
ನವದೆಹಲಿ: ನಕಲಿ ಮತದಾರರನ್ನು ತೆಗೆದುಹಾಕುವ ಗುರಿಯೊಂದಿಗೆ ನಡೆಯುತ್ತಿರುವ ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ರಾಜ್ಯದಲ್ಲಿ ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಎನ್ ಡಿಎ ಮಿತ್ರಪಕ್ಷಗಳಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಎಸ್ ಐಆರ್ ಅಡಿಯಲ್ಲಿ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಬಹುದೆಂಬ ಕಳವಳದಿಂದ ಪಕ್ಷದ ಆಂತರಿಕ ಚುನಾವಣಾ ಪೂರ್ವ ಸಮೀಕ್ಷಾ ತಂಡಗಳ ಮುಂದೆ ಸಾರ್ವಜನಿಕ ಅಸಮಾಧಾನ ಕೇಳಿಬರುತ್ತಿದೆ.
ಎಸ್ ಐಆರ್ ತಪ್ಪು ಹಾದಿಗೆಳೆಯುತ್ತಿದೆ. ಬಿಜೆಪಿಯಿಂದ ಅವರು ಏನನ್ನು ನಿರೀಕ್ಷಿಸುತ್ತಾರೆ ಮತ್ತು ಬಿಜೆಪಿ ತಮ್ಮ ಕನಸುಗಳನ್ನು ನನಸಾಗಿಸಲು ಹೇಗೆ ಸಹಾಯ ಮಾಡಬಹುದು ಎಂದು ತಿಳಿಯಲು ಮತದಾರರಿಗೆ ಫೋನ್ ಕರೆ ಮಾಡಿ ಕೇಳಿದಾಗ, ಹೆಚ್ಚಿನ ಜನರು ಎಸ್ ಐಆರ್ ಮತ್ತು ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಪಕ್ಷದ ದೂರವಾಣಿ ಆಧಾರಿತ ಸಮೀಕ್ಷಾ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.
ಬಿಹಾರ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ದೊಡ್ಡ ಮಟ್ಟದಲ್ಲಿ ಬಂದ್ ಕೆ ಕರೆ ನೀಡಿದ್ದು ಎಸ್ ಐಆರ್ ಪ್ರಕ್ರಿಯೆಗೆ ತೀವ್ರ ಪ್ರತಿಭಟನೆ, ಆಕ್ಷೇಪ ವ್ಯಕ್ತವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ಹೇಗೆ ಸಹಾಯ ಮಾಡುತ್ತೇನೆ ಎಂಬುದರ ಕುರಿತು ಬಿಜೆಪಿ ಟೆಲಿ-ಸಮೀಕ್ಷಾ ತಂಡದಿಂದ ನನಗೆ ಕರೆ ಬಂದಾಗ, ನನಗೆ ಅತೀವ ಸಿಟ್ಟು ಬಂತು. ನನ್ನ ಕುಟುಂಬದ ಅನೇಕ ಸದಸ್ಯರು ಮತದಾರರ ಪಟ್ಟಿಯಲ್ಲಿ ಉಳಿಯಲು ದಾಖಲೆಗಳನ್ನು ಸಲ್ಲಿಸುವಂತೆ ಸ್ಪಿಪ್ ಕಳುಹಿಸಿದ್ದಾರೆ. ನಮ್ಮ ಕುಟುಂಬ ಸದಸ್ಯರ ಹೆಸರು ಕಳೆದ ಒಂದೆರಡು ದಶಕಗಳಿಂದ ಮತದಾರರ ಪಟ್ಟಿಯಲ್ಲಿವೆ, ಈಗ ಬಿಜೆಪಿಯ ಆಜ್ಞೆಯ ಮೇರೆಗೆ ಎಸ್‌ಐಆರ್ ಮಾಡುತ್ತಿರುವ ಚುನಾವಣಾ ಆಯೋಗ, ನನ್ನ ಪೌರತ್ವದ ಪುರಾವೆಯನ್ನು ಕೇಳುತ್ತಿದೆ ಎಂದು ಹಾಜಿಪುರದ ಪ್ರಜೆ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ನಡೆಯುತ್ತಿರುವ ಎಸ್ ಐಆರ್ ಕಾರ್ಯದಿಂದಾಗಿ, ಬಿಜೆಪಿಯಿಂದ ತಮ್ಮ ಅಭಿಪ್ರಾಯಗಳು ಮತ್ತು ನಿರೀಕ್ಷೆಗಳಿಗಾಗಿ ಸಂಪರ್ಕಿಸಲಾದ 10 ಜನರಲ್ಲಿ 6-7 ಮಂದಿ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಚುನಾವಣೆಗೆ ಮುನ್ನ ಬಿಜೆಪಿ ಪಕ್ಷಕ್ಕೆ ಇದು ಒಳ್ಳೆಯ ಸೂಚನೆಯಲ್ಲ ಎಂದು ಸಮೀಕ್ಷಾ ತಂಡದ ಮತ್ತೊಬ್ಬ ಸದಸ್ಯರು ಬಹಿರಂಗಪಡಿಸಿದ್ದಾರೆ.
