ಇಂದು ಮುಸ್ಲಿಮರ ಹಬ್ಬ: ಹಣೆಗೆ ಇಟ್ಟಿದ್ದ ತಿಲಕ ಒರೆಸುವಂತೆ ಸಹೋದ್ಯೋಗಿಗೆ ಹಿರಿಯ ಉದ್ಯೋಗಿ ರಶೀದ್ ವಾರ್ನಿಂಗ್; Video Viral

ಜಿತೇಶ್ ಶರ್ಮಾ ಎಂಬ ಯುವಕನಿಗೆ ರಶೀದ್ ತನ್ನ ಹಣೆಯ ಮೇಲಿನ ಧಾರ್ಮಿಕ ಗುರುತು ತೆಗೆದು ಅಂಗಡಿಯೊಳಗೆ ಬಾ... ಇಲ್ಲದಿದ್ದರೆ ಕೆಲಸದಿಂದ ತೆಗೆಯುವುದಾಗಿ ಎಂದು ಹೇಳಿದ್ದಾನೆ.
Rashid-Jithesh Sharma
ರಶೀದ್-ಜಿತೇಶ್ ಶರ್ಮಾ
Updated on

ಮುಂಬೈ: ಜೂನ್ 7ರಂದು ಈದ್-ಉಲ್-ಅಝಾ ಸಂದರ್ಭದಲ್ಲಿ ಮುಂಬೈನ ಭಂಡಪ್ ಪಶ್ಚಿಮದಲ್ಲಿರುವ ಕ್ರೋಮಾ ಅಂಗಡಿಯಲ್ಲಿ ಉದ್ವಿಗ್ನತೆ ಭುಗಿಲೆದ್ದಿತು. ಉದ್ಯೋಗಿಯೊಬ್ಬರಿಗೆ ತಮ್ಮ ತಿಲಕ ಒರೆಸಲು ಹಿರಿಯ ಉದ್ಯೋಗಿ ರಶೀದ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಜಿತೇಶ್ ಶರ್ಮಾ ಎಂಬ ಸಹೋದ್ಯೋಗಿಗೆ ರಶೀದ್ ತನ್ನ ಹಣೆಯ ಮೇಲಿನ ಧಾರ್ಮಿಕ ಗುರುತು ತೆಗೆದು ಅಂಗಡಿಯೊಳಗೆ ಬಾ... ಇಲ್ಲದಿದ್ದರೆ ಕೆಲಸದಿಂದ ತೆಗೆಯುವುದಾಗಿ ಹೇಳಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆದ ನಂತರ ಹಿಂದೂ ಪರ ಸಂಘಟನೆಗಳನ್ನು ಕೆರಳಿವೆ.

ಅಂಗಡಿ ಮುಂದೆ ಜಮಾಯಿಸಿದ ಹಿಂದೂ ಕಾರ್ಯಕರ್ತರು ಸಿಬ್ಬಂದಿ ಜೊತೆ ವಾಗ್ವಾದ ನಡೆದಿದರು. ಈ ಕೂಡಲೇ ರಶೀದ್ ಕ್ಷಮೆಯಾಚಿಸಬೇಕು. ಅಲ್ಲದೆ ವ್ಯವಸ್ಥಾಪಕರು ರಶೀದ್ ಗೆ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು. ಯಾವುದೇ ಉದ್ಯೋಗಿ ತಮ್ಮ ಧರ್ಮವನ್ನು ಆಚರಿಸಿದ್ದಕ್ಕಾಗಿ ನಾಚಿಕೆಪಡಬಾರದು ಎಂದು ಒತ್ತಿ ಹೇಳಿದರು.

Rashid-Jithesh Sharma
ಪದೇಪದೇ ಮನೆ ಬಿಟ್ಟು ಓಡಿ ಹೋಗುತ್ತಿದ್ದ ಪತ್ನಿಗೆ ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿ ಕೈತೊಳೆದುಕೊಂಡ ಪತಿ; Video!

ಇನ್ನು ವಿಡಿಯೋ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಭಾರತ, ಮಧ್ಯಪ್ರಾಚ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಜಿತೇಶ್ ಶರ್ಮಾ ಈ ಬಗ್ಗೆ ಇನ್ನೂ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ. ಈ ಘಟನೆಯು ಕೆಲಸದ ಸ್ಥಳದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ವಿಶೇಷವಾಗಿ ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ನಂಬಿಕೆ ಆಧಾರಿತ ಅಭಿವ್ಯಕ್ತಿಗಳನ್ನು ಪಾಲಿಸುವ ಬದಲು ಗೌರವಿಸಬೇಕು ಎಂದು ಹಲವರು ಒತ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com