
ಚಂಡೀಗಢ: ರಾಜಸ್ಥಾನದ ಚುರೂ ಬಳಿ ಬುಧವಾರ ಸಂಭವಿಸಿದ ಭಾರತೀಯ ವಾಯುಪಡೆಯ (IAF) ಜಾಗ್ವಾರ್ ತರಬೇತಿ ವಿಮಾನ ಅಪಫಾತದಲ್ಲಿ ಮೃತಪಟ್ಟ ಇಬ್ಬರು ಪೈಲಟ್ ಗಳ ಪೈಕಿ ಒಬ್ಬರಾದ ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್ ಸಿಂಧು ಅವರು ಒಂದು ತಿಂಗಳ ಹಿಂದಷ್ಟೇ ಜನಿಸಿದ ಮುದ್ದು ಮಗುವಿನ ತಂದೆಯಾಗಿದ್ದರು. ದುರಂತಕ್ಕೂ ಮುನ್ನಾ ಹರಿಯಾಣದಲ್ಲಿ ಕುಟುಂಬ ಆ ಸಂಭ್ರಮಾಚರಣೆಯಲ್ಲಿತ್ತು.
ಹರಿಯಾಣದ ರೋಹ್ಟಕ್‌ನ ಖೇರಿ ಸಾಧ್ ಗ್ರಾಮದ ಸಿಂಧು ಅವರು ಮಂಗಳವಾರ ಸಂಜೆ ವೀಡಿಯೊ ಕರೆ ಮಾಡಿ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. ದುರಂತಕ್ಕೂ ಕೆಲ ಗಂಟೆಗಳ ಮುನ್ನಾ ತಮ್ಮ ಕುಟುಂಬದೊಂದಿಗೆ ಸಂದೇಶ ವಿನಿಮಯ ಮಾಡಿಕೊಂಡಿದ್ದರು. ಸಾಮಾನ್ಯ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದರು ಎನ್ನಲಾಗಿದೆ.
ಗುರುವಾರ ರೋಹ್ಟಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧು ಅವರ ಕುಟುಂಬದ ಕೆಲ ಸದಸ್ಯರು, ತಿಂಗಳ ಹಿಂದೆ ಇದೇ ದಿನದಂದು ಜನಿಸಿದ ಸಿಧು ಮಗನ ತಿಂಗಳ ಹುಟ್ಟುಹಬ್ಬವನ್ನು ಕುಟುಂಬದವರು ಆಚರಿಸುತ್ತಿದ್ದರು. ಆದರೆ ದುರದೃಷ್ಟ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ ಎಂದರು.
ಜಾಗ್ವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮತ್ತೋರ್ವ ಪೈಲಟ್ ರಿಷಿರಾಜ್ ಸಿಂಗ್ (23). ಘಟನೆಯ ನಂತರ ಅಪಘಾತದ ಕಾರಣ ಪತ್ತೆಗೆ ತನಿಖಾ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಐಎಎಫ್ ಹೇಳಿದೆ.
ಸಿಂಧು ತನ್ನ ಪತ್ನಿ, ಒಂದು ತಿಂಗಳ ಮಗ, ಸಹೋದರ, ಸಹೋದರಿ, ಪೋಷಕರು ಮತ್ತು ಅಜ್ಜಿಯರನ್ನು ಅಗಲಿದ್ದಾರೆ ಎಂದು ಅವರ ಅಜ್ಜ ಬಲ್ವಾನ್ ಸಿಂಗ್ ಹೇಳಿದ್ದಾರೆ.
ಅವರಿಗೆ ಒಂದು ಮಗುವಿದೆ, ಇಂದಿಗೆ ಆ ಮಗುವಿಗೆ ಒಂದು ತಿಂಗಳು ತುಂಬಿದೆ. ಮಂಗಳವಾರ ಅವರೊಂದಿಗೆ ವಿಡಿಯೋ ಕಾಲ್ ನಲ್ಲಿ ಅವರೊಂದಿಗೆ ಮಾತನಾಡಿದ್ದೆ ಎಂದು ಅವರು ತಿಳಿಸಿದರು.
Advertisement