ಭಾರತದ ವಾಯುನೆಲೆ ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ, ಜಗತ್ತಿನ ಮುಂದೆ ಪಾಕಿಸ್ತಾನ ಬಟಾ ಬಯಲು!

ಪಂಜಾಬ್‌ನ ಆದಂಪುರ ಮತ್ತು ಗುಜರಾತ್‌ನ ಭುಜ್‌ನಲ್ಲಿ ಭಾರತೀಯ ವಾಯುನೆಲೆಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಿರುವುದಾಗಿ ಸುಳ್ಳು ಹೇಳಿಕೊಂಡಿತ್ತು.
Satellite proof
ಉಪ ಗ್ರಹ ಚಿತ್ರಗಳು
Updated on

ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಡಿ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ತಪ್ಪು ಮಾಹಿತಿ ನೀಡುತ್ತಿದೆ.

ಪಂಜಾಬ್‌ನ ಆದಂಪುರ ಮತ್ತು ಗುಜರಾತ್‌ನ ಭುಜ್‌ನಲ್ಲಿ ಭಾರತೀಯ ವಾಯುನೆಲೆಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ, ಬಹು ಸ್ವತಂತ್ರ ಸ್ಯಾಟಲೈಟ್ ಚಿತ್ರಗಳ ಪರಿಶೀಲನೆಯಲ್ಲಿ ಇಸ್ಲಾಮಾಬಾದ್‌ನ ಸಮರ್ಥನೆ ಕಟ್ಟುಕಥೆಗಳೆಂದು ಬಹಿರಂಗವಾಗಿದೆ.

ಈ ವಿಚಾರದಲ್ಲಿ ಉಭಯ ರಾಷ್ಟ್ರಗಳ ಹೇಳಿಕೆಯನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ ಟಾಪ್ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ವಿಶ್ಲೇಷಕ ವಿಶ್ಲೇಷಕ ಡೇಮಿಯನ್ ಸೈಮನ್, ಸತ್ಯವನ್ನು ಬಹಿರಂಗಪಡಿಸಿದ್ದಾರೆ ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ಭಾರತದ ಸೇನಾಪಡೆಗಳಿಂದ ಆದ ಹಾನಿಯ ಮುಜುಗರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ತಪ್ಪು ಮಾಹಿತಿ ನೀಡುತ್ತಿದೆ. ಇದಕ್ಕಾಗಿ ಹಳೆಯ ಚಿತ್ರಗಳನ್ನು ಬಳಸಿರುವುದು ಸೈಮನ್ ಅವರ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ

ಆದಂಪುರ ವಾಯುನೆಲೆ: 'ಸುಖೋಯ್' ಹಾನಿ ಕುರಿತು ಸುಳ್ಳು: ಕಳೆದ ತಿಂಗಳು ನಡೆದ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ವೇಳೆಯಲ್ಲಿ ಆದಂಪುರ ವಾಯುನೆಲೆಯಲ್ಲಿ ಚೀನಾ ನಿರ್ಮಿತ ಜೆಎಫ್-17 ಫೈಟರ್, ಭಾರತದ ಜೆಟ್ ಸುಖೋಯ್ ಸು-30 ಯುದ್ಧ ವಿಮಾನವನ್ನು ಹಾನಿಗೊಳಿಸಿದೆ ಎಂದು ಪಾಕಿಸ್ತಾನದ ವರದಿಗಳು ಹೇಳಿದ್ದವು. ಆದರೆ ಈ ಚಿತ್ರವು ಸಂಘರ್ಷಕ್ಕೂ ಮುಂಚಿನ ದಿನಾಂಕವನ್ನು ಹೊಂದಿದೆ. ವಿಮಾನವು ನಿಯಮಿತ ನಿರ್ವಹಣೆಯಲ್ಲಿರುವ ಮಿಗ್-29 ಆಗಿತ್ತು. ಹಾನಿ ಎಂದು ಹೇಳಿರುವುದು ಕ್ಷಿಪಣಿ ಹೊಡೆತದ್ದಲ್ಲ, ಪರೀಕ್ಷೆಯಿಂದ ಎಂಜಿನ್‌ನಲ್ಲಿ ಮಸಿ ಸಂಗ್ರಹವಾಗಿರುವುದು ಎಂದು ಉನ್ನತ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಸ್ಪಷ್ಟಪಡಿಸಿದ್ದಾರೆ.

