
ನವದೆಹಲಿ: ಸಂಸತ್ ಕಲಾಪದಲ್ಲಿ ಆಪರೇಷನ್ ಸಿಂದೂರ್ (Operation Sindoor) ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು, ರಾಹುಲ್ ಗಾಂಧಿ ಬಳಸಿದ ಶಬ್ದದ ಬಗ್ಗೆ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಸಂಸತ್ ನಲ್ಲಿ ರಾಹುಲ್ ಗಾಂಧಿ ಅಸಾಂವಿಧಾನಿಕ ಶಬ್ದ ಪ್ರಯೋಗಿಸಿದ್ದಾರೆ ಎಂಬುದು ನೆಟ್ಟಿಗರ ಆರೋಪವಾಗಿದೆ.
ರಾಹುಲ್ ಗಾಂಧಿಯವರು ತಮ್ಮ ನಾಲಿಗೆ ಜಾರಿದ ತಕ್ಷಣ ತಮ್ಮನ್ನು ತಾವು ಸರಿಪಡಿಸಿಕೊಂಡರು. ಘಟನೆ ನಡೆದಾಗ ಅವರು ಚೀನಾ ಸೇನೆಯಿಂದ ಪಾಕಿಸ್ತಾನಿ ವಾಯುಪಡೆಗೆ ರವಾನೆಯಾಗುತ್ತಿದ್ದ ಮಾಹಿತಿಯ ಬಗ್ಗೆ ಮಾತನಾಡುತ್ತಿದ್ದರು.
ರಾಹುಲ್ ಗಾಂಧಿ Fighting ಪಾಕಿಸ್ತಾನ ಎನ್ನುವಾಗ ಬಾಯ್ತಪ್ಪಿನಿಂದಾಗಿ F**king ಎಂದು ಹೇಳಿದ್ದಾರೆ. ತಕ್ಷಣವೇ ಅವರು ಎಚ್ಚೆತ್ತುಕೊಂಡಿದ್ದು ತಮ್ಮ ಶಬ್ದ ಪ್ರಯೋಗವನ್ನು ಸರಿಪಡಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಬಾಯ್ತಪ್ಪಿನಿಂದ ಸಂಸತ್ ನಲ್ಲಿ ಎಡವಟ್ಟು ಮಾಡಿಕೊಂಡಿರುವುದು ಇದೇ ಮೊದಲೇನೂ ಅಲ್ಲ. 2023 ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕಾಂಗ್ರೆಸ್ಸಿನ 85 ನೇ ಪೂರ್ಣಾಧಿವೇಶನದ ಕೊನೆಯ ದಿನದಂದು ಮಾಡಿದ ಭಾಷಣದಲ್ಲಿ ಅವರು 'ಸತ್ಯಾಗ್ರಹ'ವನ್ನು 'ಸತ್ತಾ' (ಅಧಿಕಾರ) ಪಡೆಯಲು ಇರುವ ಮಾರ್ಗವೆಂದು ಬಣ್ಣಿಸಿದ್ದರು. ಇನ್ನೊಂದು ಘಟನೆಯಲ್ಲಿ, ಕಾಶ್ಮೀರಿ ಪಂಡಿತರೆನ್ನುವ ಬದಲು 'ಪಿಒಕೆಯಿಂದ ಬಂದ ನಿರಾಶ್ರಿತರು ಎಂಬ ಶಬ್ದ ಪ್ರಯೋಗಿಸಿದ್ದರು.
Advertisement