ಭಾರತದ ಬಗ್ಗೆ ಟ್ರಂಪ್ ಆಧಾರರಹಿತ ಆರೋಪ; ಈಗಲೂ ಮೋದಿ ಮೌನವಾಗಿರುತ್ತಾರೆಯೇ?: ಮಲ್ಲಿಕಾರ್ಜುನ ಖರ್ಗೆ

ನಮಗೆ ರಾಷ್ಟ್ರವೇ ಮೊದಲು ಮತ್ತು ನಾವು ಯಾವಾಗಲೂ ರಾಷ್ಟ್ರದೊಂದಿಗೆ ಇರುತ್ತೇವೆ ಎಂದು ಖರ್ಗೆ ಪ್ರತಿಪಾದಿಸಿದರು.
Narendra Modi - Mallikarjun Kharge
ನರೇಂದ್ರ ಮೋದಿ - ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಹೇಳಿಕೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ 'ಮೌನ ವ್ರತ' ಆಚರಿಸಿದ್ದಾರೆ. ಇದೀಗ ಭಾರತದ ವಿರುದ್ಧ ಅಮೆರಿಕದ ನಾಯಕ ಮಾಡಿದ ಆಧಾರರಹಿತ ಆರೋಪಗಳ ಬಗ್ಗೆಯೂ ಅವರು ಮೌನವಾಗಿರುತ್ತಾರೆಯೇ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಶ್ನಿಸಿದ್ದಾರೆ.

ನಮಗೆ ರಾಷ್ಟ್ರವೇ ಮೊದಲು ಮತ್ತು ನಾವು ಯಾವಾಗಲೂ ರಾಷ್ಟ್ರದೊಂದಿಗೆ ಇರುತ್ತೇವೆ ಎಂದು ಖರ್ಗೆ ಪ್ರತಿಪಾದಿಸಿದರು.

ಭಾರತ ಮತ್ತು ರಷ್ಯಾ ನಡುವಿನ ನಿಕಟ ಸಂಬಂಧಕ್ಕಾಗಿ ಟ್ರಂಪ್ ಮತ್ತೊಮ್ಮೆ ಕಟುವಾದ ವಾಗ್ದಾಳಿ ನಡೆಸಿದ್ದು, ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ ಬಳಿಕ ಹೇಳಿಕೆ ನೀಡಿದ್ದಾರೆ.

ರಷ್ಯಾ ಮತ್ತು ಭಾರತದ ವಿರುದ್ಧ ಕಿಡಿಕಾರಿರುವ ಡೊನಾಲ್ಡ್ ಟ್ರಂಪ್, 'ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ. ಭಾರತ ಮತ್ತು ರಷ್ಯಾ ಈಗಾಗಲೇ 'ಸತ್ತಿರುವ' ತಮ್ಮ ಆರ್ಥಿಕತೆಯನ್ನು ಇನ್ನಷ್ಟು ನೆಲಕಚ್ಚುವಂತೆ ಮಾಡಿಕೊಳ್ಳುತ್ತವೆ. ಭಾರತದೊಂದಿಗೆ ನಾವು ಅತ್ಯಂತ ಕಡಿಮೆ ವ್ಯಾಪಾರವನ್ನು ಮಾಡಿದ್ದೇವೆ. ಅಮೆರಿಕದ ಉತ್ಪನ್ನಗಳಿಗೆ ಇತರ ರಾಷ್ಟ್ರಗಳು ವಿಧಿಸುವ ತೆರಿಗೆಗಿಂತ ಭಾರತ ವಿಧಿಸುವ ಸುಂಕ ಅತಿ ಹೆಚ್ಚಾಗಿದೆ' ಎಂದು ಹೇಳಿದ್ದಾರೆ.

X ನಲ್ಲಿ ಪೋಸ್ಟ್ ಮಾಡಿದ ಖರ್ಗೆ, 'ಕದನ ವಿರಾಮದ ಕುರಿತು ಡೊನಾಲ್ಡ್ ಟ್ರಂಪ್ ಅವರ ಘೋಷಣೆಗಳ ಕುರಿತು ಮೋದಿ ಅವರು ಸಂಸತ್ತಿನಲ್ಲಿ 'ಮೌನ ವ್ರತ' ಆಚರಿಸಿದ್ದರು. ಭಾರತದ ಬಗ್ಗೆ ಟ್ರಂಪ್ ಮಾಡಿದ ಆಧಾರರಹಿತ ಆರೋಪಗಳ ಬಗ್ಗೆಯೂ ಮೋದಿ ಅವರು ಮೌನವಾಗಿರುತ್ತಾರೆಯೇ? ನರೇಂದ್ರ ಮೋದಿ ಜಿ, ನಮಗೆ ರಾಷ್ಟ್ರ ಮೊದಲು ಮತ್ತು ನಾವು ಯಾವಾಗಲೂ ರಾಷ್ಟ್ರದೊಂದಿಗೆ ಇರುತ್ತೇವೆ' ಎಂದು ಹೇಳಿದ್ದಾರೆ.

'ಟ್ರಂಪ್ ಭಾರತದ ಮೇಲೆ ಶೇ 25 ರಷ್ಟು ಸುಂಕ ಮತ್ತು ದಂಡ ವಿಧಿಸಿದ್ದಾರೆ. ಇದು ದೇಶದ ವ್ಯಾಪಾರದ ಮೇಲೆ ಹಾನಿ ಮಾಡುತ್ತದೆ; ಎಂಎಸ್‌ಎಂಇಗಳು ಮತ್ತು ರೈತರು ಸಹ ಪ್ರತಿಕೂಲ ಪರಿಣಾಮ ಎದುರಿಸುತ್ತಾರೆ. ಅನೇಕ ಕೈಗಾರಿಕೆಗಳು ಭಾರಿ ನಷ್ಟವನ್ನು ಅನುಭವಿಸುತ್ತವೆ. ನಿಮ್ಮ ಮಂತ್ರಿಗಳು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ತಿಂಗಳುಗಳಿಂದ ಮಾತನಾಡುತ್ತಿದ್ದಾರೆ. ಅವರಲ್ಲಿ ಕೆಲವರು ಹಲವಾರು ದಿನಗಳ ಕಾಲ ವಾಷಿಂಗ್ಟನ್‌ನಲ್ಲಿ ಬೀಡುಬಿಟ್ಟಿದ್ದರು' ಎಂದು ಅವರು ಹೇಳಿದರು.

