Afzal Guru ಗಲ್ಲು ಶಿಕ್ಷೆ ವಿವಾದ: 'ಬರೀ ಸುಳ್ಳು, ಮಾಹಿತಿ ತಿರುಚೋದು..'; Amit Shah ವಿರುದ್ಧ P Chidambaram ಕೆಂಡಾಮಂಡಲ!

ಅಮಿತ್ ಶಾ ರಾಜ್ಯಸಭೆಯಲ್ಲಿ ಮಾಡಿದ್ದ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, 'ಸುಳ್ಳು ಮತ್ತು ಸತ್ಯಗಳ ವಿರೂಪಗೊಳಿಸುವಿಕೆ' ಎಂದು ಕಿಡಿಕಾರಿದ್ದಾರೆ.
P Chidambaram slams Amit shah
ಪಿ ಚಿದಂಬರಂ
Updated on

ನವದೆಹಲಿ: ಸಂಸತ್ ದಾಳಿ ಪ್ರಕರಣ ಅಪರಾಧಿ ಉಗ್ರಗಾಮಿ ಅಫ್ಜಲ್ ಗುರುವಿನ ಮರಣದಂಡನೆ ವಿಳಂಬಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳಿಗೆ ಕೆಂಡಾಮಂಡಲರಾಗಿರುವ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, 'ಬರೀ ಸುಳ್ಳು.. ಮಾಹಿತಿ ತಿರುಚೋದು' ಎಂದು ಕಿಡಿಕಾರಿದ್ದಾರೆ.

ಸಂಸತ್ ದಾಳಿ ಪ್ರಕರಣ ಅಪರಾಧಿ ಉಗ್ರಗಾಮಿ ಅಫ್ಜಲ್ ಗುರುವಿನ ಮರಣದಂಡನೆ ವಿಳಂಬಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾಡಿದ್ದ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, 'ಸುಳ್ಳು ಮತ್ತು ಸತ್ಯಗಳ ವಿರೂಪಗೊಳಿಸುವಿಕೆ' ಎಂದು ಕಿಡಿಕಾರಿದ್ದಾರೆ.

ಪಿ ಚಿದಂಬರಂ ಗೃಹ ಸಚಿವರಾಗಿರುವವರೆಗೆ ಗುರುವಿಗೆ ಮರಣದಂಡನೆ ವಿಧಿಸಲಾಗುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದಾರೆ.

'ಪಿ. ಚಿದಂಬರಂ ಗೃಹ ಸಚಿವರಾಗಿರುವವರೆಗೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ' ಎಂಬ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವ ಹೇಳಿಕೆ ಪ್ರಚೋದನಾತ್ಮಕ, ಸುಳ್ಳು ಮತ್ತು ವಿರೂಪತೆಯ ಮಿಶ್ರಣವಾಗಿದೆ" ಎಂದು ಚಿದಂಬರಂ ಕಿಡಿಕಾರಿದ್ದಾರೆ.

P Chidambaram slams Amit shah
2008 ಮಾಲೆಗಾಂವ್ ಸ್ಫೋಟ ಪ್ರಕರಣ: BJP ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿ 7 ಆರೋಪಿಗಳು ಖುಲಾಸೆ

ಈ ಕುರಿತು ಸ್ಪಷ್ಟನೆ ನೀಡಿರುವ ಚಿದಂಬರಂ, ಅಫ್ಜಲ್ ಗುರು ಅವರ ಪತ್ನಿ ಅಕ್ಟೋಬರ್ 2006 ರಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಅಂತಿಮವಾಗಿ ಫೆಬ್ರವರಿ 3, 2013 ರಂದು ತಿರಸ್ಕರಿಸಲಾಯಿತು.

ಬಳಿಕ ಅಫ್ಜಲ್ ಗುರು ನನ್ನು ಫೆಬ್ರವರಿ 9, 2013 ರಂದು ಗಲ್ಲಿಗೇರಿಸಲಾಯಿತು. ನಾನು ಡಿಸೆಂಬರ್ 1, 2008 ರಿಂದ ಜುಲೈ 31, 2012 ರವರೆಗೆ ಗೃಹ ಸಚಿವನಾಗಿದ್ದೆ. ಇಡೀ ಅವಧಿಯಲ್ಲಿ, ಕ್ಷಮಾದಾನ ಅರ್ಜಿಯು ರಾಷ್ಟ್ರಪತಿಗಳ ಮುಂದೆ ಬಾಕಿ ಇತ್ತು" ಎಂದು ಅವರು ಮಾಹಿತಿ ನೀಡಿದರು.

ಕಾನೂನು ಕಾರ್ಯವಿಧಾನವನ್ನು ಉಲ್ಲೇಖಿಸಿದ ಚಿದಂಬರಂ, "ಕ್ಷಮಾದಾನ ಅರ್ಜಿಯು ನಿರ್ಧಾರವಾಗುವವರೆಗೆ ಮರಣದಂಡನೆಯನ್ನು ಜಾರಿಗೊಳಿಸಲಾಗುವುದಿಲ್ಲ ಎಂದು ಕಾನೂನು ಸ್ಪಷ್ಟವಾಗಿದೆ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com