ಪಹಲ್ಗಾಮ್ ದಾಳಿ ನಂತರ ಜಮ್ಮು-ಕಾಶ್ಮೀರಕ್ಕೆ ಭೇಟಿ; ಕತ್ರಾದಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ಸಾಧ್ಯತೆ

ಪ್ರಧಾನಿಯವರ ನಿರೀಕ್ಷಿತ ಭೇಟಿಯ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಾಗಿಲ್ಲವಾದರೂ, ಕತ್ರಾದಲ್ಲಿನ ಸ್ಥಳೀಯ ಆಡಳಿತವು ನಿರೀಕ್ಷಿತ ಕಾರ್ಯಕ್ರಮಕ್ಕೆ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಮೂಲಗಳು ಹೇಳುತ್ತವೆ.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಆಪರೇಷನ್ ಸಿಂದೂರ್ ನಂತರ ಮೊದಲ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ಕತ್ರಾದಿಂದ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಪ್ರದೇಶದಲ್ಲಿ ಮೊದಲ ವಂದೇ ಭಾರತ್ ರೈಲು ಉದ್ಘಾಟನೆಗೆ ಪ್ರಧಾನಿ ಮೋದಿಯವರ ಭೇಟಿಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.

ಪ್ರಧಾನಿಯವರ ನಿರೀಕ್ಷಿತ ಭೇಟಿಯ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಾಗಿಲ್ಲವಾದರೂ, ಕತ್ರಾದಲ್ಲಿನ ಸ್ಥಳೀಯ ಆಡಳಿತವು ನಿರೀಕ್ಷಿತ ಕಾರ್ಯಕ್ರಮಕ್ಕೆ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಮೂಲಗಳು ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೇ ಉದ್ಘಾಟಿಸಬೇಕಾಗಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

ಜೂನ್ 6 ರಂದು ನಡೆಯಲಿರುವ ತಾತ್ಕಾಲಿಕವಾಗಿ ನಿಗದಿಯಾಗಿರುವ ಈ ಕಾರ್ಯಕ್ರಮದಲ್ಲಿ ಚೆನಾಬ್ ಸೇತುವೆಯ ಉದ್ಘಾಟನೆಯಂತಹ ಇತರ ರೈಲ್ವೆ ಯೋಜನೆಗಳನ್ನು ಸಹ ಒಳಗೊಂಡಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಜೂನ್ 9ಕ್ಕೆ 11 ವರ್ಷವಾಗುತ್ತಿದ್ದು, ಅದಕ್ಕೆ ಮೊದಲು ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಸರ್ಕಾರ ಗುರಿ ಹೊಂದಿದೆ. ಆ ದಿನದಂದು ಅದರ ಸಾಧನೆಗಳನ್ನು ಎತ್ತಿ ತೋರಿಸುವ ರಾಷ್ಟ್ರವ್ಯಾಪಿ ಆಚರಣೆಗಳು ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ಸರ್ಕಾರ ಯೋಜಿಸುತ್ತಿದೆ.

PM Narendra Modi
ಭಾರತ-ಪಾಕ್ ಯುದ್ಧ ತಡೆದಿದ್ದೇ ನಾವು: ಟ್ರಂಪ್ ಪುನರುಚ್ಛಾರ; ಪ್ರಧಾನಿ ಮೋದಿ ಮೌನ ಮುರಿಯುವುದೆಂದು?

ಜಮ್ಮು-ಕಾಶ್ಮೀರದ ಕಾರ್ಯಕ್ರಮದ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ, ಆದರೆ ಪ್ರಧಾನಿ ಮೋದಿ ಶೀಘ್ರದಲ್ಲೇ ಐತಿಹಾಸಿಕ ಕತ್ರಾ-ಕಾಶ್ಮೀರ ವಂದೇ ಭಾರತ್ ರೈಲನ್ನು ಉದ್ಘಾಟಿಸಲಿದ್ದಾರೆ. ತಾತ್ಕಾಲಿಕ ದಿನಾಂಕ ಜೂನ್ 6 ಎಂದು ಹೇಳಲಾಗುತ್ತಿದೆ.

ಆಪರೇಷನ್ ಸಿಂದೂರ ನಂತರ ಪ್ರಧಾನಿ ಮೋದಿ ಕೇಂದ್ರ ಸಚಿವರ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆಯಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ, ಇಂದಿನೊಳಗೆ ಪ್ರಧಾನಿಯವರ ಕಾರ್ಯಕ್ರಮದ ದೃಢೀಕರಣ ನಿರೀಕ್ಷಿಸಲಾಗಿದೆ. ಈ ಮಧ್ಯೆ, ಕತ್ರಾದಲ್ಲಿನ ಸ್ಥಳೀಯ ಆಡಳಿತವು ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಮತ್ತು ಇತರ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಭಾರತೀಯ ರೈಲ್ವೆಯೊಂದಿಗೆ ಸಮನ್ವಯ ಸಾಧಿಸುತ್ತಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ಅವರು ಕತ್ರಾಗೆ ರೈಲ್ವೆ ಕಾರ್ಯಕ್ರಮಕ್ಕಾಗಿ ಭೇಟಿ ನೀಡುತ್ತಿರುವುದು ಅವರ ಮೊದಲ ಭೇಟಿಯಾಗಿದೆ. ಆದಾಗ್ಯೂ, ಪ್ರಧಾನ ಮಂತ್ರಿ ಶ್ರೀನಗರಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಯಾವುದೇ ತಾತ್ಕಾಲಿಕ ಕಾರ್ಯಕ್ರಮ ಇನ್ನೂ ಘೋಷಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com