
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ತರುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪಾತ್ರದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮತ್ತೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಇದಕ್ಕೂ ಮೊದಲುಅಮೆರಿಕ ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಭಾರತ- ಪಾಕ್ ಕದನ ವಿರಾಮಕ್ಕೆ ಸಂಬಂಧಿಸ್ದಂತೆ ಟ್ರಂಪ್ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸುತ್ತಿದ್ದಾರೆ ಮತ್ತು ಭಾರತ ಶೇ. 20 ರಿಂದ 25 ರಷ್ಟು ಹೆಚ್ಚಿನ ಯುಎಸ್ ಸುಂಕಗಳನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಗಾಂಧಿ, "ಇದು ಸ್ಪಷ್ಟವಾಗಿದೆ, ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿಲ್ಲ. ಏನಾಯಿತು ಎಂಬುದು ಸ್ಪಷ್ಟವಾಗಿದೆ. ಎಲ್ಲರಿಗೂ ತಿಳಿದಿದೆ, ಅವರು ಅದನ್ನು ಹೇಳಲು ಸಾಧ್ಯವಿಲ್ಲ. ಅದು ವಾಸ್ತವ." ಎಂದು ತಿಳಿಸಿದ್ದಾರೆ.
ಪ್ರಧಾನಿ ಅದನ್ನು ಹೇಳಿದರೆ, ಅವರು (ಟ್ರಂಪ್) ಬಹಿರಂಗವಾಗಿ ಹೇಳುತ್ತಾರೆ ಮತ್ತು ಸತ್ಯವನ್ನು ಬಹಿರಂಗಪಡಿಸುತ್ತಾರೆ, ಆದ್ದರಿಂದ ಪ್ರಧಾನಿ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಟ್ರಂಪ್ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗಾಂಧಿ ಆರೋಪಿಸಿದ್ದಾರೆ.
"ಈಗ, ಯಾವ ರೀತಿಯ ವ್ಯಾಪಾರ ಒಪ್ಪಂದ ನಡೆಯುತ್ತದೆ ಎಂದು ನೀವು ನೋಡುತ್ತೀರಿ" ಎಂದು ಅವರು ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಟ್ರಂಪ್ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸುತ್ತಿರುವ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, "ಪ್ರಧಾನಿ ಮತ್ತು ವಿದೇಶಾಂಗ ಸಚಿವರು ಎಚ್ಚರಿಕೆಯಿಂದ ಬಳಸುವ ಪದಗಳನ್ನು ನೀವು ಕೇಳಿದರೆ, ಅವು ಅಸ್ಪಷ್ಟವಾಗಿವೆ. ಅವರು ಅದನ್ನು ನೇರವಾಗಿ ಹೇಳಬೇಕು. ರಾಹುಲ್ ಗಾಂಧಿ ನಿನ್ನೆಯೂ ಸಹ, ಅವರು (ಮೋದಿ) ಅಮೆರಿಕದ ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಬೇಕು. ಅವರು ಅದನ್ನು ಸಂಸತ್ತಿನಲ್ಲಿ ಹೇಳಬೇಕು" ಎಂದು ಆಗ್ರಹಿಸಿದ್ದರು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಂಪ್ ಅವರಿಗೆ ಸುಳ್ಳು ಹೇಳುತ್ತಿದ್ದಾರೆ ಮತ್ತು "ದಾಲ್ ಮೇ ಕುಚ್ ಕಲಾ ಹೈ, ಏನೋ ಅನುಮಾನಾಸ್ಪದವಾಗಿದೆ" ಆದರೆ ಅದನ್ನು ಹೇಳುವ ಧೈರ್ಯ ಪ್ರಧಾನಿಗೆ ಇಲ್ಲ ಎಂದು ಆರೋಪಿಸಿದ್ದರು.
"ಮಾತುಕತೆಯಲ್ಲಿ ಮೂರನೇ ವ್ಯಕ್ತಿಯ ಯಾವುದೇ ರೀತಿಯ ಮಧ್ಯಸ್ಥಿಕೆಯನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ ಎಂಬುದು ನಮ್ಮ ನೀತಿಯಾಗಿದೆ ಮತ್ತು ಅದು ಇಂದಿಗೂ ನಮಗೆ ಸ್ವೀಕಾರಾರ್ಹವಲ್ಲ. ಅವರು ಏಕೆ ಒಪ್ಪಿಕೊಂಡರು, ಕಾರಣಗಳೇನು, ಅವರು ದೇಶಕ್ಕೆ ಹೇಳಬೇಕು" ಎಂದು ಖರ್ಗೆ ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಗ್ರಹಿಸಿದ್ದಾರೆ.
"ಅವರು (ಮೋದಿ) ತಮ್ಮ ಎರಡು ಗಂಟೆಗಳ ಭಾಷಣದಲ್ಲಿ ಒಮ್ಮೆಯೂ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಅವರು ಟ್ರಂಪ್ ಅವರ ಹೇಳಿಕೆಗಳನ್ನು ಖಂಡಿಸಬೇಕಿತ್ತು ಮತ್ತು ಅವರು ದೇಶದ ಚಿತ್ರಣವನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬೇಕಿತ್ತು" ಎಂದು ಖರ್ಗೆ ಹೇಳಿದರು.
ಮಂಗಳವಾರ ಲೋಕಸಭೆಯಲ್ಲಿ ನಡೆದ ಯಾವುದೇ ನಿರ್ಬಂಧವಿಲ್ಲದ ವಾಗ್ದಾಳಿಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭಾರತ-ಪಾಕಿಸ್ತಾನ ಕದನ ವಿರಾಮ ಹೇಳಿಕೆಗಳನ್ನು ಸ್ಪಷ್ಟವಾಗಿ ಖಂಡಿಸಲು ಪ್ರಧಾನಿ ಮೋದಿಯವರನ್ನು ಸವಾಲು ಹಾಕಿದ್ದರು.
Advertisement