
ನವದೆಹಲಿ: ಇತ್ತೀಚೆಗೆ ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಹರಿಯಾಣದ 33 ವರ್ಷದ ಯು ಟ್ಯುಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಈ ಹಿಂದೆ ಕೇರಳ ಸರ್ಕಾರದ ಅಧಿಕೃತ ಆಹ್ವಾನದ ಭೇಟಿ ನೀಡಿರುವುದು ತಿಳಿದುಬಂದಿದೆ.
ಕೇರಳ ಪ್ರವಾಸೋದ್ಯಮ ಇಲಾಖೆಯೇ ಕರೆಸಿಕೊಂಡು ಪ್ರಚಾರದ ವಿಡಿಯೋ ಮಾಡಿದ್ದು, ಇಲಾಖೆ ಪರವಾಗಿ ಜ್ಯೋತಿ ಸೇರಿದಂತೆ ಸಾಮಾಜಿಕ ಜಾಲತಾಣದ ಹಲವು ಇನ್ ಫ್ಲುಯೆನ್ಸ್ ರ್ ಗಳು ಕಳೆದರಡು ವರ್ಷಗಳಿಂದ ಕೆಲಸ ಮಾಡಿದ್ದರು.
ಇಡೀ ರಾಜ್ಯದಾದ್ಯಂತ ಓಡಾಡಿ, ವಿಡಿಯೋ ಮಾಡಲು ಇಲಾಖೆಯೇ ಸಂಪೂರ್ಣ ಪ್ರಾಯೋಜಕತ್ವ ವಹಿಸಿತ್ತು. ಮಲ್ಹೋತ್ರಾ ಅವರ ಪ್ರಯಾಣ, ವಾಸ್ತವ್ಯ ಮತ್ತು ಪ್ರಯಾಣದ ವೆಚ್ಚಗಳನ್ನು ಇಲಾಖೆಯೇ ಸಂಪೂರ್ಣವಾಗಿ ಭರಿಸಿದೆ ಎಂದು RTI ಗೆ ಪ್ರತಿಕ್ರಿಯಿಸಲಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ ಅವರು 2024 ಮತ್ತು 2025 ರ ನಡುವೆ ಕಣ್ಣೂರು, ಕೋಝಿಕ್ಕೋಡ್, ಕೊಚ್ಚಿ, ಆಲಪ್ಪುಳ ಮತ್ತು ಮುನ್ನಾರ್ ಪ್ರವಾಸ ಮಾಡಿದ್ದಾರೆ. ಜನವರಿ 2024 ಮತ್ತು ಮೇ 2025 ರ ನಡುವೆ ಹಲವಾರು ಇತರ ಡಿಜಿಟಲ್ ಕ್ರಿಯೆಟರ್ ಜೊತೆಗೆ ಜ್ಯೋತಿ ಮಲ್ಲೋತ್ರಾ ವಿವಿಧೆಡೆ ಭೇಟಿ ನೀಡಿರುವುದು ತಿಳಿದುಬಂದಿದೆ.
ಮಲ್ಹೋತ್ರಾ ಅವರು ಪಾಕಿಸ್ತಾನಕ್ಕೆ ಹಲವು ಬಾರಿ ಪ್ರಯಾಣಿಸಿದ್ದು, ಪಾಕಿಸ್ತಾನದ ಹೈಕಮಿಷನ್ ಸಿಬ್ಬಂದಿ ಸೇರಿದಂತೆ ಪಾಕ್ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಪಾಕ್ ಪರ ಬೇಹುಗಾರಿಕೆ ಆರೋಪದ ಮೇಲೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಬಂಧಿತರಾದ 12 ವ್ಯಕ್ತಿಗಳಲ್ಲಿ ಮಲ್ಹೋತ್ರಾ ಕೂಡ ಒಬ್ಬರಾಗಿದ್ದಾರೆ.
ಜ್ಯೋತಿ ಮಲ್ಹೋತ್ರಾ ಅವರ ಯೂಟ್ಯೂಬ್ ಚಾನೆಲ್, 'ಟ್ರಾವೆಲ್ ವಿತ್ ಜೋ' ನಲ್ಲಿ 487 ವೀಡಿಯೊಗಳನ್ನು ಫೋಸ್ಟ್ ಮಾಡಲಾಗಿದೆ. ಅವುಗಳಲ್ಲಿ ಹಲವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್ ದೇಶಗಳಿಂದ ಪೋಸ್ಟ್ ಮಾಡಲಾಗಿದೆ.
Advertisement