Tamil Nadu Horror: ಆಟೋರಿಕ್ಷಾ ಹರಿದು ಮೂರು ವರ್ಷದ ಬಾಲಕಿ ಸಾವು! Video

ಆಟೋ ಚಾಲಕನು ಚಿಕ್ಕ ಮಗು ಅಡ್ಡ ಬರುವುದನ್ನು ಗಮನಿಸಿಲ್ಲ. ಪರಿಣಾಮ ಮಗುವಿನ ಮೇಲೆ ಆಟೋ ಚಕ್ರ ಹರಿಯುತ್ತದೆ.
3-Yr-Old Girl Crushed To Death
ಆಟೋ ರಿಕ್ಷಾ ಮುಂದೆ ಬಂದ ಮಗು
Updated on

ರಾಮನಾಥಪುರಂ: ಆಟೋ ರಿಕ್ಷಾ ಹರಿದು 3 ವರ್ಷದ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದಿದೆ. ಈ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜುಲೈ 4 ರಂದು ಪಟ್ಟಣದ ಹೃದಯಭಾಗದಲ್ಲಿರುವ ಚಿನ್ನ ಕಡಾಯಿ ಬೀದಿಯ ಕಿರಿದಾದ ವಸತಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಆಟೋ ಚಾಲಕನು ಚಿಕ್ಕ ಮಗು ಅಡ್ಡ ಬರುವುದನ್ನು ಗಮನಿಸಿಲ್ಲ. ಪರಿಣಾಮ ಮಗುವಿನ ಮೇಲೆ ಆಟೋ ಚಕ್ರ ಹರಿಯುತ್ತದೆ. ವಾಹನದ ಹಿಂದಿನ ಚಕ್ರ ಮಗುವಿನ ಮೇಲೆ ಹರಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸ್ಥಳದಲ್ಲಿದ್ದ ಜನರು ಕಿರುಚಾಡುತ್ತಾ ಮಗುವಿನ ಕಡೆಗೆ ಧಾವಿಸುತ್ತಾರೆ. ಆಟೋ ಚಾಲಕ ಕೂಡಾ ಇಳಿದು ಮಗುವಿಗೆ ಸಹಾಯ ಮಾಡಲು ಮುಂದಾಗುತ್ತಾನೆ.

ಅಪಘಾತದಲ್ಲಿ ಅಪ್ರಾಪ್ತ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ನಂತರ ಆಕೆಯ ಸಂಬಂಧಿಕರು ಆಟೋದಲ್ಲಿಯೇ ಸಮೀಪದ ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಅಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

3-Yr-Old Girl Crushed To Death
ಬೆಂಗಳೂರು: ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶ; 11 ವರ್ಷದ ಬಾಲಕಿ ದಾರುಣ ಸಾವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com