ಮುಂಬೈ: ಕಾಲೇಜಿನ ಹೊರಗೆ ಪ್ರಜ್ಞೆ ತಪ್ಪಿ ಬಿದ್ದ 20 ವರ್ಷದ ವಿದ್ಯಾರ್ಥಿನಿ, ಸಾವು

ಎರಡನೇ ವರ್ಷದ ಬಿಎಸ್ಸಿ ಐಟಿ ವಿದ್ಯಾರ್ಥಿನಿ ಹರ್ಷಿತಾ ಪಾಲ್ ಇಂದು ಬೆಳಗ್ಗೆ ಕಂಡಿವಲಿ ಪೂರ್ವದ ನಿರ್ಮಲಾ ಕಾಲೇಜಿನ ಹೊರಗೆ ಕುಸಿದು ಬಿದ್ದಿದ್ದಾಳೆ.
(File pic)
ಸಾಂದರ್ಭಿಕ ಚಿತ್ರonline desk
Updated on

ಮುಂಬೈ: ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಖಾಸಗಿ ಕಾಲೇಜಿನ ಹೊರಗೆ ಶುಕ್ರವಾರ ಪ್ರಜ್ಞೆ ತಪ್ಪಿ ಬಿದ್ದ 20 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ವರ್ಷದ ಬಿಎಸ್ಸಿ ಐಟಿ ವಿದ್ಯಾರ್ಥಿನಿ ಹರ್ಷಿತಾ ಪಾಲ್ ಇಂದು ಬೆಳಗ್ಗೆ ಕಂಡಿವಲಿ ಪೂರ್ವದ ನಿರ್ಮಲಾ ಕಾಲೇಜಿನ ಹೊರಗೆ ಕುಸಿದು ಬಿದ್ದಿದ್ದಾಳೆ ಎಂದು ಸಮತಾ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿನಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ಹೇಳಿದ್ದಾರೆ.

(File pic)
Ahmedabad school Tragedy: 4ನೇ ಮಹಡಿಯಿಂದ ಹಾರಿದ ವಿದ್ಯಾರ್ಥಿನಿ ಸಾವು; CCTV Video

ಹರ್ಷಿತಾ ಪಾಲ್ ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com