ಸತತ ಎರಡನೇ ದಿನವೂ Air India ಸಮಸ್ಯೆ; ಮತ್ತೆರಡು ವಿಮಾನಗಳ ಕಾರ್ಯಾಚರಣೆ ಸ್ಥಗಿತ!

ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮ ವಿಮಾನ ರದ್ದತಿ ನಿರ್ಧಾರಕ್ಕೆ ಕಾರಣವಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
Air India flight
ಏರ್ ಇಂಡಿಯಾ ವಿಮಾನ online desk
Updated on

ಸತತ ಎರಡನೇ ದಿನವೂ ಏರ್ ಇಂಡಿಯಾದ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. "ಕಾರ್ಯಾಚರಣೆಯ ಕಾರಣಗಳು" ಮತ್ತು ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮದಿಂದಾಗಿ ಜೂನ್ 17 ರಂದು ನಿಗದಿಯಾಗಿದ್ದ ಮುಂಬೈ-ಲಕ್ನೋ ವಿಮಾನವನ್ನು ರದ್ದುಗೊಳಿಸಲಾಗಿದೆ.

ಇದಷ್ಟೇ ಅಲ್ಲದೇ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡ ಕಾರಣ ಏರ್ ಇಂಡಿಯಾ ಬುಧವಾರ ದೆಹಲಿ-ಬಾಲಿ ವಿಮಾನವನ್ನು ಮಧ್ಯದಲ್ಲೇ ದೆಹಲಿಗೆ ತಿರುಗಿಸಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬೈ-ಲಖನೌ ವಿಮಾನ ಕಾರ್ಯಾಚರಣೆ ರದ್ದತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ, ಪ್ರಯಾಣಿಕರನ್ನು ಅವರ ಗಮ್ಯಸ್ಥಾನವಾದ ಲಕ್ನೋಗೆ ಆದಷ್ಟು ಬೇಗ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ. ಜೂನ್ 17 ರಂದು ಮುಂಬೈನಿಂದ ಲಕ್ನೋಗೆ ನಿಗದಿಯಾಗಿದ್ದ ಏರ್ ಇಂಡಿಯಾ ವಿಮಾನ AI2491 ಅನ್ನು "ಕಾರ್ಯಾಚರಣೆಯ ಕಾರಣಗಳಿಂದ" ರದ್ದುಗೊಳಿಸಲಾಗಿದೆ.

ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮ ವಿಮಾನ ರದ್ದತಿ ನಿರ್ಧಾರಕ್ಕೆ ಕಾರಣವಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದಲ್ಲದೆ, ಮಾರ್ಗ ಬದಲಾವಣೆ ಮಾಡಿದ್ದರಿಂದಾಗಿ ವಿಮಾನಗಳ ಆಗಮದಲ್ಲಿ ವಿಳಂಬವಾಗಿದ್ದು, ಸಿಬ್ಬಂದಿ ತಮ್ಮ ನಿಯಂತ್ರಕ ಹಾರಾಟದ ಸಮಯ ಮಿತಿಗಳನ್ನು ತಲುಪಲು ಕಾರಣವಾಯಿತು. ಆದ್ದರಿಂದ, ಹವಾಮಾನ ಸಂಬಂಧಿತ ವಿಳಂಬ ಮತ್ತು ಅಡೆತಡೆಗಳಿಂದಾಗಿ ಬದಲಿ ಸಿಬ್ಬಂದಿಯನ್ನು ತಕ್ಷಣವೇ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅನಾನುಕೂಲತೆಯನ್ನು ಕಡಿಮೆ ಮಾಡಲು ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಸೌಕರ್ಯವನ್ನು ಸಹ ಒದಗಿಸಲಾಗಿದೆ ಎಂದು ಅದು ಹೇಳಿದೆ. ಅವರು ಆಯ್ಕೆ ಮಾಡಿಕೊಂಡರೆ ರದ್ದತಿಗಳ ಪೂರ್ಣ ಮರುಪಾವತಿ ಅಥವಾ ಉಚಿತ ಮರು ಪ್ರಯಾಣದ ಆಯ್ಕೆಯನ್ನೂ ಸಹ ಅವರಿಗೆ ನೀಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

Air India flight
Ahmedabad Plane crash: ಅಪಘಾತದ ಕಾರಣ ಬಿಚ್ಚಿಡುವ RAT ಕುರಿತ ಮಹತ್ವದ ಮಾಹಿತಿ ಲಭ್ಯ!

ಮೂರುವರೆ ವರ್ಷಗಳ ಹಿಂದೆ ಟಾಟಾ ಗ್ರೂಪ್ ಏರ್‌ಲೈನ್ಸ್ ಖರೀದಿಸಿದ ನಂತರದ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಏರ್ ಇಂಡಿಯಾದಲ್ಲಿ ಸಮಸ್ಯೆ ಮುಂದುವರೆದಿದೆ. ಜೂ.16 ರಂದು ವಿವಿಧ ಕಾರಣಗಳಿಗಾಗಿ ಏಳು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ವಿಮಾನದ ದೋಷದಿಂದಾಗಿ ವಿಮಾನ ಚಾಲಕರು ನಿಲುಗಡೆಯ ಸಮಯದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com