ಕೇರಳ: ಸಮುದ್ರದ ಮಧ್ಯೆ ಅಗ್ನಿ ಅವಘಡ; ಉರಿಯುತ್ತಿದ್ದ ಹಡಗಿನಿಂದ 18 ಸಿಬ್ಬಂದಿ ರಕ್ಷಣೆ!

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಂಟೈನರ್ ಹಡಗಿನಿಂದ 18 ಸಿಬ್ಬಂದಿಯನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.
explosion was reported on board the Singapore-flagged container ship
ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಹಡಗು
Updated on

ಕೇರಳ: ಕೇರಳದ ಕರಾವಳಿಯಲ್ಲಿ ಸೋಮವಾರ ಬೆಳಗ್ಗೆ ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಎಂವಿ ವಾನ್ ಹೈ 503ರಲ್ಲಿ (MVWanHai 503) ಸ್ಫೋಟವೊಂದು ಸಂಭವಿಸಿರುವುದಾಗಿ ರಕ್ಷಣಾ ಪಡೆ PRO ತಿಳಿಸಿದೆ.

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಂಟೈನರ್ ಹಡಗಿನಿಂದ 18 ಸಿಬ್ಬಂದಿಯನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.

ಬೆಳಗ್ಗೆ 10-30 ರ ಸುಮಾರಿನಲ್ಲಿ ಸ್ಫೋಟದ ಮೊದಲ ವರದಿಯನ್ನು ಮುಂಬೈನ ಕಡಲ ಕಾರ್ಯಾಚರಣೆ ಕೇಂದ್ರ ಕೊಚ್ಚಿಯಲ್ಲಿರುವ ಕಡಲ ಕಾರ್ಯಾಚರಣೆ ಕೇಂದ್ರಕ್ಕೆ ತಿಳಿಸಿದೆ. 270 ಮೀಟರ್ ಉದ್ದದ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ತೆರಳುತ್ತಿತ್ತು, ಜೂನ್ 10 ರಂದು ಆಗಮಿಸುವ ನಿರೀಕ್ಷೆಯಿತ್ತು.

ಸಮುದ್ರ ಮಧ್ಯದಲ್ಲಿಎಂವಿ ವಾನ್ ಹೈ 503 ಹಡಗಿನಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಜೂನ್ 9 ರಂದು ಬೆಳಗ್ಗೆ 10-30 ರ ಸುಮಾರಿನಲ್ಲಿ ಮುಂಬೈ ಕಡಲ ಕಾರ್ಯಾಚಾರಣೆ ಕೇಂದ್ರದಿಂದ ಮಾಹಿತಿ ಪಡೆಯಲಾಯಿತು. ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಆಗಿದ್ದು, ಕೊಲೊಂಬೊದಿಂದ ಮುಂಬೈಗೆ ತೆರಳುತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ನೌಕ ಪಡೆ ಕೊಚ್ಚಿಯಲ್ಲಿ ನಿಲ್ಲಿಸಲು ನಿರ್ಧರಿಸಿದ್ದ ಐಎನ್‌ಎಸ್ ಸೂರತ್ ನ್ನು ನೆರವಿಗೆ ಕಳುಹಿಸಿದ್ದಾರೆ ಎಂದು ರಕ್ಷಣಾ ಪಡೆ PRO ಹೇಳಿಕೆಯಲ್ಲಿ ತಿಳಿಸಿದ್ದಾರೆ.

explosion was reported on board the Singapore-flagged container ship
ಕೊಚ್ಚಿ ಕರಾವಳಿಯಲ್ಲಿ ಲೈಬೀರಿಯಾ ಹಡಗು ಮುಳುಗಡೆ: ಅಪಾಯಕಾರಿ ಸರಕು ಸುತ್ತ ನಿಗೂಢತೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com