಹ್ಯಾಂಗರ್ ಶುಲ್ಕಗಳು ಸೇರಿದಂತೆ ಎಲ್ಲಾ ಬಾಕಿಗಳನ್ನು ಪಾವತಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
F-35B Fighter Jet ಹೊತ್ತೊಯ್ದ C-17 Globemaster ವಿಮಾನ!
ಇದೀಗ 19 ದಿನಗಳಿಂದ ವಿಮಾನ ನಿಲ್ದಾಣದಲ್ಲಿದ್ದ ರಾಯಲ್ ನೇವಿಯ F-35B Fighter Jet ವಿಮಾನವನ್ನು ಭಾರತೀಯ ವಾಯು ಸೇನೆಯ C-17 Globemaster ವಿಮಾನದ ಮೂಲಕ ಬ್ರಿಟನ್ ಗೆ ರವಾನಿಸಲಾಗುತ್ತಿದೆ.
ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳು, ಭಾರತೀಯ ವಾಯುಪಡೆಯ (IAF) ಸಮನ್ವಯದೊಂದಿಗೆ, ವಿಮಾನ ನಿಲ್ದಾಣದಲ್ಲಿರುವ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (MRO) ಹ್ಯಾಂಗರ್‌ಗೆ ಜೆಟ್ ಅನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ವಿಮಾನದ ದುರಸ್ತಿ ಸಮಯದ ಮುನ್ಸೂಚನೆ ಲಭ್ಯವಿಲ್ಲದಿದ್ದರೂ, ಸ್ಥಳೀಯ ಕಾರ್ಯಾಚರಣೆಗಳಿಗೆ ಕನಿಷ್ಠ ಅಡ್ಡಿ ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೈಕಮಿಷನ್ ಒಪ್ಪಿಕೊಂಡಿದೆ.
ತುರ್ತು ಲ್ಯಾಂಡಿಂಗ್
ಭಾರತ-ಯುಕೆ ನೌಕಾಪಡೆಯ ನಿಯಮಿತ ತರಬೇಚಿ ನಂತರ ಜೂನ್ 15 ರಂದು ಸ್ಥಳೀಯ ಸಮಯ ಬೆಳಿಗ್ಗೆ 9:30 ರ ಸುಮಾರಿಗೆ F-35B Fighter Jet ವಿಮಾನವು ತುರ್ತು ಲ್ಯಾಂಡಿಂಗ್ ಮಾಡಿತು. ವಿಮಾನವು ನಿರೀಕ್ಷೆಗಿಂತ ಕಡಿಮೆ ಇಂಧನ ಮಟ್ಟವನ್ನು ಹೊಂದಿತ್ತು. ಇದು ತುರ್ತು ಲ್ಯಾಂಡಿಂಗ್ ಗೆ ಕಾರಣವಾಯಿತು. ತುರ್ತು ಲ್ಯಾಂಡಿಂಗ್ ಬಳಿಕ ಮರುದಿನವೇ ವಿಮಾನದ ಪೈಲಟ್ ಅನ್ನು ರಾಯಲ್ ನೇವಿ AW101 ಮೆರ್ಲಿನ್ ಹೆಲಿಕಾಪ್ಟರ್ ಮೂಲಕ HMS ಪ್ರಿನ್ಸ್ ಆಫ್ ವೇಲ್ಸ್‌ಗೆ ಮರಳಿದ್ದರು. ಅಂದಿನಿಂದ ಈ ಜೆಟ್ ವಿಮಾನ ತಿರುವನಂತಪುರ ವಿಮಾನ ನಿಲ್ದಾಣದಲ್ಲಿಯೇ ಭದ್ರತೆಯಲ್ಲಿ ನಿಂತಿದೆ.
Advertisement