Shocking: ಹೆಂಡತಿ ಕಾಟಕ್ಕೆ ಬೇಸತ್ತು 4ನೇ ಅಂತಸ್ತಿನಿಂದ ಕೆಳಗೆ ಹಾರಿದ ಪತಿ, ದುರಂತ ಸಾವು.. Video Viral!

ವಿಡಿಯೋದಲ್ಲಿರುವಂತೆ ಒಬ್ಬ ವ್ಯಕ್ತಿ ಓಡಿ ಬಂದು ಕಟ್ಟಡದಿಂದ ಜಿಗಿಯುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಅದೇ ಸಮಯದಲ್ಲಿ, ಆತನ ಹಿಂದೆಯೇ ಒಬ್ಬ ಮಹಿಳೆ ಕೂಡ ಓಡುತ್ತಾ ಆತನನ್ನು ತಡೆಯಲು ಯತ್ನಿಸುತ್ತಾಳೆ.
After a fight with his wife, husband jumped from the 4th floor
ಮಹಡಿ ಮೇಲಿಂದ ಕೆಳಗೆ ಹಾರಿದ ಪತಿ
Updated on

ನವದೆಹಲಿ: ಪತ್ನಿಯ ವರ್ತನೆಯಿಂದ ಬೇಸತ್ತ ವಿವಾಹಿತ ವ್ಯಕ್ತಿಯೋರ್ವ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ವಿಡಿಯೋ ವೈರಲ್ ಆಗುತ್ತಿದೆ.

ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದ್ದು ಪ್ರಸ್ತುತ ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿರುವಂತೆ ಒಬ್ಬ ವ್ಯಕ್ತಿ ಓಡಿ ಬಂದು ಕಟ್ಟಡದಿಂದ ಜಿಗಿಯುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಅದೇ ಸಮಯದಲ್ಲಿ, ಆತನ ಹಿಂದೆಯೇ ಒಬ್ಬ ಮಹಿಳೆ ಕೂಡ ಓಡುತ್ತಾ ಆತನನ್ನು ತಡೆಯಲು ಯತ್ನಿಸುತ್ತಾಳೆ.

ಆದರೆ ಅವಳು ಅವನನ್ನು ತಡೆಯುವ ಮೊದಲೇ ಆ ವೇಗವಾಗಿ ಕಟ್ಟಡದಿಂದ ಕೆಳಗೆ ಜಿಗಿದು ಬಿಡುತ್ತಾನೆ. ನೋಡ ನೋಡುತ್ತಲೇ ವ್ಯಕ್ತಿ ಕೆಳಗೆ ರಸ್ತೆ ಮೇಲೆ ಬಿದ್ದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಇತ್ತ ವಿಡಿಯೊದಲ್ಲಿ, ಮಹಿಳೆಯ ಕಿರುಚಾಟ ಜೋರಾಗಿದ್ದರೆ, ಪ್ರದೇಶದಲ್ಲಿ ನೆರೆದಿದ್ದ ನಾಗರಿಕರ ಗುಂಪು ಆಘಾತದಿಂದ ಈ ಘಟನೆಯನ್ನು ವೀಕ್ಷಿಸುತ್ತಿದ್ದರು.

After a fight with his wife, husband jumped from the 4th floor
'ಚರ್ಚ್ ಗೆ ತೆರಳಿ ಪ್ರಾರ್ಥಿಸುತ್ತಿದ್ದ Tirumala ಅಧಿಕಾರಿ ಅಮಾನತು': TTD

ಈ ಘಟನೆ ಯಾವಾಗ ಮತ್ತು ಯಾವ ನಗರದಲ್ಲಿ ನಡೆಯಿತು ಎಂಬುದು ತಿಳಿದಿಲ್ಲ. ಆದರೆ ಇದು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಘಟನೆಯ ವೀಡಿಯೊವನ್ನು @Deadlykalesh ಎಂಬ X ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.

ಇನ್ನು ಈ ವಿಡಿಯೋಗೆ ವ್ಯಾಪಕ ಪರ-ವಿರೋಧ ಕಮೆಂಟ್ ಗಳು ವ್ಯಕ್ತವಾಗುತ್ತಿದ್ದು, ಒಬ್ಬ ಬಳಕೆದಾರರು ಕಾಮೆಂಟ್ ಬಾಕ್ಸ್‌ನಲ್ಲಿ "ಏನೇ ಆಗಲಿ, ಇಂತಹ ಹೆಜ್ಜೆ ಇಡಬಾರದಿತ್ತು" ಎಂದು ಹೇಳಿದರೆ, ಮತ್ತೊಬ್ಬ ಬಳಕೆದಾರರು "ಇದು ತುಂಬಾ ದುಃಖಕರ ಘಟನೆ" ಎಂದು ಹೇಳಿದ್ದಾರೆ. ಕೆಲವು ಬಳಕೆದಾರರು "ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com