
ನವದೆಹಲಿ: ಗಾಜಾದಲ್ಲಿ ಮುಂದುವರೆದಿರುವ ಇಸ್ರೇಲ್ ಆಕ್ರಮಣ ಅಂತ್ಯಗೊಳ್ಳುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಹಾಗೂ ಅನ್ಯಾಯದ ವಿರುದ್ಧ ನಿಲುವು ತಾಳುವಂತೆ ಭಾರತ ಸರ್ಕಾರಕ್ಕೆ ಮುಸ್ಲಿಂ ಸಂಘ ಸಂಸ್ಥೆಗಳು ಹಾಗೂ ವಿದ್ವಾಂಸರು ಮನವಿ ಮಾಡಿದ್ದಾರೆ.
ಭಾರತ ಐತಿಹಾಸಿಕವಾಗಿ ತುಳಿತಕ್ಕೊಳಗಾದವರ ಜೊತೆಗಿದ್ದು, ಆ ಪರಂಪರೆಯನ್ನು ಪುನರುಚ್ಚರಿಸುವ ಸಮಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇಸ್ರೇಲ್ ಆಕ್ರಮಣ ವಿಚಾರದಲ್ಲಿ ಭಾರತ ಸರ್ಕಾರ ಮತ್ತು ಜಾಗತಿಕ ಶಕ್ತಿಗಳು ಮಧ್ಯಪ್ರವೇಶಿಸುವಂತೆ ಮತ್ತು ಗಾಜಾದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ಪ್ರಮುಖ ಮುಸ್ಲಿಂ ಸಂಘಟನೆಗಳು ಹಾಗೂ ಇಸ್ಲಾಮಿಕ್ ವಿದ್ವಾಂಸಕರು ಜಂಟಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.
ಶಾಂತಿ-ಪ್ರೀತಿಯ ನಾಗರಿಕರಾದ ನಾವು ಗಾಜಾದಲ್ಲಿ ನಡೆಯುತ್ತಿರುವ ತೀವ್ರ ನರಮೇಧ ಮತ್ತು ಮಾನವೀಯ ದುರಂತವನ್ನು ಬಲವಾಗಿ ಖಂಡಿಸುತ್ತೇವೆ. 200 ಮಿಲಿಯನ್ ಭಾರತೀಯ ಮುಸ್ಲಿಮರ ಪರವಾಗಿ ಪ್ಯಾಲೆಸ್ಟೀನಿಯನ್ನರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇವೆ. ಅನ್ಯಾಯದ ವಿರುದ್ಧ ನಿಲ್ಲಲು ಮತ್ತು ಮುಂದುವರಿದ ಇಸ್ರೇಲಿ ಆಕ್ರಮಣವನ್ನು ಕೊನೆಗೊಳಿಸಲು ತ್ವರಿತ ಕ್ರಮ ಕೈಗೊಳ್ಳಲು ಭಾರತ ಸರ್ಕಾರ, ಅಂತರಾಷ್ಟ್ರೀಯ ನಾಯಕರು ಮನವಿ ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
"ಪ್ಯಾಲೆಸ್ತೀನ್ ಜನರ ಮೇಲಿನ ನಿರಂತರ ಆಕ್ರಮಣ ಕ್ರೂರ ನರಮೇಧದ ರೂಪವನ್ನು ಪಡೆದುಕೊಂಡಿದೆ. ಮನೆಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತರ ಶಿಬಿರಗಳನ್ನು ವ್ಯವಸ್ಥಿತವಾಗಿ ನಾಶಪಡಿಸುವ ಮೂಲಕ ಇದು ನಿರೂಪಿಸಲ್ಪಟ್ಟಿದೆ.
ಅಕ್ಟೋಬರ್ 2023 ರಿಂದ ಗಮನಾರ್ಹ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 100,000 ಮುಗ್ಧ ಪ್ಯಾಲೆಸ್ಟೀನಿಯನ್ನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement