ಪವಾಡ ಸದೃಶ ಘಟನೆ: ವಿಷಪೂರಿತ ನಾಗರಹಾವನ್ನು ಕಚ್ಚಿದ ಒಂದು ವರ್ಷದ ಮಗು; ಹಾವು ಸಾವು, ಮೂರ್ಛೆ ಹೋಗಿದ್ದ ಮಗುವಿಗೆ ಏನಾಯ್ತು? Video

ಅತ್ಯಂತ ಧೈರ್ಯಶಾಲಿ ಕೂಡ ಬುಸುಗುಡುವ ವಿಷಪೂರಿತ ನಾಗರಹಾವನ್ನು ನೋಡಿ ಬೆವರಲು ಪ್ರಾರಂಭಿಸುತ್ತಾನೆ. ಆದರೆ ಬಿಹಾರದ ಬೆಟ್ಟಿಯಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಒಂದು ವರ್ಷದ ಮಗು ವಿಷಪೂರಿತ ನಾಗರಹಾವನ್ನು ಕಚ್ಚಿದೆ.
One Year Old Baby Govinda
ಒಂದು ವರ್ಷದ ಮಗು ಗೋವಿಂದಾ
Updated on

ಅತ್ಯಂತ ಧೈರ್ಯಶಾಲಿ ಕೂಡ ಬುಸುಗುಡುವ ವಿಷಪೂರಿತ ನಾಗರಹಾವನ್ನು ನೋಡಿ ಬೆವರಲು ಪ್ರಾರಂಭಿಸುತ್ತಾನೆ. ಆದರೆ ಬಿಹಾರದ ಬೆಟ್ಟಿಯಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಒಂದು ವರ್ಷದ ಮಗು ವಿಷಪೂರಿತ ನಾಗರಹಾವನ್ನು ಕಚ್ಚಿದೆ. ಇದರಿಂದಾಗಿ ಹಾವು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಹಾವನ್ನು ಕಚ್ಚಿದ ಕೆಲವು ಗಂಟೆಗಳ ನಂತರ ಮಗು ಕೂಡ ಮೂರ್ಛೆ ಹೋಯಿತು.

ಈ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಮೊಹ್ಚಿ ಬಂಕಟ್ವಾ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಜೌಲಿಯಾ ಪಿಎಚ್‌ಸಿಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ, ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ರವಾನಿಸಲಾಗಿತ್ತು.

ಮಾಹಿತಿಯ ಪ್ರಕಾರ, ಸುನಿಲ್ ಸಾ ಅವರ ಒಂದು ವರ್ಷದ ಮಗ ಗೋವಿಂದ ನಿನ್ನೆ ಮಧ್ಯಾಹ್ನ ಅವರ ಮನೆಯಲ್ಲಿ ಆಟವಾಡುತ್ತಿದ್ದಾಗ ಎರಡು ಅಡಿ ಉದ್ದದ ನಾಗರಹಾವು ಬಂದಿತ್ತು ಎಂದು ಅಜ್ಜಿ ಮಾಟೇಶ್ವರಿ ದೇವಿ ಹೇಳಿದರು. ಅದನ್ನು ಆಟಿಕೆ ಎಂದು ಭಾವಿಸಿ ಮಗು ಹಾವನ್ನು ಹಿಡಿದುಕೊಂಡು ತನ್ನ ಹಲ್ಲುಗಳಿಂದ ಕಚ್ಚಿದೆ. ಇದಾದ ಕೂಡಲೇ ನಾಗರಹಾವು ಸತ್ತುಹೋಯಿತು. ಮಗುವು ಹಾವನ್ನು ಕಚ್ಚಿ ಎರಡು ತುಂಡುಗಳಾಗಿತ್ತು ಎಂದು ಹೇಳಲಾಗುತ್ತಿದೆ.

One Year Old Baby Govinda
ತವರು ಮನೆಗೆ ಹೋದ ಪತ್ನಿ: ಮಗ, ಮಗಳು, ತಾಯಿ ಜೊತೆ ಸಲ್ಫಾ ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ!

ಬೆಟ್ಟಯ್ಯದ ಜಿಎಂಸಿಎಚ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ದಿವಾಕಾಂತ್ ಮಿಶ್ರಾ, ಮಗುವಿಗೆ ವಿಷಪ್ರಾಶನದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದರು. ಪ್ರಸ್ತುತ ಚಿಕಿತ್ಸೆ ನಡೆಯುತ್ತಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಿದ್ದಾರೆ. ಈ ಘಟನೆಯ ನಂತರ, ಕುಟುಂಬವು ಭಯಭೀತಗೊಂಡಿದೆ. ಅದೇ ಸಮಯದಲ್ಲಿ, ಮಗುವಿನ ಕಡಿತದಿಂದ ಹಾವು ಸಾವನ್ನಪ್ಪಿದ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com