ಅದಂಪುರದಲ್ಲಿ S-400 ಕ್ಷಿಪಣಿ ಹಾನಿಯಾಗಿದೆ ಎಂದು ಪಾಕ್‌ ಹೇಳಿಕೊಂಡಿತ್ತು. ಆದರೆ, ಈ ಉಪಗ್ರಹ ಚಿತ್ರವನ್ನು ಡಿಜಿಟಲ್ ಆಗಿ ಸಂಪಾದಿಸಲಾಗಿದೆ. ಬಾಂಬ್ ಕುಳಿಗಳು ಇರುವಂತಹ ಕಪ್ಪು ಚುಕ್ಕೆಗಳನ್ನು ಸೇರಿಸಲಾಗಿದೆ. ಆದರೆ, ನಿಜವಾದ ಉಪಗ್ರಹ ಚಿತ್ರಗಳೊಂದಿಗೆ ಹೋಲಿಸಿದರೆ ಸ್ಥಳದಲ್ಲಿ ಅಂತಹ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂಬುದು ಸ್ಪಷ್ಟವಾಗಿದೆ.

ಕದನ ವಿರಾಮ ಒಪ್ಪಂದ ಜಾರಿಯಾದ ಮೂರು ದಿನಗಳ ನಂತರ ಮೇ 13 ರಂದು ಪ್ರಧಾನಿ ನರೇಂದ್ರ ಮೋದಿ ಅದಂಪುರ ವಾಯುನೆಲೆಗೆ ಭೇಟಿ ನೀಡಿದಾಗ ಪಾಕಿಸ್ತಾನದ ಹೇಳಿಕೆ ಸುಳ್ಳು ಎಂಬುದು ಜಗ ಜಾಹೀರ್ ಆಗಿತ್ತು.ಮಿಗ್-29 ಮತ್ತು ಎಸ್-400 ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವುದು ಪ್ರಧಾನಿ ಭೇಟಿ ವೇಳೆಯಲ್ಲಿನ ಫೋಟೋಗಳಲ್ಲಿ ಸ್ಪಷ್ಪವಾಗಿ ಕಂಡುಬಂದಿತ್ತು.

Satellite proof
'ಇಸ್ಲಾಮಿಕ್ ರಾಷ್ಟ್ರಗಳ ಒಗ್ಗಟ್ಟು' ನೆಪದಲ್ಲಿ ಭಾರತದ ಸರ್ವ ಪಕ್ಷ ನಿಯೋಗದ ಭೇಟಿಗೆ ಅಡ್ಡಿಪಡಿಸಲು ಪಾಕಿಸ್ತಾನ ಪ್ರಯತ್ನ; ವಿಫಲ, ದೊಡ್ಡ ರಾಜತಾಂತ್ರಿಕ ಹಿನ್ನಡೆ!

ಭುಜ್ ವಾಯುನೆಲೆ: S-400 ರಾಡಾರ್ ಮೇಲೆ ದಾಳಿ ಹೇಳಿಕೆಯೂ ಸುಳ್ಳು: ಭುಜ್ ವಾಯುನೆಲೆಯಲ್ಲಿ S-400 ರಾಡಾರ್ ಘಟಕವನ್ನು ನಾಶಪಡಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಸೈಮನ್‌ರ ಸಾಕ್ಷ್ಯದ ವಿಮರ್ಶೆಯು ಬೇರೆ ರೀತಿಯಲ್ಲಿ ತೋರಿಸಿದೆ. ಇದು ಭುಜ್ ವಾಯು ನೆಲೆಯ ವಾಹನ ಸೇವಾ ಯಾರ್ಡ್‌ನಲ್ಲಿನ ಕೇವಲ ತೈಲ ಕಲೆಗಳು. ಇದು ಫೆಬ್ರವರಿ 2025 ರಲ್ಲಿ ತೆಗೆದಂತಹ ಫೋಟೋ ಆಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com