ಸಕಲ ಸರ್ಕಾರಿ ಗೌರವದೊಂದಿಗೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

ಅಂತಿಮ ವಿಧಿವಿಧಾನಗಳಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾಗವಹಿಸಿದ್ದರು.
Gujarat Chief Minister Bhupendra Patel paid his last respects
ಅಂತಿಮ ನಮನ ಸಲ್ಲಿಸಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್
Updated on

ರಾಜ್​ಕೋಟ್: ಜೂನ್ 12 ರಂದು ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವನ್ನಪ್ಪಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್‌ಭಾಯ್ ರೂಪಾನಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರ ಗೌರವವೊಂದಿಗೆ ಸೋಮವಾರ ನೆರವೇರಿಸಲಾಯಿತು.

ಇಂದು ಶಿಷ್ಟಾಚಾರದ ಪ್ರಕಾರ ಕಟ್ಟುನಿಟ್ಟಾಗಿ ನಡೆಸಲಾದ ಅಂತಿಮ ವಿಧಿವಿಧಾನಗಳಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾಗವಹಿಸಿದ್ದರು. ರೂಪಾನಿ ಅವರ ಕೊಡುಗೆಗಳು ಮತ್ತು ನಾಯಕತ್ವಕ್ಕೆ ರಾಜ್ಯದ ಅತ್ಯುನ್ನತ ಗೌರವದ ಸಂಕೇತವಾಗಿ ಗಾರ್ಡ್ ಆಫ್ ಹಾನರ್ ನೀಡಲಾಯಿತು.

ಇದಕ್ಕು ಮುನ್ನ ಗಣ್ಯರ ಸಮ್ಮುಖದಲ್ಲಿ ರೂಪಾನಿ ಅವರ ಮೃತದೇಹವನ್ನು ಪತ್ನಿ ಅಂಜಲಿ ರೂಪಾನಿ ಮತ್ತು ಮಗ ರುಷಭ್ ರೂಪಾನಿ ಸೇರಿದಂತೆ ದುಃಖಿತ ಕುಟುಂಬಕ್ಕೆ ಗೌರವಯುತವಾಗಿ ಹಸ್ತಾಂತರಿಸಲಾಯಿತು.

Gujarat Chief Minister Bhupendra Patel paid his last respects
Ahmedabad plane crash: ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ 42 ಮೃತದೇಹಗಳ ಗುರುತು DNA test ಮೂಲಕ ಪತ್ತೆ

ಅಹಮದಾಬಾದ್​ನ ಸಿವಿಲ್​ ಆಸ್ಪತ್ರೆಯಲ್ಲಿದ್ದ ರೂಪಾನಿ ಅವರ ಪಾರ್ಥಿವ ಶರೀರವನ್ನು ಹೊತ್ತೊಯ್ಯುವ ವಾಹನಕ್ಕೆ 2,000 ಕೆ.ಜಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು ಮತ್ತು ಮೃತದೇಹದ ಮೇಲೆ ತ್ರಿವರ್ಣ ಧ್ವಜ ಹೊದಿಸಲಾಗಿತ್ತು.

ಜೂನ್​ 12ರಂದು ಲಂಡನ್​ಗೆ ಹಾರುತ್ತಿದ್ದ ಏರ್​ ಇಂಡಿಯಾ ಬೋಯಿಂಗ್​ 787-8 ಡ್ರೀಮ್​ಲೈನರ್​ ವಿಮಾನ ಅವಘಡದಲ್ಲಿ ಸಾವನ್ನಪ್ಪಿದ 241 ಪ್ರಯಾಣಿಕರ ಪೈಕಿ ರೂಪಾನಿ ಕೂಡಾ ಒಬ್ಬರು. ಡಿಎನ್​ಎ ಪರೀಕ್ಷೆ ಮೂಲಕ ಅವರ ಮೃತದೇಹವನ್ನು ಪತ್ತೆ ಮಾಡಿರುವ ಕುರಿತು ನಿನ್ನೆ ಆಸ್ಪತ್ರೆ ಅಧಿಕಾರಿಗಳು ದೃಢಪಡಿಸಿದ್ದರು.

ಅಧಿಕೃತ ಹೇಳಿಕೆಯಲ್ಲಿ, ರಾಜ್ಯ ಸರ್ಕಾರವು ವಿಜಯ್‌ಭಾಯ್ ರೂಪಾನಿ ಅವರನ್ನು ಕೇವಲ ರಾಜಕೀಯ ವ್ಯಕ್ತಿಯಾಗಿ ಮಾತ್ರವಲ್ಲದೆ, ಸಮಗ್ರತೆ, ಸಹಾನುಭೂತಿ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅಚಲ ಸಮರ್ಪಣೆಗೆ ಹೆಸರುವಾಸಿಯಾದ ನಾಯಕರಾಗಿದ್ದರು ಎಂದು ಸ್ಮರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com