
ನವದೆಹಲಿ: ಮಹಾರಾಷ್ಟ್ರ ಮತದಾರರ ಪಟ್ಟಿಯ ಮೆಷಿನ್-ರೀಡೆಬಲ್ ಡಿಜಿಟಲ್ ಪ್ರತಿ ಒದಗಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ಚುನಾವಣಾ ಆಯೋಗ ಗುರುವಾರ ತಿರಸ್ಕರಿಸಿದೆ.
ಚಾಲ್ತಿಯಲ್ಲಿರುವ ಕಾನೂನು ಚೌಕಟ್ಟಿನ ಅಡಿಯಲ್ಲಿ ಕಾಂಗ್ರೆಸ್ ನ ಈ ಬೇಡಿಕೆ "ಸಮರ್ಥನೀಯವಲ್ಲ" ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷದ ಇದೇ ರೀತಿಯ ಅರ್ಜಿಯನ್ನು 2019 ರಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ಏಳು ತಿಂಗಳಿನಿಂದ ಮತದಾರರ ಪಟ್ಟಿಯ ಮೆಷಿನ್-ರೀಡೆಬಲ್ ಡಿಜಿಟಲ್ ಪ್ರತಿ ಕೇಳುತ್ತಿದ್ದರೂ, ಕಾಂಗ್ರೆಸ್‌ನ ಅಂತಹ ಬೇಡಿಕೆ "ಹೊಸದಲ್ಲ" ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
"ಮೆಷಿನ್-ರೀಡೆಬಲ್ ಡಿಜಿಟಲ್ ಪ್ರತಿ ನೀಡುವ ಬದಲು, ಇದು ಎಂಟು ವರ್ಷಗಳಿಗೂ ಹೆಚ್ಚು ಕಾಲದಿಂದ ರಾಜಕೀಯ ಪಕ್ಷದ ಕಾರ್ಯತಂತ್ರದ ಭಾಗವಾಗಿದೆ. ರಾಹುಲ್ ಗಾಂಧಿಯವರ ಈ ಬೇಡಿಕೆಯು, ಕಾಂಗ್ರೆಸ್ ಐತಿಹಾಸಿಕವಾಗಿ ನಿರ್ವಹಿಸುತ್ತಿರುವ ನಿಲುವಿಗೆ ಅನುಗುಣವಾಗಿದ್ದರೂ, "ಪ್ರಸ್ತುತ ಕಾನೂನು ಚೌಕಟ್ಟಿನೊಳಗೆ ಇದು ಸಮರ್ಥನೀಯವಲ್ಲ" ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
2018 ರಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಕಮಲ್ ನಾಥ್ ಅವರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮುಂದೆ ಈ ವಿಷಯವನ್ನು ಈಗಾಗಲೇ ಪ್ರಸ್ತಾಪಿಸಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ “ಮತ ಕಳ್ಳತನ” ನಡೆದಿದ್ದು, ಇದನ್ನು ಚುನಾವಣಾ ಆಯೋಗವು “ಮುಚ್ಚಿ ಹಾಕುತ್ತಿದೆ”. ಆಯೋಗವು ಚುನಾವಣೆಗೆ ಸಂಬಂಧಿಸಿದ ಮೆಷಿನ್-ರೀಡೆಬಲ್ ಡಿಜಿಟಲ್ ಮತದಾರರ ಪ್ರತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನಿನ್ನೆ ಎಕ್ಸ್ ನಲ್ಲಿ ಆಗ್ರಹಿಸಿದ್ದರು.
ಆದರೆ ಚುನಾವಣಾ ಆಯೋಗವು ಇತ್ತೀಚೆಗೆ ಮತದಾರರ ಪಟ್ಟಿಗಳ ಸಿದ್ಧಪಡಿಸಿರುವುದನ್ನು ಸಮರ್ಥಿಸುತ್ತಾ, ಗೌಪ್ಯತೆಯ ಕಾಳಜಿಗಳನ್ನು ಉಲ್ಲೇಖಿಸಿ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲು ನಿರಾಕರಿಸಿದೆ.
Advertisement