
ತಿರುವಣ್ಣಾಮಲೈ: ತಮಿಳುನಾಡಿನ ಪ್ರಸಿದ್ಧ ಪ್ರಸಿದ್ಧ ಅಣ್ಣಾಮಲೈ ದೇವಾಲಯ ಆವರಣದೊಳಗೆ ವ್ಯಕ್ತಿಯೋರ್ವ ಮಾಂಸಾಹಾರ ಸೇವಿಸಿದ ನಂತರ ತಿರುವಣ್ಣಾಮಲೈನಲ್ಲಿ ಕೆಲ ಕಾಲ ಉದ್ವಿಗ್ನತೆ ಉಂಟಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.
ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಆಹಾರ ಸೇವಿಸುತ್ತಿರುವುದನ್ನು ಗಮನಿಸಿದ ಭಕ್ತರು ಕೂಡಲೇ ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ಅಲ್ಲಿಗೆ ಬಂದು ಏನು ಸೇವಿಸುತ್ತಿದ್ದಾರೆ ಎಂದು ಪ್ರಶ್ನಿಸಿದಾಗ, ತಾನು ಕುಸ್ಕಾಕ್ಕೆ (ಸಾದಾ ಬಿರಿಯಾನಿ) ಆರ್ಡರ್ ಮಾಡಿದ್ದೆ. ಆದರೆ ಅದರೊಂದಿಗೆ ತಪ್ಪಾಗಿ ಚಿಕನ್ ತುಂಡನ್ನು ಪ್ಯಾಕ್ ಮಾಡಲಾಗಿದೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಆಹಾರವನ್ನು ಪ್ಯಾಕಪ್ ಮಾಡುವಂತೆ ಸೂಚಿಸಿದ ಅಧಿಕಾರಿಗಳು, ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆಗಾಗಿ ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಜನವರಿಯಲ್ಲಿ ಇದೇ ರೀತಿಯ ಘಟನೆಯಲ್ಲಿ ಮಧುರೈನ ಪವಿತ್ರ ತಿರುಪರಂಕುಂದ್ರಂ ಸುಬ್ರಹ್ಮಣ್ಯ ಸ್ವಾಮಿ ಬೆಟ್ಟದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಮತ್ತು ರಾಮನಾಥಪುರಂ ಸಂಸದ ನವಾಸ್ ಕಣಿ ಮಾಂಸ ಆಹಾರ ಸೇವನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ.ಅಣ್ಣಾಮಲೈ ಖಂಡಿಸಿದ್ದರು.
ಈ ಕೃತ್ಯವನ್ನು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದ ಅಣ್ಣಾಮಲೈ, ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, "ಹಿಂದೂಗಳು ಶಾಂತಿಪ್ರಿಯ ಸಮುದಾಯ. ಈ ಸಂಸದ ಬೆಟ್ಟಕ್ಕೆ ಹೋಗಿ ಮಾಂಸಾಹಾರ ಸೇವಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ. ತುಷ್ಟೀಕರಣ ರಾಜಕಾರಣ ನಡೆದಿದೆ" ಎಂದು ಹೇಳಿದ್ದಾರೆ. ಕಣಿ ಅವರನ್ನು ನೇರವಾಗಿ ಹೆಸರಿಸದೆ ಇಂಡಿಯಾ ಟುಡೇ ಅವರು ಅಂದು, "ಈ ಸಂಸದರನ್ನು ವಜಾಗೊಳಿಸಬೇಕು. ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿದ್ದಾರೆ. ತೀವ್ರ ದುರದೃಷ್ಟಕರ" ಎಂದು ಹೇಳಿದರು.
Advertisement