ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿ ಸ್ಪರ್ಧೆ ಸಾಧ್ಯತೆ!

542 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸದಸ್ಯರ ಬೆಂಬಲವನ್ನು ಹೊಂದಿದ್ದರೆ ಇಂಡಿಯಾ ಒಕ್ಕೂಟ 234 ಸದಸ್ಯರನ್ನು ಹೊಂದಿದೆ.
INDIA bloc leaders
ಇಂಡಿಯಾ ಒಕ್ಕೂಟದ ನಾಯಕರು
Updated on

ನವದೆಹಲಿ: ಜಗದೀಪ್ ಧಂಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲಿಯೇ ಚುನಾವಣೆ ದಿನಾಂಕ ಹೊರಡಿಸುವ ಸಾಧ್ಯತೆಯಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಎನ್ ಡಿಎ ಬಹುಮತ ಹೊಂದಿದ್ದರೂ ಸಹ ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಏನೇ ಇರಲಿ ಪ್ರಬಲ ರಾಜಕೀಯ ಸಂದೇಶ ರವಾನಿಸುವ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂಬುದು ವಿಪಕ್ಷಗಳ ಭಾವನೆಯಾಗಿದೆ ಎನ್ನಲಾಗಿದೆ. ಉಭಯ ಸದನಗಳ ಒಟ್ಟು ಸದಸ್ಯರ ಬಲ 782 ಆಗಿದೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು 392 ಮತಗಳ ಅಗತ್ಯವಿದೆ.

ಒಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. 542 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸದಸ್ಯರ ಬೆಂಬಲವನ್ನು ಹೊಂದಿದ್ದರೆ ಇಂಡಿಯಾ ಒಕ್ಕೂಟ 234 ಸದಸ್ಯರನ್ನು ಹೊಂದಿದೆ.

240 ಸದಸ್ಯರ ಬಲದ ರಾಜ್ಯಸಭೆಯಲ್ಲಿ ಬಿಜೆಪಿ 130 ಸದಸ್ಯರನ್ನು ಹೊಂದಿದೆ. ನಾಮನಿರ್ದೇಶಿತ ಸದಸ್ಯರು NDA ಬಹುತೇಕ ಎನ್ ಡಿಎ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎನ್ನಲಾಗಿದೆ. ಇಂಡಿಯಾ ಒಕ್ಕೂಟ ಮೇಲ್ಮನೆಯಲ್ಲಿ 79 ಸದಸ್ಯರ ಬೆಂಬಲವನ್ನು ಹೊಂದಿದೆ. ಪರಿಣಾಮ ಸಂಸತ್ತಿನಲ್ಲಿ ಎನ್‌ಡಿಎ 423 ಮತ್ತು ಇಂಡಿಯಾ ಒಕ್ಕೂಟ 313 ಸದಸ್ಯರನ್ನು ಹೊಂದಿದೆ.

INDIA bloc leaders
ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ ECI

ಸಂವಿಧಾನದ ಪರಿಚ್ಛೇದ 68 (2) ರ ಪ್ರಕಾರ, ಮರಣ, ರಾಜೀನಾಮೆ ಅಥವಾ ತೆಗೆದುಹಾಕುವಿಕೆ ಅಥವಾ ಇನ್ಯಾವುದೇ ಕಾರಣದಿಂದ ಉಪ ರಾಷ್ಟ್ರಪತಿ ಸ್ಥಾನ ತೆರವಾದ ನಂತರ ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com