ಹಿರಿಯ ನಕ್ಸಲ್ ನಾಯಕ 83 ವರ್ಷದ ಹಜೀಜುಲ್ ಹಕ್ ನಿಧನ; ಬಂಗಾಳದ ಎಡಪಂಥೀಯ ರಾಜಕೀಯದ ಯುಗಾಂತ್ಯ!

ಭಾರತದ ನಕ್ಸಲ್ ದಂಗೆಯ ಕೊನೆಯ ಅತ್ಯುನ್ನತ ನಾಯಕರಲ್ಲಿ ಒಬ್ಬರಾದ ರಾಜಕೀಯ ಚಿಂತಕ ಹಜೀಜುಲ್ ಹಕ್ 83ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
Azizul Haque
ಹಜೀಜುಲ್ ಹಕ್
Updated on

ಕೋಲ್ಕತ್ತಾ: ಭಾರತದ ನಕ್ಸಲ್ ದಂಗೆಯ ಕೊನೆಯ ಅತ್ಯುನ್ನತ ನಾಯಕರಲ್ಲಿ ಒಬ್ಬರಾದ ರಾಜಕೀಯ ಚಿಂತಕ ಹಜೀಜುಲ್ ಹಕ್ 83ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1960 ಮತ್ತು 70ರ ದಶಕಗಳಲ್ಲಿ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಬಂಗಾಳದ ಮೂಲಭೂತವಾದಿ ಎಡಪಂಥೀಯ ಇತಿಹಾಸದ ಪ್ರಕ್ಷುಬ್ಧ, ರಕ್ತಸಿಕ್ತ ಅಧ್ಯಾಯವನ್ನು ಗುರುತಿಸುತ್ತದೆ.

1942ರಲ್ಲಿ ಹೌರಾದಲ್ಲಿ ಜನಿಸಿದ ಹಕ್, ರಾಜಕೀಯ ಶಕ್ತಿ ಬಂದೂಕಿನ ನಳಿಕೆಯಿಂದ ಬೆಳೆಯುತ್ತದೆ ಎಂದು ನಂಬಿದ್ದ ನಕ್ಸಲ್ ನಾಯಕರ ಪೀಳಿಗೆಗೆ ಸೇರಿದವರು. ಸೈದ್ಧಾಂತಿಕ ಮಾರ್ಗದರ್ಶಕ ಚಾರು ಮಜುಂದಾರ್ ಅವರು ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಮಾವೋ ಝೆಡಾಂಗ್ ಅವರ ಘೋಷಣೆಯನ್ನು ಭಾರತದಲ್ಲಿ ಜನಪ್ರಿಯಗೊಳಿಸಿದರು.

ಕವಿ, ರಾಜಕೀಯ ಚಿಂತಕ ಮತ್ತು ಒಮ್ಮೆ ಸಿಪಿಐ(ಎಂಎಲ್)ನ ಎರಡನೇ ಕೇಂದ್ರ ಸಮಿತಿಯ ಮುಖ್ಯಸ್ಥರಾಗಿದ್ದ ಹಕ್, ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯಲ್ಲಿ ಬಿದ್ದು ಕೈ ಮುರಿದ ನಂತರ ಅವರನ್ನು ಐಸಿಯುಗೆ ದಾಖಲಿಸಲಾಯಿತು. ಇಂದು ಮಧ್ಯಾಹ್ನ 2:28ಕ್ಕೆ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

Azizul Haque
ಕೇರಳ ಮಾಜಿ ಸಿಎಂ, ಎಲ್ಲರ ನೆಚ್ಚಿನ ಕಾಮ್ರೇಡ್ VS ಅಚ್ಯುತಾನಂದನ್ ನಿಧನ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಕ್ಸ್ ಅವರಿಗೆ ತೀವ್ರ ಸಂತಾಪ ಸೂಚಿಸಿದ್ದು, ಹಜೀಜುಲ್ ಹಕ್ ಅವರನ್ನು 'ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದಿಗೂ ತಲೆಬಾಗದ ಹೋರಾಟಗಾರ' ಎಂದು ಬಣ್ಣಿಸಿದ್ದಾರೆ. ಹಿರಿಯ ರಾಜಕಾರಣಿ ಹಜೀಜುಲ್ ಹಕ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಹಜೀಜುಲ್ ಹಕ್ ಒಬ್ಬ ಹೋರಾಟಗಾರ, ದೃಢನಿಶ್ಚಯದ ನಾಯಕ. ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದಿಗೂ ತಲೆಬಾಗಲಿಲ್ಲ. ಅವರ ಅಗಲಿದ ಕುಟುಂಬ ಮತ್ತು ಸಹಚರರಿಗೆ ನನ್ನ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com