
ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಹೊರಬರಲು ಆರಂಭಿಸಿದೆ.
ಹನಿಮೂನ್ ಗೆ ತೆರಳಿದ್ದ ವೇಳೆ ತನ್ನ ಪತಿ ರಾಜಾ ರಘುವಂಶಿಯನ್ನು ಸೋನಂ ಎಂಬ ಮಹಿಳೆ ಹತ್ಯೆ ಮಾಡಿಸಿದ್ದಳು. ಈಗ ಪ್ರಕರಣದ ತನಿಖೆಯಲ್ಲಿ ಹೊಸ ಹೆಸರು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಈ ಹಿಂದೆ ಅಪರಿಚಿತನಾಗಿದ್ದ ಸಂಜಯ್ ವರ್ಮಾ, ರಾಜಾ ಅವರ ಪತ್ನಿ ಸೋನಮ್ ರಘುವಂಶಿ ಅವರೊಂದಿಗೆ ಮದುವೆಗೆ ಮೊದಲು ಮತ್ತು ನಂತರ ಅತಿ ಹೆಚ್ಚು ದೂರವಾಣಿ ಸಂಪರ್ಕ ಹೊಂದಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪೊಲೀಸರು ಪಡೆದ ಕರೆ ದತ್ತಾಂಶ ದಾಖಲೆಗಳ ಪ್ರಕಾರ, ಮಾರ್ಚ್ 1 ಮತ್ತು ಮಾರ್ಚ್ 25 ರ ನಡುವೆ, ಸೋನಮ್ ಮತ್ತು ಸಂಜಯ್ 119 ದೂರವಾಣಿ ಕರೆಗಳಾಗಿವೆ. ಈ ಘಟನೆಯ ಬೆನ್ನಲ್ಲೇ ಸಂಜಯ್ ವರ್ಮಾ ಮೊಬೈಲ್ ಸಂಖ್ಯೆ ಪ್ರಸ್ತುತ ಸ್ವಿಚ್ ಆಫ್ ಆಗಿದೆ.
ಮೇ 23 ರಂದು, ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿ ರಾಜಾ ರಘುವಂಶಿ ಅವರನ್ನು ಹತ್ಯೆ ಮಾಡಿ, ವೀ ಸಾಡಾಂಗ್ ಜಲಪಾತದ ಬಳಿಯ ಕಣಿವೆಗೆ ಎಸೆದು ಹತ್ಯೆ ಮಾಡಲಾಗಿತ್ತು. 10 ದಿನಗಳ ನಂತರ ಅವರ ಶವವನ್ನು ವಶಪಡಿಸಿಕೊಳ್ಳಲಾಯಿತು.
Advertisement