
ನವದೆಹಲಿ: ನ್ಯೂಯಾರ್ಕ್ ನ ಮೇಯರ್ ಚುನಾವಣೆಯಲ್ಲಿ ಬಹುತೇಕ ಗೆಲುವು ಸಾಧಿಸಿರುವ ಜೋಹ್ರಾನ್ ಮಾಮ್ದಿನಿ (Zohran Mamdani) ಬಗ್ಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಕ ಭಾರತದಲ್ಲೂ ಜೋಹ್ರಾನ್ ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.
ಜೋಹ್ರಾನ್ ಗೆಲುವಿನ ಸನಿಹದಲ್ಲಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಮನು ಸಿಂಘ್ವಿ, ಜೋಹ್ರಾನ್ ಬಾಯಿ ಬಿಟ್ಟರೆ, ಪಾಕಿಸ್ತಾನದ ಸಾರ್ವಜನಿಕ ಸಂಪರ್ಕ ವ್ಯವಸ್ಥೆ (PR) ಕೆಲಸ ಮಾಡುವ ಅಗತ್ಯವೇ ಇರುವುದಿಲ್ಲ ಅಷ್ಟರ ಮಟ್ಟಿಗೆ ಜೋಹ್ರಾನ್ ಪಾಕ್ ಪರ ನಿಲುವು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಭಾರತಕ್ಕೆ ಮಿತ್ರರೊಂದಿಗೆ (ಅಮೆರಿಕ) ಇಂಥಹ ಶತ್ರುಗಳು ಇರುವುದು ಬೇಕಿಲ್ಲ ಎಂದು ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಮ್ದಾನಿಯನ್ನು "ಹುಚ್ಚ" ಎಂದು ಟೀಕಿಸಿದ ನಂತರ ಕಾಂಗ್ರೆಸ್ ನಾಯಕರ ಕಟು ಟೀಕೆ ಬಂದಿದ್ದು, ಡೆಮೋಕ್ರಾಟ್ "ಗೆರೆ ದಾಟಿದ್ದಾರೆ" ಎಂದು ಪ್ರತಿಪಾದಿಸಿದ್ದಾರೆ.
"ಅದು ಕೊನೆಗೂ ಸಂಭವಿಸಿದೆ, ಡೆಮೋಕ್ರಾಟ್‌ಗಳು ಗೆರೆ ದಾಟಿದ್ದಾರೆ. 100% ಕಮ್ಯುನಿಸ್ಟ್ ಹುಚ್ಚರಾದ ಜೋಹ್ರಾನ್ ಮಮ್ದಾನಿ ಡೆಮ್ ಪ್ರೈಮರಿಯಲ್ಲಿ ಗೆದ್ದಿದ್ದಾರೆ ಮತ್ತು ಮೇಯರ್ ಆಗುವ ಹಾದಿಯಲ್ಲಿದ್ದಾರೆ. ನಮಗೆ ಮೊದಲು ತೀವ್ರಗಾಮಿ ಎಡಪಂಥೀಯರು ಇದ್ದರು, ಆದರೆ ಇದು ಸ್ವಲ್ಪ ಹಾಸ್ಯಾಸ್ಪದವಾಗುತ್ತಿದೆ" ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮಮ್ದಾನಿ ಭಾರತೀಯ-ಅಮೆರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ಮಾರ್ಕ್ಸ್ ವಾದಿ ಮಹಮೂದ್ ಮಮ್ದಾನಿ ಅವರ ಪುತ್ರ. ಇತ್ತೀಚೆಗೆ ನಡೆದ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಅವರು ಶೇಕಡಾ 43.5 ರಷ್ಟು ಮತಗಳನ್ನು ಗಳಿಸಿದ್ದಾರೆ. ಕ್ಯುಮೊ ಅವರನ್ನು ಸೋಲಿಸಿ ನ್ಯೂಯಾರ್ಕ್ ನಗರದ ಸಂಭಾವ್ಯ ಮುಂದಿನ ಮೇಯರ್ ಮತ್ತು ನಗರದ ಮೊದಲ ಮುಸ್ಲಿಂ ಮೇಯರ್ ಆಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ನ್ಯೂಯಾರ್ಕ್ ರಾಜ್ಯ ವಿಧಾನಸಭೆಯ ಸದಸ್ಯರಾಗಿರುವ ಮಮ್ದಾನಿಯನ್ನು ಡೆಮಾಕ್ರಟಿಕ್ ಪಕ್ಷ ಬೆಂಬಲಿಸುತ್ತದೆ. ಅವರ ಎಡಪಂಥೀಯ ಸಂಬಂಧ, ಪ್ಯಾಲೆಸ್ಟೈನ್ ಪರ ಮತ್ತು ಇಸ್ರೇಲ್ ವಿರೋಧಿ ದೃಷ್ಟಿಕೋನಗಳೊಂದಿಗೆ ಸೇರಿಕೊಂಡು, ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯವನ್ನುಂಟುಮಾಡಿದೆ.
Advertisement