ಕಮರಿಹೋಯ್ತು ಕನಸು: ಬೆಂಗಳೂರಿನ ಟೆಕ್ಕಿ ಹುಟ್ಟುಹಬ್ಬ ಪಯಣ Air India ದುರಂತದಲ್ಲಿ ಅಂತ್ಯವಾಯ್ತು!

ಆರಂಭದಲ್ಲಿ, ಹರ್‌ಪ್ರೀತ್ ಜೂನ್ 19 ರಂದು ಲಂಡನ್ ಗೆ ಹೋಗಲು ಯೋಜಿಸಿದ್ದರು. ಆದರೆ ತನ್ನ ವಿಶೇಷ ದಿನವನ್ನು ಮರೆಯಲಾಗದಂತೆ ಮಾಡುವ ಬಯಕೆ ಅವರನ್ನು ಜೂನ್ 12ರಂದೇ ಹೋಗುವಂತೆ ಪ್ರೇರೇಪಿಸಿತು.
Hospital staff carry a coffin to load inside a vehicle outside the postmortem room at a hospital, in Ahmedabad, June 13, 2025.
ಅಹಮದಾಬಾದ್ ನಲ್ಲಿ ಆಸ್ಪತ್ರೆಯಲ್ಲಿ ಮೃತ ಶರೀರವನ್ನು ಕೊಂಡೊಯ್ಯುತ್ತಿರುವುದು
Updated on

ಬೆಂಗಳೂರು: ವಿಧಿಯ ದುರಂತ ಘಟನೆಯಲ್ಲಿ, ಇಂದೋರ್ ಮಹಿಳೆಯೊಬ್ಬರು ತನ್ನ ಪತಿಯ ಹುಟ್ಟುಹಬ್ಬವನ್ನು ಆಚರಿಸಲು ಮಾಡಿದ ಪ್ರೀತಿಯ ಸನ್ನೆ ಊಹಿಸಲಾಗದ ದುಃಖದಲ್ಲಿ ಕೊನೆಗೊಂಡಿತು. ಹರ್‌ಪ್ರೀತ್ ಕೌರ್ ಹೊರಾ ಲಂಡನ್‌ಗೆ ಏರ್ ಇಂಡಿಯಾ ವಿಮಾನ ಹತ್ತಿದ್ದು, ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ದುರದೃಷ್ಟಕರ ವಿಮಾನದಲ್ಲಿ ಮೃತಪಟ್ಟ 241 ಮಂದಿ ಪ್ರಯಾಣಿಕರಲ್ಲಿ ಒಬ್ಬರಾಗಲು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಐಟಿ ವೃತ್ತಿಪರೆ ಹರ್‌ಪ್ರೀತ್‌ ಸಾಕಷ್ಟು ಕನಸು ಕಟ್ಟಿಕೊಂಡು, ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. ಅವರ ಪತಿ, ಐಟಿ ವೃತ್ತಿಪರರೂ ಆಗಿರುವ ರಾಬಿ ಹೊರಾ, ಲಂಡನ್ ನಲ್ಲಿ ಪತ್ನಿಯ ಆಗಮನಕ್ಕಾಗಿ ಕಾಯುತ್ತಿದ್ದರು.

ಆರಂಭದಲ್ಲಿ, ಹರ್‌ಪ್ರೀತ್ ಜೂನ್ 19 ರಂದು ಲಂಡನ್ ಗೆ ಹೋಗಲು ಯೋಜಿಸಿದ್ದರು. ಆದರೆ ತನ್ನ ವಿಶೇಷ ದಿನವನ್ನು ಮರೆಯಲಾಗದಂತೆ ಮಾಡುವ ಬಯಕೆ ಅವರನ್ನು ಜೂನ್ 12ರಂದೇ ಹೋಗುವಂತೆ ಪ್ರೇರೇಪಿಸಿತು.

