
ನವದೆಹಲಿ: ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ನೀಡಿರುವ ಏರ್ ಇಂಡಿಯಾ ಶುಕ್ರವಾರ ಕನಿಷ್ಠ ಎಂಟು ಅಂತರರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ.
ಜೂನ್ 12 ರಂದು 270 ಜನರ ಸಾವಿಗೆ ಕಾರಣವಾದ ಡ್ರೀಮ್ಲೈನರ್ನ ವಿಮಾನ ಅಪಘಾತದ ನಂತರ ನಿಯಂತ್ರಕ ಪರಿಶೀಲನೆ ಮತ್ತು ನಡೆಯುತ್ತಿರುವ ಸುರಕ್ಷತಾ ಪರಿಶೀಲನೆಗಳ ಹಿನ್ನೆಲೆಯಲ್ಲಿ ಈ ವಿಮಾನಗಳ ಹಾರಾಟ ರದ್ದಾಗಿದೆ.
ಅಂತರರಾಷ್ಟ್ರೀಯ ವಿಮಾನ
AI906 (ದುಬೈ-ಚೆನ್ನೈ)
AI308 (ದೆಹಲಿ-ಮೆಲ್ಬೋರ್ನ್)
AI309 (ಮೆಲ್ಬೋರ್ನ್-ದೆಹಲಿ)
AI2204 (ದುಬೈ-ಹೈದರಾಬಾದ್)
ದೇಶೀಯ ವಿಮಾನ
AI874 (ಪುಣೆ-ದೆಹಲಿಗೆ)
AI456 (ಅಹಮದಾಬಾದ್-ದೆಹಲಿಗೆ)
AI2872 (ಹೈದರಾಬಾದ್-ಮುಂಬೈಗೆ)
AI571 (ಚೆನ್ನೈ-ಮುಂಬೈಗೆ)
ಈ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಂಡಿವೆ. ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಏರ್ ಇಂಡಿಯಾ ಕ್ಷಮೆಯಾಚಿಸಿದ್ದು, ವಿಮಾನಗಳು, ಉಚಿತ ಮರು-ವೇಳಾಪಟ್ಟಿ ಮತ್ತು ಪೂರ್ಣ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸುತ್ತಿದೆ ಎಂದು ಹೇಳಿದೆ.
ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಅರಿಯಲು http://airindia.com/in/en/manage/flight-status.html ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಅಥವಾ 011 69329333, 011 69329999 ಈ ಗ್ರಾಹಕ ಸೇವಾ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. http://airindia.com ಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದೆ.
ಇದಕ್ಕೂ ಮೊದಲು, ಏರ್ ಇಂಡಿಯಾ ತನ್ನ ವೈಡ್-ಬಾಡಿ ವಿಮಾನಗಳ ಹಾರಾಟದಲ್ಲಿ ಶೇಕಡಾ 15 ರಷ್ಟು ಕಡಿತವನ್ನು ಘೋಷಿಸಿತ್ತು.
Advertisement