ಈ ಪ್ರಕ್ರಿಯೆಯಿಂದ ಬಾಧಿತ ಅನೇಕ ನಾಗರಿಕರು, ದೀರ್ಘಕಾಲದಿಂದ ಬಿಜೆಪಿ ಬೆಂಬಲಿಸಿಕೊಂಡು ಬರುತ್ತಿರುವವರು ಸಹ, ತಮ್ಮ ಬೆಂಬಲವನ್ನು ಮರುಪರಿಶೀಲಿಸುವಂತೆ ಎಸ್ ಐಆರ್ ನಲ್ಲಿ ಒತ್ತಾಯಿಸಿದ್ದಾರೆ. ನೀವು ಏನು ಬೇಕಾದರೂ ಮುದ್ರಿಸಬಹುದು, ಬಿಜೆಪಿ ಬೆಂಬಲಿಗರು ಸಹ ನಿಮ್ಮ ಮಾತನ್ನು ನಂಬುವುದಿಲ್ಲ, ಎಸ್ ಐಆರ್ ಮುಂದುವರಿಯುತ್ತದೆ ಎಂದು ಪಾಟ್ನಾದ ಬಿಜೆಪಿ ಕಾರ್ಯಕರ್ತ ನಿರ್ಮಲ್ ಕುಮಾರ್ ಹೇಳುತ್ತಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು, ಪಕ್ಷ ಮತ್ತು ಅದರ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿ (ಆರ್‌ವಿ) ಯ ನಾಯಕರು ಈ ಪ್ರಕ್ರಿಯೆಯ ಬಗ್ಗೆ ಹತಾಶೆ ವ್ಯಕ್ತಪಡಿಸಿದರು. ಜನನ ಅಥವಾ ವಸತಿ ಪ್ರಮಾಣಪತ್ರಗಳನ್ನು ಹೊಂದಿರದ ಅನೇಕ ಗ್ರಾಮೀಣ ಮತದಾರರನ್ನು ಪಟ್ಟಿಯಲ್ಲಿ ಉಳಿಯಲು ಅವುಗಳನ್ನು ಸಲ್ಲಿಸಲು ಕೇಳಲಾಗಿದೆ ಎನ್ನುತ್ತಾರೆ.
ಬಿಜೆಪಿಯ ಶೇಕಡಾ 15ರಿಂದ 20ರಷ್ಟು ಮತದಾರರು ಮತ್ತು ಜೆಡಿಯುನ ಶೇಕಡಾ 10ರಿಂದ 15ರಷ್ಟು ಮತದಾರರು ಈ ಬಾರಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಅಗತ್ಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಅವರ ಬಳಿ ಆಧಾರ್ ಮತ್ತು ಎಪಿಐಸಿಗಳಿವೆ, ಆದರೆ ಅವುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಗಯಾದ ರಾಜೇಶ್ ಕುಮಾರ್ ತಮ್ಮ ಹಳ್ಳಿಯ 50-60 ಬಿಜೆಪಿ ಬೆಂಬಲಿತ ಕುಟುಂಬಗಳಿಗೆ ಅರ್ಹತಾ ದಾಖಲೆಗಳನ್ನು ಒದಗಿಸಲು ಕೇಳಲಾಗಿದೆ ಎನ್ನುತ್ತಾರೆ. ಪರಿಷ್ಕೃತ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ಕೈಬಿಟ್ಟರೆ, ಅವರು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ, ಕೆಲವು ಬಿಜೆಪಿ ಸದಸ್ಯರು, ಬಿಜೆಪಿ ನಾಯಕರು ಸಹ ಇದನ್ನು ಅರ್ಥಮಾಡಿಕೊಂಡಿದ್ದಾರೆ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದಾರೆ, ಆದರೆ ಅವರು ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿರುವುದರಿಂದ ತಮ್ಮ ಪ್ರತಿಭಟನೆಯನ್ನು ಹೊರಹಾಕುತ್ತಿಲ್ಲ ಎಂದರು.
ಈ ಮಧ್ಯೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಹಾರ ಮತದಾರರ ಪಟ್ಟಿಯ ಎಸ್ ಐಆರ್ ಒಂದು 'ಆಂತರಿಕ ಅಭಿಯಾನವಾಗಿದ್ದು, ಇದು ಪ್ರಜಾಪ್ರಭುತ್ವವನ್ನು ಬಲಪಡಿಸಲು ಅನಿವಾರ್ಯ ಎಂದು ಪ್ರತಿಪಾದಿಸಿದರು, ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಶುದ್ಧ ಮತದಾರರ ಪಟ್ಟಿ ತಯಾರಿಸುವುದು ಅನಿವಾರ್ಯ ಎಂದರು.
Advertisement