ಒಡಿಶಾ: ಒಂದೇ ಕುಲದಲ್ಲಿ ಮದುವೆ; ಮತ್ತೊಂದು ಬುಡಕಟ್ಟು ದಂಪತಿಯನ್ನು ಎತ್ತುಗಳಂತೆ ನೊಗಕ್ಕೆ ಕಟ್ಟಿ ಶಿಕ್ಷೆ!

ನಾರಾಯಣಪಟ್ಟಣ ಬ್ಲಾಕ್‌ನ ನಡಿಮಿಟಿಕಿ ಗ್ರಾಮದ ಪೆಡೈಟಿಕಿಯ ನರೇಂದ್ರ ಪಿಡಿಕಾ (22) ಮತ್ತು ಅಸಂತಿ ಪಿಡಿಕಾ (21) ಒಂದೇ ಕುಲದವರು ಎನ್ನಲಾಗಿದೆ.
Video grab of the couple being forced to pull a plough in Narayanapatana block
ಪ್ರೀತಿಸಿ ಮದುವೆಯಾದ ಜೋಡಿಗೆ ನೊಗಕ್ಕೆ ಕಟ್ಟಿ ಶಿಕ್ಷೆಯ ಚಿತ್ರ
Updated on

ಬೆರ್ಹಾಂಪುರ್/ಜೇಪೋರ್: ಸಮುದಾಯದ ನಿಯಮಗಳಿಗೆ ವಿರುದ್ಧವಾಗಿ ವಿವಾಹವಾಗಿದ್ದಕ್ಕಾಗಿ ರಾಯಗಢ ಜಿಲ್ಲೆಯ ಘಟನೆ ನಂತರ ಮತ್ತೊಂದು ಬುಡಕಟ್ಟು ದಂಪತಿಯನ್ನು ಎತ್ತುಗಳಂತೆ ನೊಗಕ್ಕೆ ಕಟ್ಟಿ ಶಿಕ್ಷೆ ನೀಡಿರುವ ಘಟನೆ ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ನಾರಾಯಣಪಟ್ಟಣ ಬ್ಲಾಕ್‌ನ ಪೆಡೈಟಿಕಿ ಗ್ರಾಮದ ಬೀದಿಗಳಲ್ಲಿಎತ್ತುಗಳಂತೆ ಮೆರವಣಿಗೆ ಮಾಡಲಾಗಿದೆ.

ನಾರಾಯಣಪಟ್ಟಣ ಬ್ಲಾಕ್‌ನ ನಡಿಮಿಟಿಕಿ ಗ್ರಾಮದ ಪೆಡೈಟಿಕಿಯ ನರೇಂದ್ರ ಪಿಡಿಕಾ (22) ಮತ್ತು ಅಸಂತಿ ಪಿಡಿಕಾ (21) ಒಂದೇ ಕುಲದವರು ಎನ್ನಲಾಗಿದೆ. ಕೊಂಡ್ ಸಮುದಾಯದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ರಥಯಾತ್ರೆ ವೇಳೆ ಆಂಧ್ರಪ್ರದೇಶಕ್ಕೆ ಓಡಿಹೋಗಿದ್ದ ಅವರು ಎರಡು ದಿನಗಳ ಹಿಂದೆ ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ್ದರು. ಆದಾಗ್ಯೂ, ಅವರ ವಿವಾಹಕ್ಕೆ ಸ್ಥಳೀಯ ಸಮುದಾಯ ಒಪ್ಪಿಗೆ ನೀಡಿರಲಿಲ್ಲ. ಅವರಲ್ಲಿ ರಕ್ತ ಸಂಬಂಧದ ವಿವಾಹವನ್ನು ನಿರ್ಬಂಧಿಸಲಾಗಿದೆ.

