
ಬರ್ಲಿನ್: ಇತ್ತೀಚಿಗೆ ಸದ್ದಿಲ್ಲದೆ ವಿವಾಹವಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಬಿಜು ಜನತಾ ದಳ (BJPD) ನಾಯಕ ಪಿನಾಕಿ ಮಿಶ್ರಾ ಅವರ ಡ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನವ ದಂಪತಿ ಹಳೆಯ ಬಾಲಿವುಡ್ ಗೀತೆ "ರಾತ್ ಕೆ ಹಮ್ಸಾಫರ್" ಗೆ ನೃತ್ಯ ಮಾಡುತ್ತಿರುವ ವೀಡಿಯೊ ಇದಾಗಿದೆ.
ಮೇ 3 ರಂದು ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರವನ್ನು ಪ್ರತಿನಿಧಿಸುವ ಮೊಯಿತ್ರಾ ಮತ್ತು ಒಡಿಶಾದ ಪುರಿಯ ಹಿರಿಯ ಸಂಸದ ಮಿಶ್ರಾ ವಿವಾಹ ಮಹೋತ್ಸವದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನವವಿವಾಹಿತರು 1967 ರ ಹಳೆಯ ಬಾಲಿವುಡ್ 'ರಾತ್ ಕೆ ಹಮ್ಸಾಫರ್' ಸಾಂಗ್ ಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ರಾಜಕಾರಣಿಗಳು ನವದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿವಾಹ ಮಹೋತ್ಸವದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸುತ್ತಿರುವ ಪೋಟೋವೊಂದನ್ನು ಮಹುವಾ ಮೊಯಿತ್ರಾ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಶುಭ ಹಾರೈಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಅಂದಹಾಗೆ, ಅಕ್ಟೋಬರ್ 12, 1974ರಲ್ಲಿ ಜನಿಸಿರುವ ಮಹುವಾ ಮೊಯಿತ್ರಾ, ರಾಜಕೀಯಕ್ಕೆ ಬರುವ ಮುನ್ನಾ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿದ್ದರು. 2010 ರಲ್ಲಿ ಟಿಎಂಸಿ ಸೇರಿದ ಅವರು 2019ರಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು, 2024ರ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ
ಇನ್ನೂ ಅಕ್ಟೋಬರ್ 23, 1959 ರಲ್ಲಿ ಒಡಿಶಾದ ಪುರಿಯಲ್ಲಿ ಜನಿಸಿದ ಪಿನಾಕಿ ಮಿಶ್ರಾ, ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಧುಮುಕ್ಕಿದ್ದರು. 1996ರಲ್ಲಿ ಪುರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಬಳಿಕ ಬಿಜೆಡಿ ಪಕ್ಷ ಸೇರಿಕೊಂಡು 2009, 2014 ಮತ್ತು 2019 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
Advertisement