
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ತನ್ನ ಶೀಥ ವಾತಾವರಣದಿಂದಲೇ ಖ್ಯಾತಿ ಗಳಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಶಾಖದ ಅಲೆ ಆವರಿಸಿದ್ದು ಜೂನ್ ತಿಂಗಳಲ್ಲಿ ಗರಿಷ್ಛ ತಾಪಮಾನ ದಾಖಲಾಗಿದೆ.
ಕಾಶ್ಮೀರವನ್ನು ಆವರಿಸಿರುವ ಶಾಖದ ಅಲೆಯು ದಾಖಲೆಯ ವೇಗದಲ್ಲಿದ್ದು, ಗುರುವಾರ ಶ್ರೀನಗರ ಸೇರಿದಂತೆ ಕಣಿವೆಯ ಹಲವಾರು ಭಾಗಗಳಲ್ಲಿ ಗರಿಷ್ಟ ತಾಪಮಾನ ದಾಖಲಾಗಿದೆ. ಶ್ರೀನಗರದಲ್ಲಿ ಗುರುವಾರ ಗರಿಷ್ಛ 35.2 ತಾಪಮಾನ ದಾಖಲಾಗಿದ್ದು, ಇದು ಕಳೆದ 20 ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ದಾಖಲಾದ ಅತ್ಯಂತ ಗರಿಷ್ಛ ತಾಪಮಾನ ಎಂದು ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಶ್ರೀನಗರದಲ್ಲಿ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಕಳೆದ 20 ವರ್ಷಗಳಲ್ಲಿ ಜೂನ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ತಾಪಮಾನವಾಗಿದೆ. ಅಂತೆಯೇ ಋತುಮಾನದ ಸರಾಸರಿಗಿಂತ ಏಳು ಡಿಗ್ರಿ ಹೆಚ್ಚಾಗಿದೆ.
ಶ್ರೀನಗರದಲ್ಲಿ ಜೂನ್‌ನಲ್ಲಿ ಅತಿ ಹೆಚ್ಚು ತಾಪಮಾನವು ಜೂನ್ 25, 2005 ರಂದು ದಾಖಲಾಗಿತ್ತು, ಆಗ ತಾಪಮಾನ 36.5 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಇದನ್ನು ಹೊರತು ಪಡಿಸಿದರೆ ನಿನ್ನೆ ಗರಿಷ್ಛ ಪ್ರಮಾಣದ ತಾಪಮಾನ ದಾಖಲಾಗಿದೆ.
ಕುಲ್ಗಮ್ ಜಿಲ್ಲೆಯ ಕಾಶ್ಮೀರದ ಹೆಬ್ಬಾಗಿಲು ಪಟ್ಟಣವಾದ ಖಾಜಿಗುಂಡ್‌ನಲ್ಲಿ 37 ವರ್ಷಗಳಲ್ಲಿ ಅತ್ಯಂತ ಬಿಸಿಯಾದ ದಿನ ದಾಖಲಾಗಿದ್ದು, ಇಲ್ಲಿ ತಾಪಮಾನ 34.7 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು ಎಂದು IMD ದತ್ತಾಂಶ ತೋರಿಸಿದೆ. ಈ ಹಿಂದೆ ಜೂನ್ 26, 1988 ರಂದು, ಖಾಜಿಗುಂಡ್‌ನಲ್ಲಿ ಗರಿಷ್ಠ 35.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಅಂತೆಯೇ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಜೂನ್ 25, 2005 ರಂದು 34.9 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ನಂತರ ಜೂನ್‌ನಲ್ಲಿ ಎರಡನೇ ಅತ್ಯಂತ ಬಿಸಿಯಾದ ದಿನ 33.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ದತ್ತಾಂಶ ತಿಳಿಸಿದೆ.
ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಪ್ರವಾಸಿ ತಾಣ ಗುರುವಾರ ಕಣಿವೆಯಲ್ಲಿ ಅತ್ಯಂತ ತಂಪಾಗಿದ್ದು, ಗರಿಷ್ಠ ತಾಪಮಾನವು 25.9 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುವಿನ ಸರಾಸರಿಗಿಂತ 3.5 ಡಿಗ್ರಿ ಹೆಚ್ಚಾಗಿದೆ.
ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ಪಹಲ್ಗಾಮ್ ಕಣಿವೆಯಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಗರಿಷ್ಠ ತಾಪಮಾನವನ್ನು 29.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಿಸಿದ ಏಕೈಕ ಸ್ಥಳವಾಗಿದೆ, ಇದು ಋತುವಿನ ಸರಾಸರಿಗಿಂತ 5.5 ಡಿಗ್ರಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ದತ್ತಾಂಶ ತೋರಿಸಿದೆ.
Advertisement