ಭಾನುವಾರ ಸಭೆ ನಡೆಸಿದ ಗ್ರಾಮದ ಮುಖ್ಯಸ್ಥರು ಮತ್ತು ಜೋಡಿಯ ಕುಟುಂಬಸ್ಥರು, ಮದುವೆ ಒಪ್ಪಿಕೊಳ್ಳುವ ಮುನ್ನಾ ಶುದ್ದೀಕರಣ ಆಚರಣೆಗೆ ನಿರ್ಧರಿಸಿದರು. ಇದರಂತೆ ನೊಗಕ್ಕೆ ದಂಪತಿಯನ್ನು ಕಟ್ಟಿ, ಎತ್ತುಗಳಂತೆ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅಂತಿಮವಾಗಿ ಗ್ರಾಮದಲ್ಲಿನ ದೇವರಿಗೆ ಪೂಜೆ ಸಲ್ಲಿಸಿ, ನರೇಂದ್ರ ಅವರ ಮನೆಯಲ್ಲಿ ನೆಲೆಸಲು ಅವಕಾಶ ನೀಡಲಾಯಿತು.

ಈ ಸಂಪ್ರದಾಯ ಕುರಿತು ಮಾತನಾಡಿದ ನರೇಂದ್ರ ಅವರ ಸೋದರಸಂಬಂಧಿ ಸಂತೋಷ್ ಪಿಡಿಕಾ, ನಮ್ಮ ನಂಬಿಕೆಯಂತೆ ಒಂದೇ ಕುಲದಲ್ಲಿ ಮದುವೆಯಾದರೆ, ಅದು ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಬೆಳೆ ನಾಶ ಮತ್ತು ರೋಗ ರುಜಿನಗಳನ್ನು ಉಂಟುಮಾಡುತ್ತದೆ. ಆ ಪಾಪದಿಂದ ಗ್ರಾಮವನ್ನು ಶುದ್ಧೀಕರಿಸುವುದು ಈ ಆಚರಣೆಯ ಉದ್ದೇಶವಾಗಿದೆ ಎಂದರು.

ಸ್ಥಳೀಯ ವಾರ್ಡ್ ಸದಸ್ಯ ಗುಂಫಾ ಹುಯಿಕಾ ಕೂಡಾ ಅದೇ ದಾಟಿಯಲ್ಲಿ ಮಾತನಾಡಿದರು. ಇಂತಹ ಆಚರಣೆ ಮೂಲಕ ದಂಪತಿ ಹಿರಿಯರಿಂದ ಕ್ಷಮೆಯನ್ನು ಕೋರುತ್ತಾರೆ. ತದನಂತರ ಅವರು ಒಟ್ಟಿಗೆ ವಾಸಿಸಲು ಅವಕಾಶ ದೊರೆಯಲಿದೆ. ಅಸಂತಿಯ ಕುಟುಂಬವು ಬುಡಕಟ್ಟು ಸಂಪ್ರದಾಯಗಳನ್ನು ಗೌರವಿಸುವ ಷರತ್ತಿನ ಮೇಲೆ ಮದುವೆಗೆ ಒಪ್ಪಿಗೆ ನೀಡಿದೆ" ಎಂದು ಹೇಳಿದರು.

Video grab of the couple being forced to pull a plough in Narayanapatana block
ಪಂಚಾಯಿತಿ ಶಿಕ್ಷೆ : ಬೇರೆ ಜಾತಿ ಹುಡುಗನ ಜೊತೆ ಓಡಿ ಹೋಗಿದ್ದ ಯುವತಿಗೆ ಮರಕ್ಕೆ ಕಟ್ಟಿ ಥಳಿತ !

ಈ ಘಟನೆಯು ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ಟೀಕೆಗೆ ಒಳಗಾಗಿದೆ. ಸ್ಥಳೀಯ ಆಡಳಿತ ತಕ್ಷಣ ಮಧ್ಯಪ್ರವೇಶಿಸಬೇಕು ಮತ್ತು ಅಂತಹ ಕೃತ್ಯ ರೂಪಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಆದರೆ ಇಲ್ಲಿಯವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಸ್ಥಳೀಯ ಅಧಿಕಾರಿಗಳು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com