
ಭೋಪಾಲ್: ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕ ಶ್ಯಾಮಲಾಲ್ ಧಕಡ್ ನಿದ್ರೆಯಲ್ಲಿರುವಾಗಲೇ ಹತ್ಯೆ ಮಾಡಲಾಗಿದೆ. ಪಶ್ಚಿಮ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಅವರ ಮನೆಯಲ್ಲಿಯೇ ಶುಕ್ರವಾರ ಈ ಹತ್ಯೆ ಘಟನೆ ನಡೆದಿದೆ.
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅವರ ಮಗ ಚಹಾ ನೀಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಒಂದು ಅಂತಸ್ತಿನ ಟೆರೇಸ್ ಮೇಲೆ ನಿರ್ಮಿಸಲಾದ ಕೊಠಡಿಯೊಂದರಲ್ಲಿ ಹಾಸಿಗೆಯ ಮೇಲೆ ಶವವಾಗಿ ಬಿದ್ದಿದ್ದು, ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ.
ಮರಣೋತ್ತರ ವರದಿಯನ್ನು ಕಾಯಲಾಗುತ್ತಿದೆ. ಅಪರಿಚಿತ ದುಷ್ಕರ್ಮಿಗಳು ಧಕಡ್‌ನ ತಲೆಗೆ ಮಾರಕಾಸ್ತ್ರಗಳಿಂದ ಪದೇ ಪದೇ ದಾಳಿ ಮಾಡಿರುವುದಾಗಿ ತೀವ್ರವಾಗಿ ಗಾಯಗೊಂಡು ಅವರು ಸಾವನ್ನಪ್ಪಿರುವುದಾಗಿ ಸ್ಥಳದಲ್ಲಿ ನಡೆಯುತ್ತಿರುವ ತನಿಖೆಗಳು ಹೇಳುತ್ತಿವೆ.
ಧಕಡ್ ಯಾವಾಗಲೂ ತಮ್ಮ ಮನೆಯ ಮೊದಲ ಅಂತಸ್ತಿನ ಟೆರೆಸ್ ಮೇಲಿನ ಕೊಠಡಿಯಲ್ಲಿ ಮಲಗುತ್ತಿದ್ದರು. ಅದೇ ಕೊಠಡಿಯಲ್ಲಿ ಅವರ ಹತ್ಯೆಯಾಗಿದೆಯ ಮನೆಯ ಆವರಣದಲ್ಲಿ ಅವರ ಕುಟುಂಬ ಶೆಡ್ ವೊಂದನ್ನು ನಿರ್ಮಿಸಿದೆ. ಇದರ ಮೂಲಕ ಅಪರಿಚಿತ ದುಷ್ಕರ್ಮಿಗಳು ಹತ್ತಿ ಧಕಡ್ ಕೊಠಡಿ ತಲುಪಿದ್ದಾರೆ ಎಂದು ಮಂದಸೌರ್ ಎಸ್ ಪಿ ತಿಳಿಸಿದ್ದಾರೆ.
ಭೀಕರ ಹತ್ಯೆ ಘಟನೆಯನ್ನು ಭೇದಿಸಲು ಬಹು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಧಕಡ್ ಅವರು 2021 ರಿಂದ ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದರು. ಸದ್ಯ ಅವರು ಮಲ್ಹಾರ್‌ಗಢ ವಿಧಾನಸಭಾ ಕ್ಷೇತ್ರದ ನಹರ್‌ಗಢ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪಕ್ಷದ ಮಂಡಲದ ಉಪಾಧ್ಯಕ್ಷರಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
Advertisement