
ಕೋಲ್ಕತ್ತಾ: ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿದ ವಿಡಿಯೋದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮೇ 30 ರಂದು ಬಂಧನಕ್ಕೊಳಗಾಗಿರುವ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.
ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ವಿಡಿಯೋದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪನೋಲಿಯನ್ನು ಕಳೆದ ಶುಕ್ರವಾರ ಗುರುಗ್ರಾಮ್‌ನಲ್ಲಿ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು.
ಇನ್‌ಸ್ಟಾಗ್ರಾಮ್ ವಿಡಿಯೋ ಕ್ಲಿಪ್ ನಲ್ಲಿ ನಿರ್ದಿಷ್ಟ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಪನೋಲಿ ವಿಡಿಯೋವನ್ನು ಡಿಲೀಟ್ ಮೇ 15 ರಂದು ಕ್ಷಮೆಯಾಚಿಸಿದ್ದಾರೆ. ಶನಿವಾರ, ಪನೋಲಿಯನ್ನು ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
"ನಮ್ಮ ದೇಶದ ಒಂದು ವರ್ಗದ ಜನರ ಭಾವನೆಗಳಿಗೆ ನೋವುಂಟಾಗಿದೆ. ನಮಗೆ ವಾಕ್ ಸ್ವಾತಂತ್ರ್ಯವಿದೆ. ಆದರೆ ಅದರ ಅರ್ಥ ನೀವು ಇತರರ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದಲ್ಲ. ನಮ್ಮ ದೇಶವು ವೈವಿಧ್ಯತೆಯಿಂದ ತುಂಬಿದೆ. ನಮ್ಮ ದೇಶವು ವೈವಿಧ್ಯಮಯವಾಗಿದೆ, ವಿವಿಧ ಜಾತಿ, ಧರ್ಮ ಇತ್ಯಾದಿಗಳನ್ನು ಒಳಗೊಂಡಿದೆ... ನಾವು ಜಾಗರೂಕರಾಗಿರಬೇಕು" ಎಂದು ನ್ಯಾಯಾಧೀಶ ಪಾರ್ಥ ಸಾರಥಿ ಮುಖರ್ಜಿ ಅವರು ಕಳೆದ ವಿಚಾರಣೆ ವೇಳೆ ಆರೋಪಿಗೆ ಎಚ್ಚರಿಸಿದ್ದರು.
Advertisement