
ಚಾಯ್ಗಾಂವ್/ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮನ್ನು ತಾವು 'ರಾಜ' ಅಂದ್ಕೊಂಡಿದ್ದರೂ, ಭ್ರಷ್ಟಾಚಾರಕ್ಕಾಗಿ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಬಿಜೆಪಿ ಮತ್ತು ಚುನಾವಣಾ ಆಯೋಗ, ಮಹಾರಾಷ್ಟ್ರ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಂದ "ಕದ್ದಿದೆ" ಮತ್ತು ಬಿಹಾರದಲ್ಲಿ ಅದನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈಶಾನ್ಯ ರಾಜ್ಯದಲ್ಲಿ ಅಂತಹ ಯಾವುದೇ ಪ್ರಯತ್ನವನ್ನು ತಡೆಯಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
"ಮುಖ್ಯಮಂತ್ರಿ ತಮ್ಮನ್ನು ತಾವು 'ರಾಜ' ಎಂದು ಭಾವಿಸಿದ್ದಾರೆ ಮತ್ತು ದಿನದ 24 ಗಂಟೆ ನಿಮ್ಮ ಸಂಪತ್ತು, ಭೂಮಿಯನ್ನು ಅದಾನಿ ಹಾಗೂ ಅಂಬಾನಿಗೆ ಹಸ್ತಾಂತರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಈಗ ಮುಖ್ಯಮಂತ್ರಿ ಭಯವಾಗುತ್ತಿದೆ. ಟಿವಿಯಲ್ಲಿ ಅವರ ಮುಖವನ್ನು ಹತ್ತಿರದಿಂದ ನೋಡಿ, ಭೀತ ಕಾಣಿಸುತ್ತದೆ" ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಗುವಾಹಟಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಚಾಯ್ಗಾಂವ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ, "ನಿರ್ಭೀತ ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ಜೈಲಿಗೆ ಹಾಕುತ್ತಾರೆ ಎಂದು ಹಿಮಂತ ಶರ್ಮಾ ಅವರಿಗೆ ಗೊತ್ತಿದೆ" ಎಂದರು.
ಮುಖ್ಯಮಂತ್ರಿ ಮತ್ತು ಅವರ ಕುಟುಂಬವನ್ನು ಭ್ರಷ್ಟಾಚಾರಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು. ಮಾಧ್ಯಮಗಳು ಅವರನ್ನು ಜೈಲಿಗೆ ಹಾಕುವುದನ್ನು ತೋರಿಸುತ್ತವೆ ಮತ್ತು ನರೇಂದ್ರ ಮೋದಿ ಅಥವಾ ಅಮಿತ್ ಶಾ ಕೂಡ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
Advertisement