'ನಿಮ್ಮ ಸ್ನೇಹಿತ 'ನಮಸ್ತೆ ಟ್ರಂಪ್' ಮತ್ತು 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ನಮ್ಮ ದೇಶಕ್ಕೆ ನಿಮ್ಮ ಸ್ನೇಹಕ್ಕಾಗಿ ಹೇಗೆ ಪ್ರತಿಫಲ ನೀಡಿದೆ ಎಂಬುದಾಗಿದೆ. ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದು, ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು, ಭಾರತದ ಬ್ರಿಕ್ಸ್ ಸದಸ್ಯತ್ವ ಮತ್ತು ಬ್ರಿಕ್ಸ್‌ನ ಯುಎಸ್ ಡಾಲರ್ ಮೇಲಿನ ದಾಳಿ ಎಂಬ ಕಾರಣಗಳನ್ನು ಅಮೆರಿಕ ಅಧ್ಯಕ್ಷರು ಸುಂಕಕ್ಕೆ ನೀಡಿದ್ದಾರೆ' ಎಂದರು.

'ಇದು ಭಾರತದ 'ಸ್ವಾಯತ್ತ ಕಾರ್ಯತಂತ್ರ' ಎಂಬ ರಾಷ್ಟ್ರೀಯ ನೀತಿಗೆ ತೀವ್ರ ಹೊಡೆತ. ನಮ್ಮ ವಿದೇಶಾಂಗ ನೀತಿಯ ಅಡಿಪಾಯ ಅಲಿಪ್ತತೆಯಾಗಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎಲ್ಲ ಸರ್ಕಾರಗಳು ಪಕ್ಷಗಳನ್ನು ಲೆಕ್ಕಿಸದೆ ಭಾರತದ ಹಿತಾಸಕ್ತಿಗಾಗಿ ಜಗತ್ತಿನಾದ್ಯಂತ ವಿವಿಧ ದೇಶಗಳೊಂದಿಗೆ ಸ್ನೇಹವನ್ನು ಬಲಪಡಿಸಿವೆ' ಎಂದು ಅವರು ಹೇಳಿದರು.

Narendra Modi - Mallikarjun Kharge
ಭಾರತದ ಮೇಲೆ 25% ಸುಂಕ: ಡೊನಾಲ್ಡ್ ಟ್ರಂಪ್ ಶ್ವೇತಭವನದ 'ಬಫೂನ್-ಇನ್-ಚೀಫ್'- ಅಸಾದುದ್ದೀನ್ ಓವೈಸಿ ವ್ಯಂಗ್ಯ

'ಯುಪಿಎ ಸರ್ಕಾರದ ಅವಧಿಯಲ್ಲಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಮೆರಿಕ ಸೇರಿದಂತೆ 45 ದೇಶಗಳಿಂದ ಭಾರತಕ್ಕೆ ಪರಮಾಣು ವಿನಾಯಿತಿ ದೊರೆಯಿತು. ಅಮೆರಿಕ ನಮಗೆ ಬೆಂಬಲ ನೀಡಿತು. ಅದಕ್ಕಾಗಿ ಅವರು ತಮ್ಮ ಕಾನೂನನ್ನು ಬದಲಾಯಿಸಿದರು. ಆದರೆ, ಭಾರತವು ಅಮೆರಿಕದಿಂದ ಮಾತ್ರ ಪರಮಾಣು ಇಂಧನ ಮತ್ತು ಸಾಮಗ್ರಿಗಳನ್ನು ಪಡೆಯಲು ಬದ್ಧವಾಗಿರಲಿಲ್ಲ. ನಮ್ಮ ಆಯ್ಕೆಗಳು ಮುಕ್ತವಾಗಿದ್ದವು. ನಿಮ್ಮ ಸರ್ಕಾರದ ವಿದೇಶಾಂಗ ನೀತಿಯು ಆ ರಾಷ್ಟ್ರೀಯ ನೀತಿಗೆ ತೀವ್ರ ಹೊಡೆತ ನೀಡಿದೆ' ಎಂದು ಖರ್ಗೆ ಗಮನಸೆಳೆದರು.

'ಟ್ರಂಪ್ ಪಾಕಿಸ್ತಾನದೊಂದಿಗೆ ತೈಲ ನಿಕ್ಷೇಪಗಳ ಕುರಿತು ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಆದರೂ, ಪ್ರಧಾನಿ ಏಕೆ ಮೌನವಾಗಿ ಕುಳಿತಿದ್ದಾರೆ. ನಾವು ಈ ಹೊಸ ಅಮೆರಿಕ-ಚೀನಾ-ಪಾಕಿಸ್ತಾನದ ಬಗ್ಗೆ ಚಿಂತಿತರಾಗಿದ್ದೇವೆ. ಸಾರ್ವಜನಿಕ ಸಂಪರ್ಕದ ಬಗ್ಗೆ ಚಿಂತಿಸುವ ಬದಲು, ಮೋದಿ ಸರ್ಕಾರ ದೇಶದ ಬಗ್ಗೆ ಯೋಚಿಸಬೇಕು' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com