Hospital staff carry a coffin to load inside a vehicle outside the postmortem room at a hospital, in Ahmedabad, June 13, 2025.
Air India ವಿಮಾನ ಅಪಘಾತ: ಭವಿಷ್ಯದಲ್ಲಿ ವಿಪತ್ತು ತಪ್ಪಿಸಲು SOP ರೂಪಿಸಲು ಉನ್ನತ ಮಟ್ಟದ ಸಮಿತಿ ರಚನೆ

ಹರ್ ಪ್ರೀತ್ ಕೌರ್ ಜೂನ್ 19 ರಂದು ಲಂಡನ್‌ಗೆ ಹೋಗಲು ಯೋಜನೆ ಹಾಕಿಕೊಂಡಿದ್ದಳು ಎಂದು ಆಕೆಯ ಹತಾಶೆಗೊಂಡ ಮಾವನ ಸಹೋದರ ರಾಜೇಂದ್ರ ಸಿಂಗ್ ಹೊರಾ ಹೇಳುತ್ತಾರೆ. ದಂಪತಿ ಯುರೋಪ್ ಪ್ರವಾಸ ಮಾಡುವ ಯೋಜನೆಗಳನ್ನು ಸಹ ಹೊಂದಿದ್ದರು. ಎಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಬದಲಾಯಿತು. ಎಂದು ದುಃಖ ವ್ಯಕ್ತಪಡಿಸಿದರು.

ಲಂಡನ್‌ಗೆ ಹೊರಟಿದ್ದ ವಿಮಾನವು ಅಹಮದಾಬಾದ್‌ನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಕಟ್ಟಡಕ್ಕೆ ಅಪ್ಪಳಿಸಿ ಒಬ್ಬರೇ ಒಬ್ಬರು ಬದುಕುಳಿದರು. .

ಲಂಡನ್‌ಗೆ ಹೋಗುವ ಮೊದಲು ಹರ್‌ಪ್ರೀತ್ ತನ್ನ ಹೆತ್ತವರನ್ನು ಅಹಮದಾಬಾದ್‌ನಲ್ಲಿ ಭೇಟಿ ಮಾಡಿದ್ದನ್ನು ಮಾವನ ಸಹೋದರ ನೆನಪಿಸಿಕೊಂಡರು.

Hospital staff carry a coffin to load inside a vehicle outside the postmortem room at a hospital, in Ahmedabad, June 13, 2025.
Ahmedabad Plane Crash: ಖುಷಿಯಿಂದ 'Goodbye India' ಅಂತ ಹೇಳಿ ಹೋದ ಇಬ್ಬರು ಬ್ರಿಟನ್ ಪ್ರಜೆಗಳು ಉಳಿಯಲೇ ಇಲ್ಲ, Video!

ಹರ್ ಪ್ರೀತ್ ವಿಮಾನ ಹತ್ತುವ ಸ್ವಲ್ಪ ಮೊದಲು, ನಾವೆಲ್ಲರೂ ನಮ್ಮ ಕುಟುಂಬ ವಾಟ್ಸಾಪ್ ಗುಂಪಿನಲ್ಲಿ ಅವಳ ಲಂಡನ್ ಪ್ರವಾಸಕ್ಕಾಗಿ ಶುಭ ಹಾರೈಸಿದೆವು. ಅವಳು ಎಲ್ಲರಿಗೂ ಉತ್ತರಿಸುತ್ತಾ, ನಮಗೆ ಧನ್ಯವಾದ ಹೇಳಿದಳು. ಪತಿಯ ಜೊತೆ ಸೇರಲು ತುಂಬಾ ಉತ್ಸುಕಳಾಗಿದ್ದಳು. ಲಂಡನ್‌ಗೆ ಹೋಗುವ ಬಗ್ಗೆ ಹರ್‌ಪ್ರೀತ್ ಸಂತೋಷಪಟ್ಟಿದ್ದಳು. ಆದರೆ ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಯಿತು. ನಾವು ಅವಳನ್ನು ಕಳೆದುಕೊಂಡೆವು ಎಂದು ದುಃಖದಿಂದ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com