
ಮುಂಬೈ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಹಾಗೂ ಸಂತ್ರಸ್ತರಿಗೆ ರೂ. 25 ಲಕ್ಷ ರೂಪಾಯಿ ಮಧ್ಯಂತರ ಪೇಮೆಂಟ್ (interim payment ) ಒದಗಿಸಲಾಗುವುದು ಎಂದು ಏರ್ ಇಂಡಿಯಾ ಶನಿವಾರ ಪ್ರಕಟಿಸಿದೆ.
ಈ ಮಧ್ಯಂತರ ಪರಿಹಾರ, ಟಾಟಾ ಸನ್ಸ್ ಈಗಾಗಲೇ ಘೋಷಿಸಿರುವ 1 ಕೋಟಿ ರೂಪಾಯಿ ಪರಿಹಾರಕ್ಕೆ ಹೆಚ್ಚುವರಿಯಾಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರ ಮಧ್ಯಾಹ್ನ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಅಪಘಾತಕ್ಕೀಡಾಗಿ 12 ಸಿಬ್ಬಂದಿ, 241 ಪ್ರಯಾಣಿಕರು ಸೇರಿದಂತೆ 270 ಜನರು ಸಾವನ್ನಪ್ಪಿದ್ದಾರೆ.
"ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ ತಕ್ಷಣದ ಹಣಕಾಸಿನ ಅಗತ್ಯತೆ ಪೂರೈಸಲು ದುರಂತದಲ್ಲಿ ಮೃತಪಟ್ಟವರು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ತಲಾ ರೂ.25 ಲಕ್ಷ ಮಧ್ಯಂತರ ಪೇಮೆಂಟ್ಒದಗಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.
ಟಾಟಾ ಸನ್ಸ್ ಈಗಾಗಲೇ ಘೋಷಿಸಿರುವ 1 ಕೋಟಿ ಪರಿಹಾರ ಘೋಷಿಸಿದೆ. ಇದು ಹೆಚ್ಚುವರಿಯಾಗಿ ಪ್ರಕಟಿಸಿರುವ ಪರಿಹಾರವಾಗಿದ್ದು, ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳಿಗೆ ಏರ್ ಇಂಡಿಯಾ ಒಗ್ಗಟ್ಟಿನಲ್ಲಿ ನಿಂತಿದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
Advertisement