
ಜೈಪುರ: ಹಾವು ಕಡಿತಕ್ಕೊಳಗಾದ ವ್ಯಕ್ತಿಯೋರ್ವ ತನಗೆ ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡುವಂತೆ ಕೇಳಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ರಾಜಸ್ತಾನದ ಜೈಪುರ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ತನಗೆ ಕಚ್ಚಿದ ಹಾವನ್ನು ಹಿಡಿದು ಅದನ್ನು ಆಸ್ರತ್ರೆಗೆ ತಂದು ನನಗೆ ಹಾವು ಕಚ್ಚಿದೆ ಚಿಕಿತ್ಸೆ ಕೊಡಿ ಎಂದು ಕೇಳಿದ್ದಾನೆ.
ಜೈಪುರದ RUHS ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹಾವು ಕಚ್ಚಿದ ನಂತರ ಚಿಕಿತ್ಸೆಗಾಗಿ ಯುವಕನೊಬ್ಬ ಹಾವಿನ ಸಮೇತ ಆಸ್ಪತ್ರೆಗೆ ಬಂದಿದ್ದಾನೆ. ವ್ಯಕ್ತಿ ತನ್ನ ಬ್ಯಾಗ್ ನಿಂದ ಜೀವಂತ ಹಾವೊಂದನ್ನು ಹೊರಗೆ ತೆಗೆಯುತ್ತಲೇ ಅಲ್ಲಿದ್ದ ಜನ ಕಕ್ಕಾಬಿಕ್ಕಿಯಾಗಿದ್ದಾರೆ.
ವ್ಯಕ್ತಿಯ ಈ ವರ್ತನೆ ಆಸ್ಪತ್ರೆಯಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿತು. ವೈದ್ಯರು ಬೆಚ್ಚಿ ಬಿದ್ದರೆ, ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ರೋಗಿಗಳು ಕೂಡ ಕೆಲಕಾಲ ಆತಂಕಕ್ಕೀಡಾದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾತನಾಡಿದ RUHS ಸೂಪರಿಂಟೆಂಡೆಂಟ್ ಡಾ. ಮಹೇಶ್ ಮಂಗಲ್ ಮಾತನಾಡಿ, 'ಇದು 4-5 ದಿನಗಳ ಹಿಂದಿನ ಘಟನೆಯಾಗಿದ್ದು, ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. ರೋಗಿಯು ಈಗ ಆರೋಗ್ಯವಾಗಿದ್ದಾರೆ. ಸಾಮಾನ್ಯವಾಗಿ ಹಾವು ಕಡಿತ ಪ್ರಕರಣಗಳಲ್ಲಿ ಹಾವುಗಳ ಜಾತಿ ಅಥವಾ ಪ್ರಬೇಧ ಮುಖ್ಯಮುವಾಗುತ್ತದೆ.
ಹೀಗಾಗಿ ವೈದ್ಯರು ಯಾವ ಹಾವು ಕಚ್ಚಿತು ಎಂದು ಕೇಳುತ್ತಾರೆ. ಹೀಗಾಗಿ ಜನ ಸತ್ತ ಹಾವುಗಳನ್ನು ತರುತ್ತಾರೆ, ಆದರೆ ಈ ಪ್ರಕರಣ ವಿಭಿನ್ನವಾಗಿತ್ತು. ರೋಗಿಯು ಜೀವಂತ ಹಾವಿನೊಂದಿಗೆ ಆಸ್ಪತ್ರೆಗೆ ಬಂದಿದ್ದ ಎಂದು ಹೇಳಿದ್ದಾರೆ.
ಸಿಬ್ಬಂದಿ ಸದಸ್ಯರು ಪರಿಸ್ಥಿತಿಯನ್ನು ನಿಭಾಯಿಸಿದರು ಮತ್ತು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರು. ನಂತರ ಅವರ ಕುಟುಂಬ ಸದಸ್ಯರು ಹಾವನ್ನು ತೆಗೆದುಕೊಂಡು ಹೋಗಿದ್ದಾರೆ. ಹಾವು ವಿಷಕಾರಿಯೇ ಅಥವಾ ಇಲ್ಲವೇ ಎಂದು ಗುರುತಿಸಲು ಮತ್ತು ಅದು ವಿಷಕಾರಿಯೇ ಎಂದು ನಾವು ಹೇಳಲು ಸಾಧ್ಯವಾಯಿತು ಎಂದು ಮತ್ತೋರ್ವ ವೈದ್ಯಾಧಿಕಾರಿ ಹೇಳಿದ್ದಾರೆ.
ಇದೇ ಮೊದಲೇನಲ್ಲ..
ಇನ್ನು ಕಚ್ಚಿದ ಹಾವನ್ನು ಹಿಡಿದು ಆಸ್ಪತ್ರೆಗೆ ತರುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಕಳೆದ ವರ್ಷ ಬಿಹಾರದ ಭಾಗಲ್ಪುರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು, ಒಬ್ಬ ವ್ಯಕ್ತಿ ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ ವೈಪರ್‌ನೊಂದಿಗೆ ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದ.
ಬಳಿಕ ಪ್ರಕಾಶ್ ಮಂಡಲ್ ಎಂಬ ಆ ವ್ಯಕ್ತಿ ಹಾವನ್ನು ಬಾಯಿಯಿಂದ ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಆಸ್ಪತ್ರೆಗೆ ಹೋದನು, ಇದರಿಂದ ವೈದ್ಯರು ಮತ್ತು ರೋಗಿಗಳು ದಿಗ್ಭ್ರಮೆಗೊಂಡರು. ಚಿಕಿತ್ಸೆಗಾಗಿ ಕರೆದೊಯ್ಯುವಾಗಲೂ, ಅವರು ಹಾವನ್ನು ಬಿಡಲು ನಿರಾಕರಿಸಿದರು. ಸರೀಸೃಪವನ್ನು ಬಿಡುವವರೆಗೆ ಚಿಕಿತ್ಸೆ ನೀಡುವುದು ಕಷ್ಟ ಎಂದು ಹೇಳಿದಾಗ ಮಾತ್ರ ಮಂಡಲ್ ಒಪ್ಪಿಕೊಂಡಿದ್ದರು.
Advertisement