ರೇಲ್ವೆ ಹಳಿ ಬಳಿ ಮರಿಗೆ ಜನ್ಮ ನೀಡಿದ ಆನೆ; 2 ಗಂಟೆ ಕಾದು ಮುಂದೆ ಸಾಗಿದ ರೈಲು, ಭಾರೀ ಮೆಚ್ಚುಗೆ: Video

ದೇಶದಲ್ಲಿ 3,500 ಕಿ.ಮೀ. ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡಿದ ನಂತರ ರೈಲ್ವೆ ಮತ್ತು ಪರಿಸರ ಸಚಿವಾಲಯವು 110 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿದೆ ಇಂತಹ ಹೃದಯಸ್ಪರ್ಶಿ ಸಂದರ್ಭಗಳಿಗೆ ಸಾಕ್ಷಿಯಾಗುವುದನ್ನು ನೋಡುವುದು ಸಂತಸವಾಗಿದೆ ಎಂದಿದ್ದಾರೆ.
Train stops for 2 hours as elephant gives birth on tracks
ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ
Updated on

ಕಾಡಿನಲ್ಲಿ ಸಾಗುತ್ತಿರುವ ವೇಳೆ ಆನೆಯೊಂದು ತನ್ನ ಮರಿಗೆ ಹಳಿ ಮೇಲೆ ಜನ್ಮ ನೀಡುತ್ತಿದ್ದಾಗ ಅದಕ್ಕೆ ತೊಂದರೆಯಾಗಬಾರದು ಎಂದು ರೈಲು ತಾಳ್ಮೆಯಿಂದ ಎರಡು ಗಂಟೆಗಳ ಕಾಲ ಕಾದ ಹೃದಯಸ್ಪರ್ಶಿ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಇದು ಮಾನವ- ಪ್ರಾಣಿಗಳ "ಸಾಮರಸ್ಯದ" ಸಹಬಾಳ್ವೆಯನ್ನು ಸಂಕೇತಿಸುತ್ತದೆ.

ಪರಿಸರ ಸಚಿವ ಭೂಪೇಂದ್ರ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ರೈಲ್ವೆ ಚಾಲಕ ಮತ್ತು ರೈಲ್ವೆ ಅಧಿಕಾರಿಗಳನ್ನು ಶ್ಲಾಘಿಸಿದರು. ರೈಲು ನಿರ್ವಾಹಕರು ಎರಡು ಗಂಟೆಗಳ ಕಾಲ ತಾಳ್ಮೆಯಿಂದ ಕಾದು ಆನೆ ತನ್ನ ಕರುವಿಗೆ ಜನ್ಮ ನೀಡಿದ ನಂತರ ಮುಂದಕ್ಕೆ ಸಾಗಿತ್ತು ಮಾನವ-ಪ್ರಾಣಿ ನಡುವಿನ ಸಾಮರಸ್ಯವನ್ನು ತೋರಿಸುತ್ತದೆ ಎಂದಿದ್ದಾರೆ.

ದೇಶದಲ್ಲಿ 3,500 ಕಿ.ಮೀ. ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡಿದ ನಂತರ ರೈಲ್ವೆ ಮತ್ತು ಪರಿಸರ ಸಚಿವಾಲಯವು 110 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿದೆ ಇಂತಹ ಹೃದಯಸ್ಪರ್ಶಿ ಸಂದರ್ಭಗಳಿಗೆ ಸಾಕ್ಷಿಯಾಗುವುದನ್ನು ನೋಡುವುದು ಸಂತಸವಾಗಿದೆ ಎಂದಿದ್ದಾರೆ.

ಜಾರ್ಖಂಡ್ ಅರಣ್ಯ ಇಲಾಖೆಯು ಪ್ರಾಣಿಯ ಬಗ್ಗೆ ಸೂಕ್ಷ್ಮತೆಯನ್ನು ತೋರಿಸಿ ಆನೆಯು ತನ್ನ ಮರಿಗೆ ಜನ್ಮ ನೀಡಲು ಅವಕಾಶ ನೀಡಿದ್ದಕ್ಕಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಭಾರೀ ಮೆಚ್ಚುಗೆ ಪಡೆದಿದೆ ಇಂದು ನಾನು ನೋಡಿದ ಅತ್ಯುತ್ತಮ ಸುದ್ದಿಗಳಲ್ಲಿ ಒಂದು. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್, ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆನೆ ಮತ್ತು ಅದರ ಮರಿ ಸುರಕ್ಷಿತವಾಗಿವೆ. ರೈಲ್ವೆ ಸಿಬ್ಬಂದಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಪ್ರಾಣಿಗಳ ಬಗ್ಗೆ ಹೃದಯಸ್ಪರ್ಶಿ ದಯೆಯ ಈ ಘಟನೆ ಹಿಂದೆ ಅಸ್ಸಾಂನಲ್ಲಿಯೂ ಕಂಡುಬಂದಿತ್ತು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹಿಂಡಿನಿಂದ ಬೇರ್ಪಟ್ಟ ಎರಡು ತಿಂಗಳ ಆನೆ ಮರಿ ತನ್ನ ತಾಯಿಯೊಂದಿಗೆ ಮತ್ತೆ ಒಂದಾಯಿತು. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮರಿ ಮೊದಲು ದಿಗ್ಭ್ರಮೆಗೊಂಡು, ನಂತರ ತನ್ನ ಸಂತೋಷದ ತಾಯಿಯೊಂದಿಗೆ ಕಾಡಿಗೆ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ.

ಉದ್ಯಾನವನದ ಬಳಿಯ ಬೊರ್ಜುರಿ ಗ್ರಾಮದಲ್ಲಿ ಸ್ಥಳೀಯರು ಒಂಟಿಯಾಗಿ ಮತ್ತು ದುಃಖಿತರಾಗಿ ಕರುವನ್ನು ಕಂಡುಕೊಂಡರು. ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿ ಪಶುವೈದ್ಯ ಡಾ. ಭಾಸ್ಕರ್ ಚೌಧರಿ ನೇತೃತ್ವದ ರಕ್ಷಣಾ ತಂಡವು ಕರುವನ್ನು ಅದರ ಕುಟುಂಬದೊಂದಿಗೆ ಮತ್ತೆ ಸೇರಿಸಲು ತಕ್ಷಣವೇ ಕಾರ್ಯನಿರ್ವಹಿಸಿತು.

ಈ ಹೃದಯಸ್ಪರ್ಶಿ ಕ್ಷಣವನ್ನು ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ವೀಡಿಯೊದಲ್ಲಿ, ಅರಣ್ಯ ಅಧಿಕಾರಿಗಳಲ್ಲಿ ಒಬ್ಬರು ತಾಯಿ ಆನೆಯ ಸಗಣಿಯಿಂದ ಕರುವನ್ನು ಅದರ ಸೊಂಡಿಲು ಮತ್ತು ಕಾಲುಗಳ ಮೇಲೆ ನಿಧಾನವಾಗಿ ಉಜ್ಜುವುದನ್ನು ಕಾಣಬಹುದು, ಇದು ಯಾವುದೇ ಮಾನವ ವಾಸನೆಯನ್ನು ಮರೆಮಾಡುತ್ತದೆ, ತಾಯಿ ತನ್ನ ಕರುವನ್ನು ಗುರುತಿಸಲು ಸುಲಭವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com