Air India Plane Crash: ಏರ್ ಇಂಡಿಯಾ ವಿಮಾನದ ಕೋ-ಪೈಲೆಟ್ ಕನ್ನಡಿಗ; 1100 ಗಂಟೆಗಳ ಹಾರಾಟ ಅನುಭವ!

ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.
Co-Pilot Clive Sundar
ಕೋ ಪೈಲೆಟ್ ಕ್ಲೈವ್ ಕುಂದರ್
Updated on

ಅಹಮದಾಬಾದ್: ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, ಓರ್ವ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ನಾಗರಿಕರು ಹಾಗೂ ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಿದ್ದು ಎಲ್ಲರೂ ಸಜೀವದಹನವಾಗಿದ್ದಾರೆ.

ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ನಿರ್ವಹಿಸುತ್ತಿದ್ದರು. ಅವರಿಗೆ 8200 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವಿತ್ತು. ಅವರು ದೀರ್ಘಾವಧಿಯ ಕ್ಯಾಪ್ಟನ್ (LTC). ಅವರ ಜೊತೆ ಸಹ-ಪೈಲಟ್ ಕ್ಲೈವ್ ಕುಂದರ್ ಇದ್ದರು. ಇವರು ಕರ್ನಾಟಕದ ಕರಾವಳಿ ಮೂಲದವರು. ಅವರಿಗೆ 1100 ಗಂಟೆಗಳ ಹಾರಾಟದ ಅನುಭವವಿತ್ತು.

ವಾಯು ಸಂಚಾರ ನಿಯಂತ್ರಣ (ATC) ಪ್ರಕಾರ, ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದ ರನ್‌ವೇ 23 ರಿಂದ 13:39 IST (0809 UTC) ಕ್ಕೆ ಹೊರಟಿತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತುರ್ತು ಪರಿಸ್ಥಿತಿಯನ್ನು ಸೂಚಿಸುವ "ಮೇಡೇ" ಕರೆ ಬಂದಿತು. ಇದರ ನಂತರ, ATC ನಿರಂತರ ಸಂಪರ್ಕಕ್ಕೆ ಪ್ರಯತ್ನಿಸಿತು. ಆದರೆ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೆಲವೇ ಕ್ಷಣಗಳಲ್ಲಿ, ವಿಮಾನವು ರನ್‌ವೇಯಿಂದ ಸ್ವಲ್ಪ ದೂರದಲ್ಲಿರುವ ವಸತಿ ಪ್ರದೇಶದಲ್ಲಿ ಪತನಗೊಂಡಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಟೇಕ್ ಆಫ್ ಆದ ಕೆಲವು ನಿಮಿಷಗಳ ನಂತರ, ವಿಮಾನವು ಸಮತೋಲನ ಕಳೆದುಕೊಂಡು ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು, ವಿಮಾನ ಬೆಂಕಿ ಹೊತ್ತಿಕೊಂಡಿತು ಮತ್ತು ಇಡೀ ಪ್ರದೇಶವು ಹೊಗೆಯಿಂದ ತುಂಬಿತ್ತು. ಸರ್ಕಾರಿ ಆಸ್ಪತ್ರೆಯೂ ಇರುವ ವಸತಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಅದೇ ಆಸ್ಪತ್ರೆ ಮತ್ತು ಹತ್ತಿರದ ಇತರ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಲಾಗಿದೆ.

Co-Pilot Clive Sundar
Air India Plane Crash: ಮಾಜಿ ಸಿಎಂ ವಿಜಯ್ ರೂಪಾಣಿ ಕೊನೆ ಕ್ಷಣ; ಪತನದಲ್ಲಿ 241 ಮಂದಿ ಸಾವು; Photos!

ಅಧಿಕೃತ ಹೇಳಿಕೆ ನೀಡುವ ಮೂಲಕ ಏರ್ ಇಂಡಿಯಾ ಅಪಘಾತವನ್ನು ದೃಢಪಡಿಸಿದೆ. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುವ ವಿಮಾನ AI171 ಇಂದು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ ಎಂದು ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com