
ಪೊಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಇರುವ ವಿವಿಧ ಗ್ರಾಮಗಳಲ್ಲಿ 67ಕ್ಕೂ ಹೆಚ್ಚು ಸ್ಫೋಟಗೊಳ್ಳದ ಶೆಲ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ನಾಶಪಡಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ಚಜ್ಲಾ, ಜುಲಾಸ್, ಮೆಂಧರ್, ಮಂಕೋಟ್ ಮತ್ತು ಲೋವರ್ ಕೃಷ್ಣ ಘಾಟಿ ಗ್ರಾಮಗಳಲ್ಲಿ ಶೆಲ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಮೇ 7 ಮತ್ತು 10 ರ ನಡುವೆ ಪಾಕಿಸ್ತಾನದಿಂದ ಗಡಿಯಾಚೆಗಿನ ಶೆಲ್ ದಾಳಿಯ ನಂತರ ಉಳಿದಿರುವ ಸ್ಫೋಟಗೊಳ್ಳದ ಶೆಲ್‌ಗಳನ್ನು ಸೇನೆಯು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.
ಜನರು ಮತ್ತು ಜಾನುವಾರುಗಳಿಗೆ ಬೆದರಿಕೆಯನ್ನುಂಟು ಮಾಡಲು ನಾಗರಿಕರ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಲಾಗಿತ್ತು. ಒಟ್ಟು 67 ಸ್ಫೋಟಗೊಳ್ಳದ ಶೆಲ್‌ಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಆಡಳಿತದೊಂದಿಗೆ ಸಮನ್ವಯೊಂದಿಗೆ ಕೆಲಸ ಮಾಡುತ್ತಿರುವ ಸೇನೆಯು ಈ ಶೆಲ್ ಗಳನ್ನು ಬಹಳ ಎಚ್ಚರಿಕೆಯಿಂದ ನಾಶಪಡಿಸಲಾಗುತ್ತಿದೆ. ಯಾವುದೇ ಹಾನಿಯಾಗದಂತೆ ನಾಗರಿಕರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಈ ಶೆಲ್‌ಗಳು ಅಪಾಯಕಾರಿಯಾಗಿರುವುದರಿಂದ ಸ್ಥಳೀಯ ನಿವಾಸಿಗಳು ಸೇನೆಯ ಪ್ರಯತ್ನಗಳಿ ಧನ್ಯವಾದ ಸಲ್ಲಿಸಿದ್ದಾರೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.
Advertisement