ವಯನಾಡು: ಚೂರಲ್ಮಾಲಾದಲ್ಲಿ ಭಾರಿ ಮಳೆ; ಮತ್ತೆ ಪ್ರವಾಹ, ಭೂಕುಸಿತದ ಭೀತಿ!

ಚೂರಲ್ಮಲಾ ನದಿಯು ಉಕ್ಕಿ ಹರಿಯುತ್ತಿದ್ದು, ಕೆಸರಿನ ನೀರಿನೊಂದಿಗೆ ಬೈಲಿ ಸೇತುವೆ ಮೇಲೆ ಹರಿಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಬುಧವಾರ ವರದಿ ಮಾಡಿದ್ದಾರೆ
Punchirimattam inside forested areas
ಪಂಚಿರಿಮಟ್ಟಂ ಬಳಿಯ ಅರಣ್ಯ ಪ್ರದೇಶ
Updated on

ವಯನಾಡು: ಕಳೆದ ವರ್ಷ 200ಕ್ಕೂ ಹೆಚ್ಚು ಜನರು ಮೃತಪಟ್ಟು, ನೂರಾರು ಮಂದಿ ನಿರಾಶ್ರಿತರಾಗಿದ್ದ ಕೇರಳದ ವಯನಾಡಿನ ಮುಂಡಕ್ಕೈ, ಚೂರಲ್ಮಾಲಾ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಭಾರಿಯೂ ಪ್ರವಾಹ, ಭೂಕುಸಿತದ ಭೀತಿ ಎದುರಾಗಿದೆ.

ಚೂರಲ್ಮಲಾ ನದಿಯು ಉಕ್ಕಿ ಹರಿಯುತ್ತಿದ್ದು, ಕೆಸರಿನ ನೀರಿನೊಂದಿಗೆ ಬೈಲಿ ಸೇತುವೆ ಮೇಲೆ ಹರಿಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಬುಧವಾರ ವರದಿ ಮಾಡಿದ್ದಾರೆ. ನವೀಕರಣ ಕಾರ್ಯಕ್ಕಾಗಿ ನದಿಯ ಎರಡೂ ದಡಗಳಲ್ಲಿ ಸಂಗ್ರಹಿಸಲಾಗಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಅಟ್ಟಮಲ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಹರಿಯುತ್ತಿದೆ.

ಬೆಟ್ಟಗಳಲ್ಲಿ ಮತ್ತೆ ಭೂಕುಸಿತಗಳು ಸಂಭವಿಸಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ, ಇದುವರೆಗೆ ಯಾವುದೇ ದೃಢೀಕರಣ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಪುಂಚಿರಿಮಟ್ಟಂ ಬೆಟ್ಟದ ಅರಣ್ಯದೊಳಗೆ ಮತ್ತೆ ಭೂಕುಸಿತ ಸಂಭವಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ತಿಳಿಸಿದೆ. ಜುಲೈ 2024 ರಲ್ಲಿ ಸಂಭವಿಸಿದ ಭೂ ಕುಸಿತದಿಂದ ಮನೆ, ಮಠ ಕಳೆದುಕೊಂಡು ನೂರಾರು ಮಂದಿ ನಿರಾಶ್ರಿತರಾಗಿದ್ದರು.

Punchirimattam inside forested areas
ರಾಜ್ಯ ಸರ್ಕಾರದ ವತಿಯಿಂದ ವಯನಾಡು ಸಂತ್ರಸ್ತರಿಗೆ 100 ಮನೆಗಳ ನಿರ್ಮಾಣ: ಸಿದ್ದರಾಮಯ್ಯ

ಈ ಬಾರಿಯೂ ಅದೇ ರೀತಿ ಆಗಬಹುದೆಂಬ ಭೀತಿ ಸ್ಥಳೀಯ ಜನರಲ್ಲಿ ಮನೆ ಮಾಡಿದೆ. ಗುಡ್ಡಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com