
ಅಹಮದಾಬಾದ್: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಒಟ್ಟು 265 ಜನ ಮೃತಪಟ್ಟಿದ್ದಾರೆ.
ಇಂದು ವಿಜಯ್ ರೂಪಾನಿ ಅವರ ಮನೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಿರಿಯ ಬಿಜೆಪಿ ನಾಯಕನಿಗೆ ಸಂತಾಪ ಸೂಚಿಸಿದರು ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ರೂಪಾನಿ ಲಂಡನ್‌ನಲ್ಲಿರುವ ತಮ್ಮ ಮಗಳ ಮನೆಗೆ ಹೋಗುತ್ತಿದ್ದರು. ಬಿಜೆಪಿಯ ಸಕ್ರಿಯ ಸದಸ್ಯೆಯೂ ಆಗಿರುವ ವಿಜಯ್ ರೂಪಾನಿ ಅವರ ಪತ್ನಿ ಅಂಜಲಿಬೆನ್ ಸಹ ಲಂಡನ್ ನಲ್ಲಿದ್ದರು. ವಿಮಾನ ಅಪಘಾತದಲ್ಲಿ ಪತಿಯ ಸಾವಿನ ಸುದ್ದಿ ತಿಳಿದು ಅಂಜಲಿಬೆನ್ ಅವರು ಇಂದು ಬೆಳಗ್ಗೆ ಅಹಮದಾಬಾದ್ ಗೆ ಆಗಮಿಸಿದ್ದಾರೆ.
ವಿಜಯ್ ರೂಪಾನಿ ಅವರ ಕುಟುಂಬವನ್ನು ಭೇಟಿಯಾದೆ. ವಿಜಯ್ ಭಾಯ್ ನಮ್ಮ ಜೊತೆ ಇಲ್ಲ ಎಂಬುದು ಊಹಿಸಲು ಸಾಧ್ಯವಿಲ್ಲ. ನಾನು ಅವರನ್ನು ದಶಕಗಳಿಂದ ಬಲ್ಲೆ. ನಾವು ಅತ್ಯಂತ ಸವಾಲಿನ ಸಮಯಗಳಲ್ಲೂ ಹೆಗಲಿಗೆ ಹೆಗಲು ಕೊಟ್ಟು ಒಟ್ಟಿಗೆ ಕೆಲಸ ಮಾಡಿದ್ದೇವೆ. ಪಕ್ಷದ ಸಿದ್ಧಾಂತಕ್ಕೆ ದೃಢವಾಗಿ ಬದ್ಧರಾಗಿದ್ದರು ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement