
ಕೊಲ್ಕೋತಾ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೊಲ್ಕತ್ತಾ ಕ್ಯಾಂಪಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮಹತ್ವದ ವಿಷಯವೊಂದನ್ನು ಬಹಿರಂಗ ಪಡಿಸಿದ್ದಾರೆ.
ಆರೋಪಿಯು ಹತ್ತಿರದ ಔಷಧಾಲಯದಿಂದ ನಿದ್ರೆ ಮಾತ್ರೆಗಳನ್ನು ಖರೀದಿಸಿದ್ದಾನೆ, ಅತ್ಯಾಚಾರಕ್ಕೂ ಮುನ್ನ ಮಹಿಳೆಗೆ ನೀಡಲಾದ ತಂಪು ಪಾನೀಯ ಮತ್ತು ಕುಡಿಯುವ ನೀರಿನೊಂದಿಗೆ ನಿದ್ರೆ ಮಾತ್ರೆ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಆದರೆ ಪೊಲೀಸರು ಐಐಎಂ-ಕಲ್ಕತ್ತಾದ ಆರೋಪಿ ವಿದ್ಯಾರ್ಥಿಯ ಹೇಳಿಕೆಗಳಲ್ಲಿ ಹಲವಾರು ವ್ಯತ್ಯಾಸಗಳನ್ನು ಕಂಡು ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯು ನಿದ್ರೆ ಮಾತ್ರೆಗಳನ್ನು ಖರೀದಿಸಿ ಮಹಿಳೆಗೆ ನೀಡಿದ್ದಾನೆ. ಆದರೆ ಕೌನ್ಸೆಲಿಂಗ್‌ಗಾಗಿ ತನ್ನ ಬಳಿಗೆ ಹೋದ ಮಹಿಳೆಗೆ ಇದೆಲ್ಲವನ್ನೂ ಮಾಡುವುದರ ಹಿಂದಿನ ನಿಜವಾದ ಉದ್ದೇಶ ಏನೆಂದು ಆತ ಸ್ಪಷ್ಟಪಡಿಸಲಿಲ್ಲ. ಅವನು ಈ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಂಪು ಪಾನೀಯವನ್ನು ಸೇವಿಸಿದ ನಂತರ, ಮಹಿಳೆ ಅಪರಾಧ ನಡೆದ ಬಾಲಕರ ಹಾಸ್ಟೆಲ್‌ನಲ್ಲಿರುವ ಕೋಣೆಗೆ ಹೋಗಿದ್ದಾರೆ ಎಂದು ತಿಳಿದುಕೊಳ್ಳಲು ಸಾಂದರ್ಭಿಕ ಪುರಾವೆಗಳು ಸಹಾಯ ಮಾಡಿವೆ. ಅಪರಾಧ ಎಸಗಿದ ನಂತರ ಆರೋಪಿಯು ತನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಇಡೀ ಘಟನೆ ಬಗ್ಗೆ ವಿವರಿಸಿದನು. ಸಂಭಾಷಣೆಯ ಸಮಯದಲ್ಲಿ, ಅವನು ಅಪರಾಧ ನಡೆದ ಕೋಣೆಯ ಮುಂಭಾಗದ ವರಾಂಡಾದಲ್ಲಿ ಓಡಾಡುತ್ತಿದ್ದನು ಎಂದು ಅಧಿಕಾರಿ ಹೇಳಿದರು.
ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಮಾತನಾಡಿದ ಪೊಲೀಸರು, ಅವಳು ನಿಜವಾಗಿಯೂ ಮನಶ್ಶಾಸ್ತ್ರಜ್ಞಳೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲವಿತ್ತು ಎಂದು ಅಧಿಕಾರಿ ಹೇಳಿದರು. ಮನಶ್ಶಾಸ್ತ್ರಜ್ಞಳಾಗಿ ಅವಳ ಅರ್ಹತೆಗಳನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಅವಳ ಬಳಿ ಇರಲಿಲ್ಲ. ಅವಳು ಯಾವ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾಳೆ ಎಂಬುದನ್ನು ಅವಳು ಬಹಿರಂಗಪಡಿಸಿಲ್ಲ. ಅವಳ ಕೊಠಡಿ ಮತ್ತು ಅವಳ ಹೆಸರು ಮತ್ತು ಇತರ ವಿವರಗಳನ್ನು ಹೊಂದಿರುವ ಯಾವುದೇ ಪ್ರಿಸ್ಕ್ರಿಪ್ಷನ್ ಬಗ್ಗೆ ನಮಗೆ ಇನ್ನೂ ಮಾಹಿತಿ ಸಿಕ್ಕಿಲ್ಲ" ಎಂದು ಅವರು ಹೇಳಿದರು.
ಸಂತ್ರಸ್ತೆಯ ತಂದೆಯ "ವಿರುದ್ಧವಾದ" ಹೇಳಿಕೆಯ ಬಗ್ಗೆ ಮಾತನಾಡುತ್ತಾ, ಹೇಳಿಕೆಯನ್ನು ಬದಲಾಯಿಸಲು ಕುಟುಂಬವು "ಒತ್ತಡದಲ್ಲಿದೆಯೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬದ ಹೇಳಿಕೆ ಬದಲಾವಣೆಯ ಹಿಂದೆ ಯಾವುದೇ ಹಣಕಾಸಿನ ವ್ಯವಹಾರವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಐಐಎಂ-ಕಲ್ಕತ್ತಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರದ ಆರೋಪದ ತನಿಖೆಗಾಗಿ ಪೊಲೀಸರು ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ನೈಋತ್ಯ ವಿಭಾಗದ ಸಹಾಯಕ ಆಯುಕ್ತರು ಈ ತಂಡದ ನೇತೃತ್ವ ವಹಿಸಿದ್ದಾರೆ ಎಂದು ಅವರು ಹೇಳಿದರು. ನ್ಯಾಯಾಲಯವು ವಿದ್ಯಾರ್ಥಿಯನ್ನು ಜುಲೈ 19 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
Advertisement