ಖಾಸಗಿ ಪೆಟ್ರೋಲ್ ಪಂಪ್‌ಗಳಲ್ಲಿ ಸಾರ್ವಜನಿಕ ಬಳಕೆಗೆ ಶೌಚಾಲಯ: ಕೇರಳ ಹೈಕೋರ್ಟ್ ನಕಾರ

ಗ್ರಾಹಕರ ತುರ್ತು ಅಗತ್ಯಗಳಿಗೆ ಮಳಿಗೆಗಳಲ್ಲಿ ತಾವು ನಿರ್ವಹಿಸುತ್ತಿರುವ ಖಾಸಗಿ ಶೌಚಾಲಯಗಳನ್ನು ಸಾರ್ವಜನಿಕರಿಗೆ ತೆರೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು.
Petrol bunk
ಪೆಟ್ರೋಲ್ ಬಂಕ್
Updated on

ಕೊಚ್ಚಿ: ಕೇರಳದಲ್ಲಿರುವ ಖಾಸಗಿ ಪೆಟ್ರೋಲಿಯಂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿನ ಶೌಚಾಲಯಗಳನ್ನು ಸಾರ್ವಜನಿಕ ಬಳಕೆಗೆ ತೆರೆಯುವುದನ್ನು ಕಡ್ಡಾಯಗೊಳಿಸಬಾರದು ಎಂದು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಆದೇಶ ನೀಡಿದೆ.

ರಾಜ್ಯದಲ್ಲಿ 300 ಚಿಲ್ಲರೆ ಮಾರಾಟ ಮಳಿಗೆಗಳ ವಿತರಕರ ಸಂಘವಾದ ಪೆಟ್ರೋಲಿಯಂ ವ್ಯಾಪಾರಿಗಳ ಕಲ್ಯಾಣ ಮತ್ತು ಕಾನೂನು ಸೇವಾ ಸಂಘವು ತಮ್ಮ ಖಾಸಗಿ ಶೌಚಾಲಯಗಳನ್ನು ಸಾರ್ವಜನಿಕ ಸೌಲಭ್ಯಗಳಾಗಿ ಪರಿವರ್ತಿಸುವ ಸರ್ಕಾರಿ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ಗ್ರಾಹಕರ ತುರ್ತು ಅಗತ್ಯಗಳಿಗೆ ಮಳಿಗೆಗಳಲ್ಲಿ ತಾವು ನಿರ್ವಹಿಸುತ್ತಿರುವ ಖಾಸಗಿ ಶೌಚಾಲಯಗಳನ್ನು ಸಾರ್ವಜನಿಕರಿಗೆ ತೆರೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು.

ತಿರುವನಂತಪುರ ನಿಗಮ ಮತ್ತು ಇತರ ಕೆಲವು ಸ್ಥಳೀಯ ಸಂಸ್ಥೆಗಳು ಶೌಚಾಲಯಗಳು ಸಾರ್ವಜನಿಕ ಶೌಚಾಲಯಗಳಾಗಿವೆ ಎಂಬ ಭಾವನೆ ಮೂಡಿಸಲು ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿವೆ ಎಂದು ಅವರು ಆರೋಪಿಸಿದರು.

ಹೆಚ್ಚಿನ ಅಪಾಯದ ವಲಯ ಎಂದು ವರ್ಗೀಕರಿಸಲಾದ ಖಾಸಗಿ ಪೆಟ್ರೋಲಿಯಂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿನ ಶೌಚಾಲಯಗಳನ್ನು ಸಾರ್ವಜನಿಕ ಬಳಕೆಗೆ ಪರಿಗಣಿಸುವುದರಿಂದ ಅನಧಿಕೃತ ಪ್ರವೇಶಕ್ಕೆ ಕಾರಣವಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಹೆಚ್ಚಿನ ಸಂಖ್ಯೆಯ ಜನರು ಚಿಲ್ಲರೆ ಮಾರಾಟ ಮಳಿಗೆಗಳನ್ನು ಅನಧಿಕೃತ ರೀತಿಯಲ್ಲಿ ಪ್ರವೇಶಿಸಿದಾಗ ಬೆಂಕಿ ಅವಘಡ ಮತ್ತು ಇತರ ವಿಪತ್ತು ಸಂಭವಿಸುವ ಸಾಧ್ಯತೆಗಳು ತುಂಬಾ ಹೆಚ್ಚಾಗಿವೆ ಎಂದು ವಾದಿಸಿದರು.

Petrol bunk
Viral Video: ಪೆಟ್ರೋಲ್ ಬಂಕ್ ನಲ್ಲಿ ಲಾರಿ ಡೀಸೆಲ್ ಟ್ಯಾಂಕ್ ಸ್ಫೋಟ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

ತಿರುವನಂತಪುರ ನಿಗಮದ ಸ್ಥಾಯಿ ವಕೀಲರಾದ ಸುಮನ್ ಚಕ್ರವರ್ತಿ ಅವರು, ಪೆಟ್ರೋಲ್ ಪಂಪ್‌ಗಳಲ್ಲಿ ಸಾರ್ವಜನಿಕರಿಗೆ ಅಚ್ಚುಕಟ್ಟಾಗಿ ಮತ್ತು ಸುರಕ್ಷಿತವಾದ ಶೌಚಾಲಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವುದು ಡೀಲರ್‌ಗಳ ಕರ್ತವ್ಯವಾಗಿದೆ. ಡೀಲರ್‌ಗಳು ಅದನ್ನು ಪಾಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಎಲ್ ಎಸ್ ಜಿ ಇಲಾಖೆಯ ಕರ್ತವ್ಯವಾಗಿದೆ ಎಂದು ವಾದಿಸಿದರು. 2013 ರಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಂತಹ ಮಳಿಗೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳು ಸಾರ್ವಜನಿಕರಿಗೆ 24/7 ಗಂಟೆಗಳ ಕಾಲ ಲಭ್ಯವಿರಬೇಕು ಎಂದು ಹೇಳುವ ಸುತ್ತೋಲೆಯನ್ನು ಹೊರಡಿಸಿತ್ತು.

ಇತ್ತೀಚೆಗೆ, ಪಟ್ಟಣಂತಿಟ್ಟದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು, ಪೆಟ್ರೋಲ್ ಪಂಪ್ ಮಾಲೀಕರಿಗೆ ಆವರಣದಲ್ಲಿ ಶೌಚಾಲಯವನ್ನು ಬಳಸಲು ಬಿಡದ ಶಿಕ್ಷಕಿಗೆ ಪರಿಹಾರವಾಗಿ 1.65 ಲಕ್ಷ ರೂಪಾಯಿಗಳನ್ನು ಪಾವತಿಸಲು ಆದೇಶಿಸಿತ್ತು. ಪಟ್ಟಣಂತಿಟ್ಟದ ಎಝಕುಲಂ ನಿವಾಸಿ ಸಿ ಎ ಜಯಕುಮಾರಿ ಅವರು ಕೋಝಿಕ್ಕೋಡ್‌ನ ಪಯೋಲಿಯಲ್ಲಿರುವ ಇಂಧನ ತುಂಬುವ ಕೇಂದ್ರದ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com