ಶಿಫ್ಟ್​​ ಮುಗಿಯಿತೆಂದು ಬಿಟ್ಟು ಹೋದ ಪೈಲಟ್: ವಿಮಾನ ನಿಲ್ಗಾಣದಲ್ಲೇ ಗಂಟೆಗಟ್ಟಲೇ ಕಾದು ಕುಳಿತ DCM ಶಿಂಧೆ

ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವೈಯಕ್ತಿಕ ವಿಮಾನದ ಪೈಲಟ್ ತಮ್ಮ ಕರ್ತವ್ಯದ ಸಮಯ ಮುಗಿದಿದೆ ಎಂದು ಮುಖ್ಯಮಂತ್ರಿಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ.
Eknath Shinde
ಏಕನಾಥ್ ಶಿಂಧೆ
Updated on

ಮುಂಬಯಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶುಕ್ರವಾರ ಜಲಗಾಂವ್‌ನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಈ ಹಾರಾಟ ಸುಮಾರು ಒಂದು ಗಂಟೆ ವಿಳಂಬವಾಯಿತು.

ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವೈಯಕ್ತಿಕ ವಿಮಾನದ ಪೈಲಟ್ ತಮ್ಮ ಕರ್ತವ್ಯದ ಸಮಯ ಮುಗಿದಿದೆ ಎಂದು ಮುಖ್ಯಮಂತ್ರಿಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಮೂಲಗಳ ಪ್ರಕಾರ ಏಕನಾಥ್ ಶಿಂಧೆ ಜಲಗಾಂವ್‌ನಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಮಧ್ಯಾಹ್ನ 3.45 ಕ್ಕೆ ಜಲಗಾಂವ್‌ಗೆ ಆಗಮಿಸಬೇಕಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ವಿಳಂಬವಾಯಿತು. ನಂತರ ವಿಮಾನ ಪ್ರಯಾಣವನ್ನು ಮೊಟಕುಗೊಳಿಸಿ ರಸ್ತೆ ಮೂಲಕ ಮುಕ್ತೈನಗರಕ್ಕೆ ಪ್ರಯಾಣ ಬೆಳೆಸಿದರು.

ಪಾಲ್ಖಿ ಯಾತ್ರೆಯಲ್ಲಿ ಭಾಗವಹಿಸಿ ಸಂತ ಮುಕ್ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಂದ ಶಿಂಧೆ ಮತ್ತು ಅವರ ತಂಡವು ರಾತ್ರಿ 9.15 ಕ್ಕೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಮರಳಿತು. ಆದರೆ ಪೈಲಟ್ ತನ್ನ ಕೆಲಸದ ಸಮಯ ಮುಗಿದಿದೆ ಎಂದು ವಿಮಾನಯಾಣಕ್ಕೆ ನಿರಾಕರಿಸಿದ್ದಾರೆ.

ತನ್ನ ಕರ್ತವ್ಯದ ಸಮಯ ಮುಗಿದಿರುವುದರಿಂದ, ಹಾರಾಟ ನಡೆಸಲು ಹೊಸ ಅನುಮತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಮೂಲಗಳು ಹೇಳುವಂತೆ, ಪೈಲಟ್ ಟೇಕಾಫ್ ಮಾಡಲು ನಿರಾಕರಿಸಿದ್ದಕ್ಕೆ ಅನಾರೋಗ್ಯದ ಕಾರಣವೂ ಇದೆ ಎಂದು ಹೇಳಿದ್ದಾರೆ.

Eknath Shinde
DCM ಏಕನಾಥ್ ಶಿಂಧೆ ಕುರಿತು ಆಕ್ಷೇಪಾರ್ಹ ಹೇಳಿಕೆ: ಕಾಮಿಡಿಯನ್‌ ಕುನಾಲ್ ಕಾಮ್ರಾ, 40 ಶಿವಸೇನೆ ಕಾರ್ಯಕರ್ತರ ವಿರುದ್ಧ FIR ದಾಖಲು

ಆದರೆ ಈ ವೇಳೆ ಉಪಮುಖ್ಯಮಂತ್ರಿ ಜತೆಗಿದ್ದ ಮಹಾಜನ್, ಪಾಟೀಲ್ ಮತ್ತು ಜೊತೆಗಿದ್ದ ಇತರ ಅಧಿಕಾರಿಗಳು ಪೈಲಟ್‌ನ ಮನವೊಲಿಸಲು ಪ್ರಯತ್ನಿಸಿದರು. 45 ನಿಮಿಷಗಳ ಚರ್ಚೆಯ ನಂತರ ಅವರನ್ನು ಹಾರಲು ಮನವೊಲಿಸುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.

ನಿರ್ಗಮನಕ್ಕೆ ಅನುಮತಿ ನೀಡುವ ಬಗ್ಗೆ ಮಹಾಜನ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ವಿಮಾನ ಮುಂಬೈಗೆ ಹೊರಟಿತು. ಪೈಲಟ್‌ಗೆ ಆರೋಗ್ಯಕ್ಕೆ ಸಂಬಂಧಿಸಿದ ಕಾಳಜಿ ಮತ್ತು ಸಮಯದ ಸಮಸ್ಯೆ ಇತ್ತು. ಕೆಲವು ತಾಂತ್ರಿಕ ತೊಂದರೆಗಳೂ ಇದ್ದವು. ನಾವು ವಿಮಾನಯಾನ ಕಂಪನಿಯೊಂದಿಗೆ ಮಾತನಾಡಿದೆವು, ಮತ್ತು ಅವರು ಪೈಲಟ್‌ಗೆ ತಮ್ಮದೇ ಆದ ರೀತಿಯಲ್ಲಿ ಪರಿಸ್ಥಿತಿಯನ್ನು ವಿವರಿಸಿದರು. ಇದು ಒಂದು ಸಣ್ಣ ಸಮಸ್ಯೆಯಾಗಿತ್ತು ಎಂದು ಮಹಾಜನ್ ಹೇಳಿದ್ದಾರೆ.

ಶಿಂದೆ ತೀವು ವಾಪಸಾಗುವ ವೇಳೆ ವಿಮಾನದಲ್ಲಿ, ಶಿಂಧೆ ಮತ್ತು ಅವರ ತಂಡವು ಮುಂಬೈನಲ್ಲಿ ತುರ್ತಾಗಿ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಮಹಿಳೆಯೊಬ್ಬರ ರಕ್ಷಣೆಗೆ ಬಂದರು. ಶೀತಲ್ ಪಾಟೀಲ್ ಎಂಬ ಮಹಿಳೆ ತನ್ನ ಪತಿಯೊಂದಿಗೆ ಮುಂಬೈಗೆ ಪ್ರಯಾಣಿಸಬೇಕಿತ್ತು, ಆದರೆ ದಂಪತಿ ತಮ್ಮ ಫ್ಲೈಟ್ ಮಿಸ್ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಮಹಿಳೆಯ ಸ್ಥಿತಿಯ ಬಗ್ಗೆ ತಿಳಿದ ಶಿಂಧೆ ಅವರು ತಮ್ಮ ಹೆಲಿಕಾಪ್ಟರ್ ನಲ್ಲಿ ದಂಪತಿಯನ್ನು ಮುಂಬೈಗೆ ಕರೆದೊಯ್ದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com