Mumbai: ಗೂಗಲ್ ಮ್ಯಾಪ್ ಎಡವಟ್ಟು; ಕಂದಕಕ್ಕೆ ಉರುಳಿದ Audi ಕಾರು! ಮಹಿಳೆ ಪ್ರಾಣಪಾಯದಿಂದ ಪಾರು
ಮುಂಬೈ: ಗೂಗಲ್ ಮ್ಯಾಪ್ ಜನರನ್ನು ದಾರಿ ತಪ್ಪಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ.
ಗೂಗಲ್ ಮ್ಯಾಪ್ ಸೂಚನೆ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಅತ್ಯಾಧುನಿಕ ಹೈ ಎಂಡ್ ಕಾರೊಂದು ಕಂದಕಕ್ಕೆ ಬಿದ್ದಿರುವ ಘಟನೆ ನವಿ ಮುಂಬೈಯಲ್ಲಿ ನಡೆದಿದೆ. ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನ ಬೇಲಾಪುರ ಪ್ರದೇಶದಲ್ಲಿ ಶುಕ್ರವಾರ ನಸುಕಿನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಗೂಗಲ್ ಮ್ಯಾಪ್ ನೆರವಿನಿಂದ ತೋರಿಸಿದ ದಾರಿಯಲ್ಲಿ ಸಾಗಿ ತಪ್ಪಾಗಿ ಏಕಾಏಕಿ ತಿರುವು ಪಡೆದುಕೊಂಡ ಕಾರು ಕಾರು ಸೇತುವೆಯಿಂದ ನದಿಗೆ ಉರುಳಿದೆ.
ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಡಲ ಭದ್ರತಾ ತಂಡದಿಂದ ನೆರವಿನಿಂದ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ಬೇಲಾಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿ ತೇಲುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಆಕೆ ಸುರಕ್ಷಿತವಾಗಿದ್ದು, ಕ್ರೇನ್ ಮೂಲಕ ಕಾರನ್ನು ಹಳ್ಳದಿಂದ ಹೊರತೆಗೆಯಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.
ನವಿ ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಸಲೂನ್ ವ್ಯವಹಾರ ನಡೆಸುತ್ತಿರುವ ಮಹಿಳೆ ತನ್ನ ಕಾರಿನಲ್ಲಿ ಬೇಲಾಪುರದಿಂದ ಉಲ್ವೆ ಮನೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