ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ; ಬೆಂಬಲಿಗರ ವರ್ತನೆ 'ದುರಾದೃಷ್ಟಕರ'; BJP ಶಾಸಕ ರಾಜೀವ್ ಸಿಂಗ್

ದೆಹಲಿಯಿಂದ ಝಾನ್ಸಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದೆ. ಈ ವೇಳೆ ಕುಟುಂಬವು ಒಟ್ಟಿಗೆ ಕುಳಿತುಕೊಳ್ಳಲು ಆಸನಗಳನ್ನು ಬದಲಾಯಿಸಲು ಪ್ರಯಾಣಿಕರೊಬ್ಬರ ಬಳಿ ಮನವಿ ಮಾಡಿಕೊಳ್ಳಲಾಗಿತ್ತು.
The altercation occurred on June 19 on the Delhi-Bhopal Vande Bharat Express, allegedly over changing seats and objectionable sitting posture inside the train.
ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿನಿಗೆ ಹಿಗ್ಗಾಮುಗ್ಗಾ ಥಳಿತ
Updated on

ಝಾನ್ಸಿ: ಮೇ 19 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿಯ ಬಬಿನಾ ಶಾಸಕ ರಾಜೀವ್ ಸಿಂಗ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.

ಘಟನೆ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು, ದೆಹಲಿಯಿಂದ ಝಾನ್ಸಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಯಾಣ ನಡೆಸಲಾಗುತ್ತಿದ್ದು. ಈ ವೇಳೆ ಕುಟುಂಬವು ಒಟ್ಟಿಗೆ ಕುಳಿತುಕೊಳ್ಳಲು ಆಸನಗಳನ್ನು ಬದಲಾಯಿಸಲು ಪ್ರಯಾಣಿಕರೊಬ್ಬರ ಬಳಿ ಮನವಿ ಮಾಡಿಕೊಳ್ಳಲಾಗಿತ್ತು.

ಈ ವೇಳೆ ಪ್ರಯಾಣಿಕ ಹಾಗೂ ಆತನ ಜೊತೆಗಿದ್ದವರು ಅಸಭ್ಯವಾಗಿ ಪ್ರತಿಕ್ರಿಯಿಸಿದ್ದರು. ಹಾಗೂ ಬೆದರಿಕೆಯನ್ನೂ ಹಾಕಿದ್ದರು. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಕೂಡ ಇದೆ ಎಂದು ಹೇಳಿದರು.

ನನ್ನ ಬೆಂಬಲಿಗರು ಅತಿಯಾದ ಉದ್ರೇಕದಿಂದ ನಡೆದುಕೊಂಡಿದ್ದು, ಬೆಂಬಲಿಗರ ವರ್ತನೆಯನ್ನು ನಾನು ಬೆಂಬಲಿಸುವುದಿಲ್ಲ. ಇದು ದುರಾದೃಷ್ಟಕರ ಸಂಗತಿ. ಘಟನೆ ಬಳಿಕ ನಾನು ಪ್ರಯಾಣಿಕನ ಬಳಿ ಕ್ಷಮೆಯಾಚಿಸಿದ್ದೇನೆ. ಅವರೂ ಕೂಡ ಕ್ಷಮೆಯನ್ನು ಒಪ್ಪಿಕೊಂಡಿದ್ದಾರೆ. ತಪ್ಪು ತಿಳುವಳಿಕೆಯಿಂದ ಹೀಗಾಗಿಗೆ ಎಂದು ಆತ ಕೂಡ ಹೇಳಿದ್ದಾರೆಂದು ತಿಳಿಸಿದ್ದಾರೆ.

ಈ ನಡುವೆ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶುಕ್ಲಾ ಅವರು ರಾಜೀವ್ ಸಿಂಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ಕೃತ್ಯ ಗಂಭೀರ ಅಶಿಸ್ತಿನ ಅಡಿಯಲ್ಲಿ ಬರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದ್ದು, 7 ದಿನಗಳ ಒಳಗೆ ಲಿಖಿತ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.

The altercation occurred on June 19 on the Delhi-Bhopal Vande Bharat Express, allegedly over changing seats and objectionable sitting posture inside the train.
'ವಂದೇ ಭಾರತ್' ರೈಲಿನಲ್ಲಿ BJP ಶಾಸಕನಿಗೆ ಸೀಟು ಬಿಡಲು ನಕಾರ: ಮೂಗಿನಲ್ಲಿ ರಕ್ತ ಬರುವಂತೆ ಪ್ರಯಾಣಿಕನಿಗೆ ಥಳಿತ! Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com